ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಪ್ 5 ಆಡಳಿತದ ರಾಜ್ಯಗಳಲ್ಲಿ ಇರುವುದು ಒಂದೇ ಬಿಜೆಪಿ ಸರ್ಕಾರ

|
Google Oneindia Kannada News

ನವದೆಹಲಿ, ಜುಲೈ 27: ದೇಶದಲ್ಲಿ 29 ರಾಜ್ಯಗಳ ಪೈಕಿ 18 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಅಥವಾ ಬಿಜೆಪಿ ಬೆಂಬಲಿತ ಸರ್ಕಾರ ಅಸ್ತಿತ್ವದಲ್ಲಿದೆ. ಭಾರತದ ಶೇ 63%ರಷ್ಟು ಜನರು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇದ್ದಾರೆ.

ಆದರೆ, ದೇಶದ ಅತ್ಯುತ್ತಮ ಆಡಳಿತ ಇರುವ ಮೊದಲ ಐದು ರಾಜ್ಯಗಳ ಪಟ್ಟಿಯಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯಗಳ ಪೈಕಿ ಇರುವುದು ಹಿಮಾಚಲ ಪ್ರದೇಶ ಮಾತ್ರ.

ತೆಲಂಗಾಣದಲ್ಲಿ ನವಿಲುಗಳ ಮಾರಣಹೋಮ: ರೈತರೇ ಕಾರಣ ಎಂದ ಸರ್ಕಾರತೆಲಂಗಾಣದಲ್ಲಿ ನವಿಲುಗಳ ಮಾರಣಹೋಮ: ರೈತರೇ ಕಾರಣ ಎಂದ ಸರ್ಕಾರ

ಬೆಂಗಳೂರು ಮೂಲದ ಚಿಂತಕರ ಚಾವಡಿ ಪಬ್ಲಿಕ್ ಅಫೇರ್ಸ್ ಇಂಡೆಕ್ಸ್ (ಪಿಎಐ) ನಡೆಸಿದ ಅಧ್ಯಯನದಲ್ಲಿ ಇದು ತಿಳಿದುಬಂದಿದೆ.

ಅತ್ಯುತ್ತಮ ಆಡಳಿತ ಇರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ತಮಿಳುನಾಡು, ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ನಂತರದ ಸ್ಥಾನಗಳನ್ನು ಪಡೆದಿವೆ.

of 18 states ruled by bjp, only one is in the top five best governed ones

ಇವುಗಳಲ್ಲಿ ಹಿಮಾಚಲ ಪ್ರದೇಶ ಹೊರತುಪಡಿಸಿ ಉಳಿದೆಲ್ಲವೂ ಬಿಜೆಪಿಯೇತರ ಸರ್ಕಾರ ಅಸ್ತಿತ್ವದಲ್ಲಿವೆ.

ಮಾತ್ರವಲ್ಲ, ಮೊದಲ ಹತ್ತು ರಾಜ್ಯಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳೂ ಇದ್ದು, ಇವುಗಳಲ್ಲಿ ಸಹ ಯಾವ ಬಿಜೆಪಿ ಸರ್ಕಾರವೂ ಇಲ್ಲ.

ದೆಹಲಿ ಸೇರಿದಂತೆ 30 ರಾಜ್ಯಗಳಿಗೆ ಪಿಎಐ ಶ್ರೇಯಾಂಕ ನೀಡಿದ್ದು, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಮೊದಲ ಎರಡು ಸ್ಥಾನಗಳನ್ನು ಮೂರು ವರ್ಷಗಳಿಂದಲೂ ಕಾಪಾಡಿಕೊಂಡಿವೆ.

ಮುಸ್ಲಿಂ ಜನಸಂಖ್ಯೆ ಏರಿಕೆಯಿಂದಾಗಿಯೇ ಅಪರಾಧ ಹೆಚ್ಚಳ: ಬಿಜೆಪಿ ಸಂಸದಮುಸ್ಲಿಂ ಜನಸಂಖ್ಯೆ ಏರಿಕೆಯಿಂದಾಗಿಯೇ ಅಪರಾಧ ಹೆಚ್ಚಳ: ಬಿಜೆಪಿ ಸಂಸದ

ದಕ್ಷಿಣ ಭಾರತದ ಈ ರಾಜ್ಯಗಳು ಐತಿಹಾಸಿಕವಾಗಿ ಕೆಲಸ ಮಾಡುತ್ತಿವೆ ಎಂದು ಅಜಿಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ನಾರಾಯಣ ಎ. ಹೇಳಿದ್ದಾರೆ.

20 ಮಿಲಿಯನ್‌ಗೂ ಕಡಿಮೆ ಜನಸಂಖ್ಯೆಯುಳ್ಳ ಸಣ್ಣ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಮೊದಲ ಸ್ಥಾನದಲ್ಲಿದೆ. 12 ಸಣ್ಣ ರಾಜ್ಯಗಳ ಪೈಕಿ 8 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ.

ಟಾಪ್ ಐದು ರಾಜ್ಯಗಳಲ್ಲಿ ಗೋವಾ ಮತ್ತು ತ್ರಿಪುರ ರಾಜ್ಯಗಳ ಜತೆ ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವ ಮಿಜೋರಾಂ ಮೂರನೇ ಸ್ಥಾನ ಪಡೆದಿದೆ.

20 ಮಿಲಿಯನ್‌ಗೂ ಹೆಚ್ಚು ಜನಸಂಖ್ಯೆಯುಳ್ಳ 18 ದೊಡ್ಡ ರಾಜ್ಯಗಳಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳೇ ಇವೆ.

ಬಳಿಕ ಬಿಜೆಪಿ ಆಡಳಿತವಿರುವ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸ್ಥಾನ ಪಡೆದಿವೆ. ದೊಡ್ಡ ರಾಜ್ಯಗಳಲ್ಲಿ ಹಾಗೂ ಶ್ರೇಯಾಂಕದಲ್ಲಿ ಬಿಹಾರ ಕೊನೆಯ ಸ್ಥಾನ ಪಡೆದುಕೊಂಡಿದೆ.

ಆರ್ಥಿಕ ಸ್ವಾತಂತ್ರ್ಯದ ವಿಚಾರದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಎರಡನೆಯ ಸ್ಥಾನದಲ್ಲಿದೆ. ತೆಲಂಗಾಣ ಮೂರನೇ ಸ್ಥಾನದಲ್ಲಿದ್ದು, ಹಿಮಾಚಲ ಪ್ರದೇಶ ಈ ಪಟ್ಟಿಯಲ್ಲಿರುವ ಬಿಜೆಪಿ ಆಡಳಿತದ ಏಕೈಕ ರಾಜ್ಯವಾಗಿದೆ.

ಪಾರದರ್ಶಕತೆ ವಿಚಾರದಲ್ಲಿ ಕರ್ನಾಟಕ ಮತ್ತು ಹರಿಯಾಣ ಮೇಲ್ಮಟ್ಟದಲ್ಲಿವೆ. ಪರಿಸರ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ವಿಭಾಗದಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ತೋರಿದೆ.

English summary
Himachal Pradesh is the only state ruled by BJP has able to secure a place in top 5 best governed states in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X