Odia Sambad: ವಿವಿಧ ಬ್ಯಾಂಕ್‌ಗಳಿಂದ ಕೋಟಿಗಟ್ಟಲೇ ಸಾಲ ಪಡೆದ ಸುದ್ದಿ ಪತ್ರಿಕೆ ಸಂಸ್ಥೆ, ತನಿಖೆ
ನವದೆಹಲಿ, ಸೆಪ್ಟಂಬರ್ 20: ಒಡಿಯಾ ಪತ್ರಿಕೆ 'ಸಂಬಾದ್' ವಿವಿಧ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿದೆ. ಸಾಲಕ್ಕಾಗಿ ಉದ್ಯೋಗಿಗಳ ನಕಲಿ ವೇತನ ಪ್ರಮಾಣ ಪತ್ರ ಒದಗಿಸಲಾಗಿದೆ ಎಂದು ಒಡಿಶಾ ಪೊಲೀಸ್ ಆರ್ಥಿಕ ಅಪರಾಧ ವಿಭಾಗ (EOW) ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಒಡಿಯಾ ಪತ್ರಿಕೆ 'ಸಂಬಾದ್' ಇದು ಬ್ಯಾರನ್ ಸೌಮ್ಯ ರಂಜನ್ ಪಟ್ನಾಯಕ್ ಅವರ ಒಡೆತನದಲ್ಲಿದೆ. ಈ ಪತ್ರಿಕೆ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಿಂದ ಕನಿಷ್ಠ ₹50 ಕೋಟಿ ಸಾಲ ಪಡೆಯುವ ಮೂಲಕ "ಸೂಕ್ಷ್ಮ ಸಂಘಟಿತ ಸಾಲ ಹಗರಣ" ನಡೆಸಿದೆ ಎಂದು EOW ಹೇಳಿಕೊಂಡಿದೆ. ಈ ಸಂಬಂಧ ಅಧಿಕಾರಿಗಳು ಸೋಮವಾರ ಸಂಬಾದ್ ಕಚೇರಿ ಮೇಲೆ ದಾಳಿ ನಡೆಸಿತ್ತು.

ಬಿಜು ಜನತಾ ದಳ ಪಕ್ಷದಲ್ಲಿನ ಬಣ ಕಲಹದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನದಿಂದ ಪಟ್ನಾಯಕ್ ಅವರನ್ನು ಕೆಳಗಿಳಿಸಿದ ವಾರದೊಳಗೆ ಈ ಬೆಳವಣಿಗೆ ನಡೆದಿದೆ.
ಭಾರತೀಯ ದಂಡ ಸಂಹಿತೆ 506, 467, 468, 471, 420, ಮತ್ತು 120 ಬಿ ಅಡಿಯಲ್ಲಿ ದಿನಪತ್ರಿಕೆಯ ಮಾಜಿ ಉದ್ಯೋಗಿ ಆಶಿಮ್ ಮೊಹಾಪಾತ್ರ ಕಳೆದ ವಾರ ದೂರು ಸಲ್ಲಿಸಿದ ನಂತರ ಒಡಿಯಾ ದೈನಿಕ ವಿರುದ್ಧ EOW ತನಿಖೆ ಆರಂಭಿಸಿದೆ.
ಒಂದೇ ತೆರನಾಗಿ ಸಾಲ ಸ್ವೀಕಾರ
ಇನ್ನೂ ಮಾನವ ಸಂಪನ್ಮೂಲ (HR) ಮುಖ್ಯಸ್ಥ ಮತ್ತು ಸಂಬಾದ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (COO) ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿವಿಧ ಬ್ಯಾಂಕ್‌ಗಳಲ್ಲಿ ಪಡೆದ ಸಾಲದ ರೀತಿಗಳು ಬಹುತೇಕ ಎಲ್ಲವು ಒಂದೇ ತೆರನಾಗಿವೆ.

ಬ್ಯಾಂಕ್‌ನ ಸುಲಭ ಹಣ ಸಾಲ ಯೋಜನೆಯಡಿ ಈ ಪತ್ರಿಕೆಯ ಉದ್ಯೋಗಿಗಳಿಗೆ ಮನೆ/ಮನೆ ದುರಸ್ತಿ ಮುಂತಾದ ಆಧಾರದ ಮೇಲೆ ಒಟ್ಟು ₹5 ಲಕ್ಷ ಸಾಲ ಮಂಜೂರು ಆಗಿದೆ. ಅದಕ್ಕಾಗಿ ನಕಲಿ ವೇತನ ಪತ್ರ ಸಲ್ಲಿಸಲಾಗಿದ್ದು ಬೆಳಕಿಗೆ ಬಂದಿದೆ. ನಿಜವಾದ ಸಂಬಳಕ್ಕೂ ಸಂಬಾದ್ ತಯಾರಿಸಿದ ಸಂಬಳ ಪ್ರಮಾಣ ಪತ್ರಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.
ಉದ್ಯೋಗಿಗಳು ಸಾಲದ ಹಣ ಸ್ವೀಕರಿಸಿಲ್ಲ
ಸಾಲದ ನಮೂನೆಗಳನ್ನು ಬೇರೊಬ್ಬರು ಸಿದ್ಧಪಡಿಸಿ ಭರ್ತಿ ಮಾಡಿದ್ದಾರೆ. ಆದರೆ ಒಬ್ಬ ಉದ್ಯೋಗಿಯು ಸಾಲದ ಪಡೆದ ಹಣದಲ್ಲಿ ಒಂದು ಪೈಸೆ ಸಹ ಸ್ವೀಕರಿಸಿಲ್ಲ. ಒಮ್ಮೆ ಸಾಲ ಮಂಜೂರಾದರೆ, ಮೊತ್ತವನ್ನು ನಗದು ರೂಪದಲ್ಲಿ ಹಿಂಪಡೆಯಲಾಗುತ್ತಿತ್ತು. ಪಾವತಿಸಬೇಕಾದ EMI ಉದ್ಯೋಗಿಗಳ ನಿವ್ವಳ ಸಂಬಳಕ್ಕೆ ಸಮನಾಗಿತ್ತು.
ಕೆಲವು ನೌಕರರು 2-3 ಬಾರಿ ಸಾಲ ಪಡೆಯುವಂತೆ ಒತ್ತಾಯಿಸಿದ್ದಾರೆ. ಇಎಂಐಗಳನ್ನು ಸಂಬಾದ್ ಅವರು 60 ಕಂತುಗಳಲ್ಲಿ ಪಾವತಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ, ನೌಕರರು ರಾಜೀನಾಮೆ ನೀಡಿದರೂ ಸಂಬಾದ್ ಅವರಿಂದ EMI ಗಳನ್ನು ಪಾವತಿಸಲಾಗಿದೆ. ಹೀಗಾಗಿ ವರ್ಷಗಳಿಂದಲೂ ಬ್ಯಾಂಕ್‌ಗಳು ಸಾಲ ಮಂಜೂರು ಮುಂದುವರಿಸಿವೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಬಾದ್ ಪತ್ರಿಕೆಯ 350 ಕ್ಕೂ ಹೆಚ್ಚು ಉದ್ಯೋಗಿಗಳು ಒಡಿಶಾ ಗ್ರಾಮ್ಯ ಬ್ಯಾಂಕ್, ಭುವನೇಶ್ವರದಲ್ಲಿರುವ ಐಆರ್‌ಸಿ ವಿಲೇಜ್ ಶಾಖೆಯಿಂದ ಸಾಲ ಪಡೆದಿದ್ದಾರೆ. ಎಸ್‌ಬಿಐ ಮತ್ತು ಇತರ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಅವರು ಹೇಳಿದರು.












Click it and Unblock the Notifications