Get Updates
Get notified of breaking news, exclusive insights, and must-see stories!

Olympics 2024: ‘ಒಲಿಂಪಿಕ್ಸ್’ ಅಖಾಡಕ್ಕೆ ಕ್ರಿಕೆಟ್, ಭಾರತಕ್ಕೆ ಮೆಡಲ್ ಫಿಕ್ಸ್!?

ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‌ಗೂ ಮನ್ನಣೆ ಸಿಗಬೇಕು ಎಂಬ ಬಹು ದಿನಗಳ ಬೇಡಿಕೆ ಇದೀಗ ನೆರವೇರಿದೆ. ಕ್ರಿಕೆಟ್ ಶ್ರೀಮಂತ ಕ್ರೀಡೆಗಳ ಸಾಲಿಗೆ ಸೇರಿದ್ರೂ, ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಕ್ರೀಡೆ ಆಗಿದ್ದರೂ ಕ್ರಿಕೆಟ್‌ಗೆ 'ಒಲಿಂಪಿಕ್ಸ್' ಅಖಾಡದಲ್ಲಿ ಅವಕಾಶ ಸಿಕ್ಕಿರಲೇ ಇಲ್ಲ. ಆದರೆ ಇದೀಗ ಕಾಲ ಬದಲಾಗಿದ್ದು, ಕ್ರಿಕೆಟ್ 'ಒಲಿಂಪಿಕ್ಸ್' ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ! ಹಾಗಾದರೆ ಯಾವಾಗ ಕ್ರಿಕೆಟ್‌ಗೆ ಅವಕಾಶ ಸಿಗಲಿದೆ?

ಅಂದಹಾಗೆ 2028 ರ 'ಒಲಿಂಪಿಕ್ಸ್' ಕ್ರೀಡಾಕೂಟದ ಮೂಲಕ ಕ್ರಿಕೆಟ್ ಕೂಡ 'ಒಲಿಂಪಿಕ್ಸ್' ಅಖಾಡ ಪ್ರವೇಶ ಮಾಡಲಿದೆ. ಈಗಾಗಲೇ ಕ್ರಿಕೆಟ್ ಸೇರ್ಪಡೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿ, ಹಲವು ದೇಶಗಳು ಒಲಿಂಪಿಕ್ಸ್ ಸಮಿತಿ ಎದುರು ಬೇಡಿಕೆ ಇಟ್ಟಿದ್ದವು. ಹೀಗಾಗಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ 2028 ರಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ಗೂ ಸ್ಥಾನ ಕಲ್ಪಿಸಲು ಒಲಿಂಪಿಕ್ಸ್ ಸಮಿತಿ ಮುಂದಾಗಿದೆ. ಕ್ರಿಕೆಟ್‌ ಸೇರಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕಾರ್ಯನಿರ್ವಾಹಕರು ಅನುಮೋದಿಸಿದ್ದಾರೆ. ಆದರೂ ಈ ಕುರಿತಾಗಿ ಇನ್ನೂ ಕನ್ಫರ್ಮೇಷನ್ ಸಿಕ್ಕಿಲ್ಲ!

Olympics Committee Gives Green Signal to Include Cricket in 2028 Los Angeles Olympics

ಯಾವಾಗ ಕನ್ಫರ್ಮ್ ಆಗುತ್ತೆ ಕ್ರಿಕೆಟ್?

ಈಗ ಮುಂಬೈನಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷರಾದ ಥಾಮಸ್ ಬಾಚ್ ಅವರು ಹೇಳಿರುವಂತೆ, ಟಿ20 ಮಾದರಿ ಕ್ರಿಕೆಟ್‌ನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೇರಿಸಲು ಎಲ್ಲಾ ರೀತಿಯ ತಯಾರಿ ನಡೆದಿದೆ. ಆದರೂ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಇನ್ನೂ ಮೂರು ದಿನ ಕಾಯಬೇಕಿದೆ. ಆ ನಂತರವಷ್ಟೆ ಕ್ರಿಕೆಟ್ ಒಲಿಂಪಿಕ್ಸ್ ಸೇರ್ಪಡೆ ಬಗ್ಗೆ ಅಧಿಕೃತ ಘೋಷಣೆ ಮೊಳಗುವ ಸಾಧ್ಯತೆ ಇದೆ. ಹಾಗಾದರೆ 3 ದಿನ ಏಕೆ ಕಾಯಬೇಕು? ಆ ಬಗ್ಗೆ ಮಾಹಿತಿ ಇಲ್ಲಿದೆ, ಮುಂದೆ ಓದಿ.

ಮತದಾನದಲ್ಲಿ ಪಾಸ್ ಆಗಬೇಕು!

ಅಷ್ಟಕ್ಕೂ 'ಒಲಿಂಪಿಕ್ಸ್' ಕ್ರೀಡಾಕೂಟದಲ್ಲಿ ಕ್ರಿಕೆಟ್ ಸ್ಥಾನ ಖಚಿತಪಡಿಸಿಕೊಳ್ಳುವ ಮೊದಲು ಅಕ್ಟೋಬರ್ 16ಕ್ಕೆ ನಡೆಯುವ ಮತದಾನ ಮುಖ್ಯ. ಏಕೆಂದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯರಿಂದ ಒಪ್ಪಿಗೆ ಪಡೆದು ನಂತರ ಮುಂದುವರಿಯಬೇಕಿದೆ. ಕ್ರಿಕೆಟ್ ಜೊತೆಯಲ್ಲೇ ಒಟ್ಟು 5 ಕ್ರೀಡೆಗಳನ್ನ ಹೊಸದಾಗಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸೇರಿಸಲಾಗ್ತಿದೆ. ಈ ಪೈಕಿ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್ಬಾಲ್, ಸ್ಕ್ವ್ಯಾಷ್ ಮತ್ತು ಲ್ಯಾಕ್ರೋಸ್ ಕ್ರೀಡೆಗಳನ್ನು ಒಲಿಂಪಿಕ್‌ಗೆ ಸೇರ್ಪಡೆ ಮಾಡಲಾಗಿದೆ. ಆದರೆ ಹೊಸ ಕ್ರೀಡೆಗಳು 2028 ರ ಕ್ರೀಡಾಕೂಟದಲ್ಲಿ ಸ್ಥಾನ ಖಚಿತ ಪಡಿಸಿಕೊಳ್ಳುವ ಮೊದಲು, ಅಕ್ಟೋಬರ್ 16ಕ್ಕೆ ನಡೆಯಲಿರುವ ಮತದಾನದಲ್ಲಿ ಒಪ್ಪಿಗೆ ಪಡೆಯಬೇಕಾಗುತ್ತದೆ.

Olympics Committee Gives Green Signal to Include Cricket in 2028 Los Angeles Olympics

ಭಾರತದ ನೆಲದಲ್ಲೇ ಕ್ರಿಕೆಟ್‌ಗೆ ಸ್ಥಾನ!

ಅ.14 ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ 141 ನೇ ಐಒಸಿ ಅಧಿವೇಶನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಐಒಸಿ ಅಧಿವೇಶನ ಐಒಸಿ ಸದಸ್ಯರ ಪ್ರಮುಖ ಸಭೆಯಾಗಿ ಕಾರ್ಯನಿರ್ವಹಿಸುತ್ತದೆ. ಒಲಿಂಪಿಕ್ ಕ್ರೀಡಾಕೂಟಗಳ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಭಾರತವು 2ನೇ ಬಾರಿಗೆ ಮತ್ತು 40 ವರ್ಷಗಳ ನಂತರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ ಆಯೋಜಿಸುತ್ತಿದೆ. ಐಒಸಿಯ 86ನೇ ಅಧಿವೇಶನ 1983ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. ಇದೀಗ ಭಾರತದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲೇ ಕ್ರಿಕೆಟ್‌ಗೂ ಸ್ಥಾನ ಸಿಗುತ್ತಿರುವುದು ವಿಶೇಷ.

ಭಾರತಕ್ಕೆ ಮೆಡಲ್ ಫಿಕ್ಸ್!

ಇನ್ನು ಕ್ರಿಕೆಟ್ ಒಲಿಂಪಿಕ್ಸ್ ಅಖಾಡಕ್ಕೆ ಎಂಟ್ರಿಯಾದರೆ ಭಾರತ ಅಬ್ಬರಿಸುವುದು ಗ್ಯಾರಂಟಿ. ಏಕೆಂದರೆ ಭಾರತವು ಕ್ರಿಕೆಟ್ ಆಟದಲ್ಲಿ ಸಾಕಷ್ಟು ಬಲವಾಗಿದೆ. ಹೀಗಾಗಿ ಪದಕವೂ ಪಕ್ಕಾ ಅಂತಿದ್ದಾರೆ ಅಭಿಮಾನಿಗಳು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಸುಧಾರಿಸುತ್ತಿದೆ. ಈ ಸಮಯದಲ್ಲೇ ಹಲವು ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಅಚ್ಚರಿಯ ಫಲಿತಾಂಶ ನೀಡುತ್ತಿದ್ದಾರೆ. ಇದೀಗ ಕ್ರಿಕೆಟ್ ಕೂಡ ಒಲಿಂಪಿಕ್ಸ್ ಸೇರಿದರೆ ಒಂದು ಮೆಡಲ್ ಗ್ಯಾರಂಟಿ ಎನ್ನಬಹುದು. ಇದರ ಜೊತೆ ಮತ್ತಷ್ಟು ಪದಕಗಳು ಸೇರಿದರೆ ಭಾರತ ಪದಕ ಪಟ್ಟಿಯಲ್ಲಿ ಮತ್ತಷ್ಟು ಮೇಲೇರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+