ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಅಪಾಯದಲ್ಲಿರುವ ದೇಶಗಳಿಂದ ಆಗಮಿಸಿದ ಆರು ಮಂದಿಗೆ ಕೊರೊನಾವೈರಸ್

|
Google Oneindia Kannada News

ನವದೆಹಲಿ, ಡಿಸೆಂಬರ್ 2: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಆರು ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ಮೊದಲ ದಿನ, ಓಮಿಕ್ರಾನ್ ಅಪಾಯದಲ್ಲಿರುವ ರಾಷ್ಟ್ರಗಳಿಂದ ಆಗಮಿಸಿದ ಒಟ್ಟು 3,000 ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಆರು ಪ್ರಯಾಣಿಕರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಸೋಂಕಿತರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ತಪಾಸಣೆಗೆ ರವಾನಿಸಲಾಗಿದ್ದು, ಅವರಲ್ಲಿ ಕಂಡು ಬಂದಿರುವುದು ಓಮಿಕ್ರಾನ್ ರೂಪಾಂತರ ರೋಗಾಣು ಹೌದು ಅಲ್ಲವೋ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.

ಜಗತ್ತಿನ 20 ರಾಷ್ಟ್ರಗಳಿಗೆ ಹರಡಿದೆಯಾ ಓಮಿಕ್ರಾನ್ ರೂಪಾಂತರ ವೈರಸ್!?ಜಗತ್ತಿನ 20 ರಾಷ್ಟ್ರಗಳಿಗೆ ಹರಡಿದೆಯಾ ಓಮಿಕ್ರಾನ್ ರೂಪಾಂತರ ವೈರಸ್!?

ಬುಧವಾರ ಮಧ್ಯಾಹ್ನ 4 ಗಂಟೆವರೆಗೆ ಓಮಿಕ್ರಾನ್ ಅಪಾಯದಲ್ಲಿರುವ ರಾಷ್ಟ್ರಗಳಿಂದ ಒಟ್ಟು 11 ವಿಮಾನಗಳು ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್ ಆಗಿವೆ. 11 ವಿಮಾನಗಳಲ್ಲಿ ಆಗಮಿಸಿದ ಒಟ್ಟು 3,476 ಪ್ರಯಾಣಿಕರನ್ನು RT-PCR ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಆರು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇದು ಹೊಸ ಆತಂಕವನ್ನು ಸೃಷ್ಟಿಸಿದ್ದು, ಈ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ದೆಹಲಿಯಲ್ಲೇ ನಾಲ್ವರಿಗೆ ಕೊರೊನಾವೈರಸ್ ಪಾಸಿಟಿವ್

ದೆಹಲಿಯಲ್ಲೇ ನಾಲ್ವರಿಗೆ ಕೊರೊನಾವೈರಸ್ ಪಾಸಿಟಿವ್

ಬುಧವಾರ ಬೆಳಗ್ಗೆ ನೆದರ್ ಲ್ಯಾಂಡ್ ಮತ್ತು ಯುನೈಟೆಕ್ ಕಿಂಗ್ ಡಮ್ (ಯುಕೆ)ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಾಲ್ವರಲ್ಲಿ ಕೊವಿಡ್-19 ಸೋಂಕು ಪತ್ತೆಯಾಗಿದೆ. ಸೋಂಕಿತರಿಗೆ ಹೊಸ ರೂಪಾಂತರ ವೈರಸ್ ಓಮಿಕ್ರಾನ್ ಅಂಟಿಕೊಂಡಿದೆಯಾ ಎಂಬುದನ್ನು ಪತ್ತೆ ಮಾಡಲು ಎಲ್ಲರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ರವಾನಿಸಲಾಗಿದೆ. ಆರು ಪ್ರಯಾಣಿಕರೂ ಭಾರತೀಯ ಪ್ರಜೆಗಳಾಗಿದ್ದು, ದೆಹಲಿಯ ಎಲ್ಎನ್ ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋವಿಡ್-19 ಪಾಸಿಟಿವ್ ಪ್ರಯಾಣಿಕರ ಮಾದರಿಗಳನ್ನು ಸಂಪೂರ್ಣ ಜೀನೋಮಿಕ್ ಸೀಕ್ವೆನ್ಸಿಂಗ್‌ಗಾಗಿ INSACOG ಲ್ಯಾಬ್‌ಗಳಿಗೆ ಕಳುಹಿಸಲಾಗಿದೆ. ದೇಶದಲ್ಲಿನ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತದಲ್ಲಿ "ಇಡೀ ಸರ್ಕಾರದ" ಕಾರ್ಯ ವಿಧಾನದ ಮೂಲಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೆಂಬಲಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಇಂದೋರ್ ನಲ್ಲಿ 100 ವಿದೇಶಿ ಪ್ರಯಾಣಿಕರಿಗಾಗಿ ಹುಡುಕಾಟ

ಇಂದೋರ್ ನಲ್ಲಿ 100 ವಿದೇಶಿ ಪ್ರಯಾಣಿಕರಿಗಾಗಿ ಹುಡುಕಾಟ

ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಆರೋಗ್ಯ ಇಲಾಖೆ ಕಳೆದ ಒಂದು ತಿಂಗಳಿನಲ್ಲಿ ವಿದೇಶದಿಂದ ಹಿಂದಿರುಗಿದ 100 ಜನರಿಗಾಗಿ ಹುಡುಕಾಟ ನಡೆಸಿದೆ. "ಇಲ್ಲಿಯವರೆಗೆ, ನಾವು ಕಳೆದ ಒಂದು ತಿಂಗಳ ಅವಧಿಯಲ್ಲಿ ವಿದೇಶದಿಂದ ಇಂದೋರ್‌ಗೆ ಹಿಂದಿರುಗಿದ ಸುಮಾರು 150 ಜನರಲ್ಲಿ 50 ಜನರನ್ನು ಪತ್ತೆ ಹಚ್ಚಿದ್ದೇವೆ. ಪತ್ತೆಯಾದ 50 ವ್ಯಕ್ತಿಗಳ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ ಯಾರಿಗೂ ಕೋವಿಡ್ -19 ಸೋಂಕು ಪತ್ತೆಯಾಗಿಲ್ಲ, ಉಳಿದ 100 ಜನರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅವರ ಮಾದರಿಗಳನ್ನು ಸಹ ಸಂಗ್ರಹಿಸಿ ಪರೀಕ್ಷಿಸುತ್ತೇವೆ," ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (CMHO) ಡಾ.ಬಿ.ಎಸ್.ಸಾಯಿತ್ಯ ತಿಳಿಸಿದ್ದಾರೆ.

ಡಿ.1ರಿಂದ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಜಾರಿ

ಡಿ.1ರಿಂದ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಜಾರಿ

ಕೇಂದ್ರವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಡಿಸೆಂಬರ್ 1ರಿಂದಲೇ ಅದು ಜಾರಿಗೆ ಬಂದಿದೆ. ಹೊಸ ಕೋವಿಡ್ ತಳಿಯ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳಾಗಿ ಹೊಸ ನಿಯಮಗಳು ಅಗತ್ಯವಾಗಿವೆ. ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತೀವ್ರ ಪರೀಕ್ಷೆಗೆ ಒಳಪಡಿಸುವುದು, ಕೊವಿಡ್-19 ನೆಗೆಟಿವ್ ವರದಿ ಸಲ್ಲಿಸುವುದು, 14 ದಿನಗಳ ಪ್ರಯಾಣ ವಿವರವನ್ನು ಸಲ್ಲಿಸುವುದು, RT-PCR ಪರೀಕ್ಷೆ ನಂತರದ ನೆಗೆಟಿವ್ ವರದಿಯನ್ನು ಪ್ರಯಾಣ ಆರಂಭಕ್ಕೂ ಮೊದಲೇ ಏರ್ ಸುವಿಧ್ ಪೋರ್ಟಲ್ ನಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಓಮ್ರಿಕಾನ್ ರೂಪಾಂತರ ವೈರಸ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಹೆಚ್ಚಿನ ಪರೀಕ್ಷೆಗೊಳಪಡಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಮಹಾರಾಷ್ಟ್ರ ಸರ್ಕಾರದಿಂದ ಪ್ರಯಾಣಿಕರಿಗೆ ಮಾರ್ಗಸೂಚಿ

ಮಹಾರಾಷ್ಟ್ರ ಸರ್ಕಾರದಿಂದ ಪ್ರಯಾಣಿಕರಿಗೆ ಮಾರ್ಗಸೂಚಿ

'ಅಪಾಯದಲ್ಲಿರುವ ದೇಶಗಳಿಂದ' ಮುಂಬೈಗೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಮಹಾರಾಷ್ಟ್ರ ಸರ್ಕಾರವು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ಅನ್ನು ಘೋಷಿಸಿದೆ. ಅಲ್ಲದೆ, ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು 2, 4 ಮತ್ತು 7ರಂದು ನಡೆಸಲಾಗುವುದು. ಯಾವುದೇ ಪರೀಕ್ಷೆಯಲ್ಲಿ ಸೋಂಕಿನ ಪಾಸಿಟಿವ್ ವರದಿ ಬಂದರೆ, ಪ್ರಯಾಣಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ಮಹಾರಾಷ್ಟ್ರದೊಳಗೆ ಒಂದು ವಿಮಾನ ನಿಲ್ದಾಣದಿಂದ ಇನ್ನೊಂದು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿರಬೇಕು. ಅಥವಾ ಅವರು ಪ್ರಯಾಣ ಆರಂಭಿಸುವುದಕ್ಕೂ ಮೊದಲು 48 ಗಂಟೆಗಳ ಒಳಗೆ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಆದರೆ, ಇತರ ರಾಜ್ಯಗಳಿಂದ ಪ್ರಯಾಣಿಸುವ ಜನರು ಆಗಮಿಸಿದ 48 ಗಂಟೆಗಳ ಒಳಗೆ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಪಡೆದಿರಬೇಕು.

ಕರ್ನಾಟಕದಲ್ಲಿ ಕೊವಿಡ್-19 ಪರೀಕ್ಷೆಗೆ ಕಠಿಣ ನಿಯಮ

ಕರ್ನಾಟಕದಲ್ಲಿ ಕೊವಿಡ್-19 ಪರೀಕ್ಷೆಗೆ ಕಠಿಣ ನಿಯಮ

ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು RT-PCR ಪರೀಕ್ಷೆಗೆ ಒಳಗಾಗುವುದನ್ನು ಕರ್ನಾಟಕ ಸರ್ಕಾರವು ಕಡ್ಡಾಯಗೊಳಿಸಿದೆ. ಕೋವಿಡ್ -19 ಪಾಸಿಟಿವ್ ಬಂದ ಸೋಂಕಿತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದು, ಅದಾಗ್ಯೂ, ಕೋವಿಡ್-19ರ ಲಕ್ಷಣಗಳನ್ನು ಹೊಂದಿರುವವರು ಹೋಮ್ ಕ್ವಾರೆಂಟೈನ್ ನಲ್ಲಿ ಇರಬೇಕು, ಐದನೇ ದಿನ ಅಂಥವರು ಮತ್ತೊಮ್ಮೆ ಕೊರೊನಾವೈರಸ್ ಸೋಂಕಿನ ಪರೀಕ್ಷೆಗೆ ಒಳಗಾಗಬೇಕು.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಓಮಿಕ್ರಾನ್ ಭಯ

ವಿಶ್ವದ ಹಲವು ರಾಷ್ಟ್ರಗಳಲ್ಲಿ ಓಮಿಕ್ರಾನ್ ಭಯ

ಯುರೋಪಿಯನ್ ರಾಷ್ಟ್ರಗಳು ಪ್ರತಿವಾರ 20 ಲಕ್ಷಕ್ಕಿಂತ ಹೆಚ್ಚು ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿ ಮಾಡುತ್ತಿವೆ. ಇದು ಜಗತ್ತಿನಲ್ಲಿ ವರದಿಯಾಗುವ ಒಟ್ಟು ಪ್ರಕರಣಗಳ ಅರ್ಧಕ್ಕಿಂತ ಹೆಚ್ಚಾಗಿರುವುದು ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೊವಿಡ್-19 ಲಸಿಕೆ ಮತ್ತು ಸುಧಾರಿತ ಚಿಕಿತ್ಸೆಯಿಂದಾಗಿ ಸಾವಿನ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿದೆ. ಜರ್ಮನಿ, ನೆದರ್ ಲ್ಯಾಂಡ್, ಬೆಲ್ಜಿಯಂ, ಹಂಗೇರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ, ಡೆನ್ಮಾರ್ಕ್ ಮತ್ತು ನಾರ್ವೆಗಳಲ್ಲಿ ಕಳೆದ ವಾರ ಹೊಸ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆದಿದೆ. ಈ ಪೈಕಿ ಹಲವು ರಾಷ್ಟ್ರಗಳು ನವೆಂಬರ್‌ನಲ್ಲಿ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ. ಯುನೈಟೆಡ್ ಕಿಂಗ್ ಡಮ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ರಾಷ್ಟ್ರಗಳು ಇದೀಗ ಓಮಿಕ್ರಾನ್ ರೂಪಾಂತರದ ಭೀತಿಯನ್ನು ಎದುರಿಸುತ್ತಿವೆ.

Recommended Video

Omicron ಬಗ್ಗೆ ಜನರಿಗೆ ಎಷ್ಟು ಗೊತ್ತಿದೆ ? | Oneindia Kannada

English summary
Omicron News: Six Passengers from 'at-risk' countries test Covid positive on First Day of new rules Implement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X