ಒಡಿಶಾ ತ್ರಿವಳಿ ರೈಲು ದರುಂತದ ಹಿಂದೆ ಟಿಎಂಸಿ ಪಿತೂರಿ: ಸುವೆಂದು ಅಧಿಕಾರಿ

ಬೆಂಗಳೂರು, ಜೂನ್ 06: ಒಡಿಶಾದ ಬಾಲಸೂರ್ ಬಳಿ ನಡೆದ ತ್ರಿವಳಿ ರೈಲು ದುರಂತವು ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ತೃಣಮೂಲ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಪಶ್ಚಿಮ ಬಂಗಾಳದ ಬಿಜೆಪಿಯ ಸುವೆಂದು ಅಧಿಕಾರಿ ಒಡಿಶಾದ ಬಾಲಸೂರ್ ಬಳಿಯ ರೈಲು ದುರಂತದ ಹಿಂದೆ ತೃಣಮೂಲ ಕಾಂಗ್ರೆಸ್ (TMC) ಪಿತೂರಿ ಇದೆ ಎಂದು ಅವರು ಆಪಾದಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

Odisha Railway Accident

ಬೇರೆ ರಾಜ್ಯದಲ್ಲಿ ರೈಲು ದುರಂತದ ಘಟನೆ ನಡೆದಿದ್ದರೂ ಟಿಎಂಸಿಯ ಮಮತಾ ಬ್ಯಾನರ್ಜಿ ಅವರು ಏಕೆ ಕಳೆದೊಂದು ದಿನದಿಂದ ಆತಂಕಕ್ಕೆ ಈಡಾಗಿದ್ದಾರೆ. ಅಲ್ಲದೇ ಅಪಘಾತ ಕುರಿತು ಸಿಬಿಐ ತನಿಖೆಗೆ ಅವರೇಕೆ ಹೆದರುತ್ತಿದ್ದಾರೆ ಎಂದು ಅಧಿಕಾರಿ ಪ್ರಶ್ನಿಸಿದರು.

ಅಲ್ಲದೇ ಟಿಎಂಸಿ ಕೆಲವು ಮುಖಂಡರು ಪೊಲೀಸರ ಸಹಾಯದಿಂದ ಇಬ್ಬರು ರೈಲ್ವೆ ಅಧಿಕಾರಿಗಳ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಇಬ್ಬರು ರೈಲ್ವೆ ಅಧಿಕಾರಿಗಳ ಮಧ್ಯದಲ್ಲಿ ನಡೆದ ಸಂಭಾಷಣೆ ಕುರಿತು ಅವರೇ ಮಾತನಾಡಿದ್ದಾರೆ. ಕದ್ದಾಲಿಕೆ ಆಗದಿದ್ದರೆ, ಇಬ್ಬರ ಮಧ್ಯೆ ಸಂಭಾಷಣೆ ಹೇಗೆ ತಿಳಿಯಿತು. ಸಂಭಾಷಣೆ ಸೋರಿಕೆಯಾಗಿದ್ದ ಬಗ್ಗೆ ಸಿಬಿಐ ತನಿಖೆಯಿಂದ ಎಲ್ಲ ಸತ್ಯ ಹೊರ ಬರಬೇಕಿದೆ. ಇದೆಲ್ಲ ಘಟನೆಗಳಿಂದಲೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹೆದರುತ್ತಿದ್ದಾರೆ ಎಂದು ಅವರು ಹೇಳಿದರು.

Odisha Railway Accident

ಸೋಮವಾರದಿಂದ ಸಿಬಿಐ ತನಿಖೆ ಆರಂಭ

ಶುಕ್ರವಾರ ನಡೆದ ರೈಲು ದುರಂತಕ್ಕೆ ಇಡಿ ದೇಶವೇ ಮರುಗಿದೆ. ಘಟನೆಯಲ್ಲಿ ಸುಮಾರು 280 ಮಂದಿ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಮಂದ ಗಾಯಗೊಂಡಿದ್ದಾರೆ. ಈ ಮಹಾ ದುರಂತಕ್ಕೆ ಕಾರಣವೇನು? ಎಂಬುದನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

ಘಟನ ನಡೆದ ಎರಡು ದಿನಕ್ಕೆ ರೈಲ್ವೆ ಮಂಡಳಿಯು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಅದರಂತೆ ಒಟ್ಟು 10 ಮಂದಿ ಸದಸ್ಯರ ತಂಡ ಸೋಮವಾರದಿಂದಲೇ ತನಿಖೆಗೆ ಇಳಿದಿದೆ. ಸ್ಥಳಕ್ಕೆ ಭೇಟಿ ನೀಡಿ ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನಷ್ಟು ಮಾಹಿತಿಗಳನ್ನು ತಂಡ ಕಲೆ ಹಾಕುವಲ್ಲಿ ನಿರತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+