ಒಡಿಶಾ: ಕಳ್ಳಿ ಎಲೆ ಮೇಲೆ ಮಲಗಿ, ಛಾವಟಿಯಲ್ಲಿ ಏಟು ತಿನ್ನುವ ವಿಚಿತ್ರ ಹರಕೆ?!
ಮಯೂರ್ ಬಂಜ್(ಒಡಿಶಾ), ಅಕ್ಟೋಬರ್ 4: ಕಳ್ಳಿ ಎಲೆಯ ಮೇಲೆ ಮಲಗಿ, ಛಾವಟಿಯಲ್ಲಿ ತಾವೇ ಹೊಡೆದುಕೊಳ್ಳುವ ಮೂಲಕ ಹರಕೆ ತೀರಿಸುವ ವಿಚಿತ್ರ ಪದ್ಧತಿಯೊಂದು ಒಡಿಶಾದ ಮಯೂರ್ ಬಂಜ್ ಜಿಲ್ಲೆಯ ಭಂಜಾಕಿಯ ಎಂಬಲ್ಲಿ ಚಾಲ್ತಿಯಲ್ಲಿದೆ.
ಇದರೊಂದಿಗೆ ಕೆಂಡದ ಮೇಲೆ ನಡೆದಾಡಿ ಹರಕೆ ತೀರಿಸಿಕೊಳ್ಳುವ ಪದ್ಧತಿಯೂ ಇಲ್ಲಿದೆಯಂತೆ.

ಕಳ್ಳಿ ಎಲೆಯನ್ನು ನೆಲಕ್ಕೆ ಹರಳಿ, ಚೂಪಾದ ಮುಳ್ಳುಗಳನ್ನು ಹೊಂದಿರುವ ಅವುಗಳ ಮೇಲೆ ಮಲಗಿಕೊಂಡು, ಛಾವಟಿಯಿಂದ ವ್ಯಕ್ತಿ ತನಗೆ ತಾನೇ ಹೊಡೆದುಕೊಳ್ಳುತ್ತಾನೆ. ಈ ಪರಿ ವಿಚಿತ್ರ ಭಕ್ತಿಯನ್ನು ಮೆಚ್ಚು ದೇವರು ಕೇಳಿದ್ದನ್ನು ಕೊಡುತ್ತಾನೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.
ಚಿಕ್ಕ ಮಕ್ಕಳೂ ಸೇರಿದಂತೆ ಸಾವಿರಕ್ಕೂ ಹೆಚ್ಚು ಜನ ಪ್ರತಿವರ್ಷ ಈ ಸಂಪ್ರದಾಯದಲ್ಲಿ ಭಾಗಿಯಾಗುತ್ತಾರೆ. ಇದರಿಂದ ಮಳೆಯೂ ಆಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.












Click it and Unblock the Notifications