ಓಮಿಕ್ರಾನ್ ಸಮುದಾಯಕ್ಕೆ ವೇಗವಾಗಿ ಹಬ್ಬುತ್ತಿದೆ; ಡಬ್ಲ್ಯುಎಚ್‌ಒ

ನವದೆಹಲಿ, ಡಿಸೆಂಬರ್ 19; ಕೋವಿಡ್ ರೂಪಾಂತರಿ ವೈರಸ್ ಸಮುದಾಯಕ್ಕೆ ಹಬ್ಬಿರುವ ದೇಶಗಳಲ್ಲಿ ಡೆಲ್ಟಾಗಿಂತ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 89 ದೇಶಗಳಲ್ಲಿ ಇದುವರೆಗೂ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ.

ಜಗತ್ತಿನಲ್ಲಿಯೇ ತಲ್ಲಣ ಉಂಟು ಮಾಡಿರುವ ಓಮಿಕ್ರಾನ್ ಕುರಿತು ಇತ್ತೀಚಿನ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಹೆಚ್ಚು ಓಮಿಕ್ರಾನ್ ಪ್ರಕರಣ ಪತ್ತೆಯಾಗಿರುವ ದೇಶಗಳಲ್ಲಿ 1.5 ರಿಂದ 3 ದಿನದಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ ಎಂದು ಹೇಳಿದೆ.

ಕೋವಿಡ್ ರೂಪಾಂತರಿ ವೈರಸ್ ಡೆಲ್ಟಾಗಿಂತ ವೇಗವಾಗಿ ಓಮಿಕ್ರಾನ್ ಹರಡುತ್ತಿದೆ. ಅಮೆರಿಕದಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆ ಶೇ 45ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

Omicron Doubling Every 3 Days In Places With Community Transmission Says WHO

ಕೊರೊನಾ ಹರಡದಂತೆ ತಡೆಯಲು ಈಗ ಇರುವ ಮಾರ್ಗಸೂಚಿಯ ಮೂಲಕವೇ ಓಮಿಕ್ರಾನ್ ಹರಡುವಿಕೆ ತಡೆಗಟ್ಟಬಹುದು. ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಕೆ ಮಾಡುವುದು, ಹೆಚ್ಚು ಜನರು ಸೇರುವ ಪ್ರದೇಶಗಳಿಗೆ ತೆರಳುವುದನ್ನು ತಡೆಯುವ ಮೂಲಕ ಜನರು ಜಾಗೃತವಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಕೇವಲ ಒಂದು ಡೋಸ್ ಲಸಿಕೆ ಪಡೆದವರಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ನ್ಯೂಯಾರ್ಕ್‌ನಲ್ಲಿ ಶುಕ್ರವಾರ 21,027 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಆರಂಭವಾದ ಬಳಿಕ ಮೊದಲ ಬಾರಿಗೆ ಒಂದು ದಿನ ಇಷ್ಟು ಪ್ರಕರಣ ಪತ್ತೆಯಾಗಿದ್ದು, ಅಮೆರಿಕದ ಆರೋಗ್ಯ ಸಚಿವಾಲಯ ಸೋಂಕು ಹರಡುವಿಕೆ ಕುರಿತು ಅಧ್ಯಯನ ಆರಂಭಿಸಿದೆ.

ಡೆಲ್ಟಾ ರೂಪಾಂತರಿ ಮಾದರಿ ಪತ್ತೆಯಾದಾಗ ಯುಕೆಯಲ್ಲಿ 11 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿತ್ತು. ಆದರೆ ಓಮಿಕ್ರಾನ್ ಪತ್ತೆಯಾದ 3 ದಿನಗಳಲ್ಲಿಯೇ ಸೋಂಕು ಹೆಚ್ಚಳವಾಗುತ್ತಿದೆ. ಸಮುದಾಯಕ್ಕೆ ಡೆಲ್ಟಾಗಿಂತ ವೇಗವಾಗಿ ಓಮಿಕ್ರಾನ್ ಹಬ್ಬುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಯುಕೆ ಮತ್ತು ಓಮಿಕ್ರಾನ್ ಮೊದಲು ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಡೆಲ್ಟಾಗಿಂತ ಓಮಿಕ್ರಾನ್ ಎಷ್ಟು ಅಪಾಯಕಾರಿ? ಎಂದು ತಿಳಿಯಲು ಇನ್ನಷ್ಟು ಮಾಹಿತಿಯ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ವಿಶ್ವದ 89 ದೇಶಗಳಲ್ಲಿ ಓಮಿಕ್ರಾನ್ ರೂಪಾಂಪರಿ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ 11 ರಾಜ್ಯಗಳಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 126 ಆಗಿದೆ. ಶನಿವಾರ ಕರ್ನಾಟಕದಲ್ಲಿ 6 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ.

ಕೋವಿಡ್ ಪ್ರಕರಣಗಳು ಇಳಿಕೆ; ಭಾರತದಲ್ಲಿ ಕಳೆದ 20 ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಶುಕ್ರವಾರ ದೇಶದಲ್ಲಿ 7145 ಹೊಸ ಪ್ರಕರಣ ದಾಖಲಾಗಿತ್ತು. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 84,565 ಆಗಿದೆ. ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿದ್ದರೂ ಅದಕ್ಕೂ ಹೆಚ್ಚಿನ ಡೆಲ್ಟಾ ರೂಪಾಂತರಿ ಪ್ರಕರಣಗಳು ದಾಖಲಾಗುತ್ತಿವೆ.

ಓಮಿಕ್ರಾನ್ ಹರಡುವಿಕೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ಸಹ ಆತಂಕ ವ್ಯಕ್ತಪಡಿಸಿದ್ದರು, "ಸಾಮುದಾಯಿಕ ಪ್ರಸರಣ ವೇಗದಲ್ಲಿ 2ನೇ ಅಲೆ ಡೆಲ್ಟಾಗಿಂತಲೂ ವೇಗವಾಗಿ ಓಮಿಕ್ರಾನ್ ಹಬ್ಬಲಿದೆ" ಎಂದು ಹೇಳಿದ್ದರು.

"ವಿದೇಶ ಪ್ರವಾಸದಿಂದ ವಾಪಸ್ ಆದವರು ಅನಗತ್ಯ ತಿರುಗಾಟವನ್ನು ನಿಲ್ಲಿಸಿ. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಡಿ. ಜನ ಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಸಂಚಾವನ್ನು ಕಡಿಮೆ ಮಾಡಿ" ಎಂದು ಆರೋಗ್ಯ ಸಚಿವಾಲಯ ಸಲಹೆ ನೀಡಿತ್ತು.

ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಮಾತನಾಡಿ, "ಉತ್ಸವ, ವಿವಾಹ ಇತ್ಯಾದಿ ಸಮಾರಂಭಗಳನ್ನು ಆದಷ್ಟು ಸರಳವಾಗಿ ಆಚರಣೆ ಮಾಡುವುದು ಉತ್ತಮ. ಅನಗತ್ಯ ಪ್ರವಾಸ, ವಿಕೇಂಡ್ ಪ್ರವಾಸಗಳನ್ನು ಕೆಲವು ದಿನಗಳ ತನಕ ಮುಂಡೂಡಿ. ಇದರಿಂದಾಗಿ ಓಮಿಕ್ರಾನ್ ಪ್ರಸರಣ ತಗ್ಗಿಸಲು ಸಹಾಯಕವಾಗಲಿದೆ" ಎಂದು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಇನ್ನೂ ದೇಶದಲ್ಲಿ ಬೂಸ್ಟರ್ ಡೋಸ್ ನೀಡುವ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಎಲ್ಲರಿಗೂ 2 ಡೋಸ್ ಲಸಿಕೆ ನೀಡುವ ಕುರಿತು ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಅಗತ್ಯ ಇದ್ದವರಿಗೆ ಬೂಸ್ಟರ್ ಡೋಸ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+