ಓಲಾ ಕ್ಯಾಬ್ ಸಿಇಒ ಭವಿಶ್ ಕುಟುಂಬದಲ್ಲಿ ದುರಂತ

Posted By:
Subscribe to Oneindia Kannada

ಲೂಧಿಯಾನ (ಪಂಜಾಬ್), ಫೆ.04: ಓಲಾ ಕ್ಯಾಬ್ ಸರ್ವೀಸ್ ಸಂಸ್ಥೆ ಸಿಇಒ ಭವಿಶ್ ಅಗರವಾಲ್ ಕುಟುಂಬದಲ್ಲಿ ದುರಂತ ಸಂಭವಿಸಿ ಒಂದು ವಾರವಾದರೂ ಪೊಲೀಸರು ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ಅಗರವಾಲ್ ಕುಟುಂಬ ಆರೋಪಿಸಿದೆ. ಆದರೆ, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಯುಕ್ತ ನರೀಂದ್ರ ಭಾರ್ಗವ್ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಜನವರಿ 29ರಂದು ಭವಿಶ್ ಅವರ ಅಜ್ಜಿ ಹಾಗೂ ಸಂಬಂಧಿಯೊಬ್ಬರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದರು.ಈ ಪ್ರಕರಣದಲ್ಲಿ ಮೊದಲಿಗೆ ಮನೆಕೆಲಸದಾಕೆ ಪೂಜಾ ಮೇಲೆ ಅನುಮಾನ ವ್ಯಕ್ತವಾಗಿತ್ತು. ಪೂಜಾ ಘಟನೆ ನಡೆದ ದಿನ ರಾತ್ರಿ 12.43 ರ ಸಮಯದಲ್ಲಿ ಯಾರೋ ಒಬ್ಬರು ಪೊಲೀಸ್ ಕಂಟ್ರೋಲ್ ರೂಮಿಗೆ ಬ್ಲಾಂಕ್ ಕಾಲ್ ಮಾಡಿದ್ದರು. 1.30ರ ಸಮಯದಲ್ಲಿ ಕೊಲೆ ನಡೆದಿದೆ.

Ola Cabs CEO's grandmother, aunt murdered, Ludhiana Police clueless

ಲೂಧಿಯಾನದ ಶೇರ್ ಇ ಪಂಜಾಬ್ ಕಾಲೋನಿಯ ಮನೆಯಲ್ಲಿ ಈ ಡಬ್ಬಲ್ ಮರ್ಡರ್ ಆಗಿದ್ದು, ಪೂಜಾರನ್ನು ಸಾಕ್ಷಿ ಹೇಳಲು ಕರೆದೊಯ್ದ ಪೊಲೀಸರು ನಂತರ ಆಕೆಯನ್ನು ಚೆನ್ನಾಗಿ ಥಳಿಸಿದ್ದಾರೆ. ಈ ಬಗ್ಗೆ ತಿಳಿದ ಆಕೆಯ ಮನೆಯವರು ಠಾಣೆ ಮುಂದೆ ಪ್ರತಿಭಟನೆ ಮಾಡಿ ಆಕೆಯನ್ನು ಬಿಡಿಸಿಕೊಂಡು ಹೋಗಿದ್ದಾರೆ.

ಮೃತರನ್ನು ಪುಷ್ಪಾವತಿ ಅಗರ್ ವಾಲ್ (84) ಹಾಗೂ ಡಾ. ಸರಿತಾ ಅಗರ್ ವಾಲ್ (57) ಎಂದು ಗುರುತಿಸಲಾಗಿದೆ. ತಲೆ, ಕೈಕಾಲು ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಅಟಾಪ್ಸಿ ವರದಿಯಂತೆ ಹ್ಯಾಮರ್ ಬಳಸಿ ಕೃತ್ಯ ಎಸಗಲಾಗಿದೆ. ಆದರೆ, ಘಟನಾ ಸ್ಥಳದಲ್ಲಿ ಯಾವುದೇ ಆಯುಧ ಸಿಕ್ಕಿಲ್ಲ.

ಘಟನೆ ದಿನ ಕಂಟ್ರೋಲ್ ರೂಮಿಗೆ 2.15ರ ಸುಮಾರಿಗೆ ಪೂಜಾ ಅವರು ಕರೆ ಮಾಡಿ ವಿಷಯ ತಿಳಿಸಿದರು. ಪೂಜಾ ವಿಚಾರಣೆ ಬಳಿಕ ಇದು ಹಣದ ಆಸೆಗಾಗಿ ಪೂಜಾ ನಡೆಸಿದ ಕೃತ್ಯವಲ್ಲ ಎಂದು ತಿಳಿದು ಬಂದಿದೆ.

ನಂತರ ಈ ಹಿಂದೆ ಡ್ರೈವರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ಬಂದಿದೆ. ಇದು ಹಳೆ ದ್ವೇಷಕ್ಕಾಗಿ ನಡೆದ ಕೊಲೆ ಎಂದು ಸದ್ಯಕ್ಕೆ ಪೊಲೀಸರು ತೀರ್ಮಾನಿಸಿದ್ದಾರೆ. ಆದರೆ, ಪೂಜಾ ಬಂಧನ, ಬಿಡುಗಡೆ ಹೊರತೂ ಯಾರೊಬ್ಬರ ವಿಚಾರಣೆ ನಡೆಸದಿರುವುದಕ್ಕೆ ಅಗರವಾಲ್ ಕುಟುಂಬದಿಂದ ಆಕ್ಷೇಪ ವ್ಯಕ್ತವಾಗಿದೆ. ಲೂಧಿಯಾನ ಪೊಲೀಸರಿಗೆ ಇನ್ನೂ ಸರಿಯಾದ ಸುಳಿವು ಪತ್ತೆಯಾಗಿಲ್ಲ (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ola cab CEO Bhavish Agarwal's paternal grandmother and aunt were brutally murdered at their residence in Ludhiana on Jan 29. A week after the double murder, investigating police officials have not been able to crack the case.
Please Wait while comments are loading...