ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: INDIA ಒಕ್ಕೂಟದ ಹೋರಾಟಕ್ಕೆ CJP ಸಾಥ್, ಅ.10 ಕ್ಕೆ ಬೃಹತ್ ಪ್ರತಿಭಟನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನ ಕಾಕ್ರೋಚ್ ಜನತಾ ಪಾರ್ಟಿ ಸ್ವಾಗತಿಸಿದೆ.

ಅಲ್ಲದೆ, ಅಕ್ಟೋಬರ್ 10 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯು ಕೇವಲ ತಮ್ಮ ಪಕ್ಷದ ಕರೆಯಲ್ಲ, ಬದಲಾಗಿ ಅದು ಯುವಜನತೆಯ ಹಾಗೂ ಜೆನ್ ಝೀ' ಯುವಕರ ಕರೆ ಎಂದು ಸ್ಪಷ್ಟಪಡಿಸಿದೆ.

October 10 Protest Call of Youth Says CJP Welcomes INDIA Bloc Stir Against CEC Gyanesh Kumar

ಶಾಂತಿಯುತ ಪ್ರತಿಭಟನೆಗೆ CJP ಕರೆ

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ CJP ಸಹ-ಸಂಚಾಲಕ ಸೌರವ್ ದಾಸ್, ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ತಮ್ಮ ಹಕ್ಕುಗಳನ್ನ ಪ್ರತಿಪಾದಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ ಎಂದರು. ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾಮಾನ್ಯ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

"ನಾವು ಎಲ್ಲಾ ರೀತಿಯ ಶಾಂತಿಯುತ ಪ್ರತಿಭಟನೆಗಳನ್ನ ಸ್ವಾಗತಿಸುತ್ತೇವೆ. ಇಂಡಿಯಾ ಮೈತ್ರಿಕೂಟವಾಗಿರಲಿ, ವಿದ್ಯಾರ್ಥಿ ಸಂಘಟನೆಗಳಾಗಿರಲಿ ಅಥವಾ ಸಾಮಾನ್ಯ ಜನರೇ ಆಗಿರಲಿ, ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನ ಪ್ರತಿಪಾದಿಸುವ ಅವಶ್ಯಕತೆಯಿದೆ. ಅಕ್ಟೋಬರ್ 10ರ ಪ್ರತಿಭಟನೆಯನ್ನ ಕೇವಲ ಸಿಜೆಪಿಯ ಕರೆ ಎಂದು ಭಾವಿಸಬೇಡಿ. ಇದು ದೇಶದ ಯುವಜನರ ಧ್ವನಿ, ನಾವದರ ಒಂದು ಸಣ್ಣ ಭಾಗವಷ್ಟೇ" ಎಂದು ಸೌರವ್ ದಾಸ್ ವಿವರಿಸಿದರು.

ಬಂಧನದ ಭೀತಿಯ ನಡುವೆಯೂ ಹೋರಾಟ

ಅಕ್ಟೋಬರ್ 10 ರ ಪ್ರತಿಭಟನೆಗೆ ಮುನ್ನವೇ CJP ನಾಯಕರನ್ನ ಬಂಧಿಸುವ ಸಾಧ್ಯತೆಗಳ ಬಗ್ಗೆ ಹಿತೈಷಿಗಳು ಮಾಹಿತಿ ನೀಡಿದ್ದಾರೆ ಎಂದು ಸೌರವ್ ದಾಸ್ ಇದೇ ವೇಳೆ ಆರೋಪಿಸಿದರು. ಸರ್ಕಾರ ಮತ್ತು ಪೊಲೀಸರು ಎಷ್ಟೇ ಬೆದರಿಕೆ ಹಾಕಿದರೂ, ಜೈಲಿಗೆ ಹಾಕಿದರೂ ಯುವಜನರ ಈ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

"ನಾಯಕರನ್ನ ಬಂಧಿಸಿದರೂ ಅಥವಾ ವಶಕ್ಕೆ ಪಡೆದರೂ ಈ ಹೋರಾಟ ಮುಂದುವರಿಯುತ್ತದೆ. ಏಕೆಂದರೆ ಇದು ನಮ್ಮ ಭವಿಷ್ಯದ ಹೋರಾಟವಾಗಿದೆ. ನಮ್ಮಲ್ಲಿ ಎಫ್‌ಐಆರ್ ಹಾಗೂ ಜೈಲಿನ ಭಯವಿದ್ದರೆ ಅದು ಎಂದಿಗೋ ಮಾಯವಾಗಿದೆ. ಪೊಲೀಸರು ನಮ್ಮನ್ನು ಎಲ್ಲಿ ತಡೆಯುತ್ತಾರೋ, ಅದೇ ಸ್ಥಳದಲ್ಲಿ ನಾವು ಕುಳಿತುಕೊಳ್ಳುತ್ತೇವೆ. ನಾವು ಕುಳಿತ ಸ್ಥಳವೇ ನಮಗೆ ಜಂತರ್ ಮಂತರ್ ಆಗಲಿದೆ" ಎಂದು ಸೌರವ್ ದಾಸ್ ಗುಡುಗಿದರು.

ಸೌರವ್ ದಾಸ್, ಅಭಿಜೀತ್ ಡಿಪ್ಕೆ ಹಾಗೂ ಸಿಜೆಪಿಯ ಇತರ ನಾಯಕರ ಈ ಕರೆ ದೇಶಾದ್ಯಂತ ಯುವಕರಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಅಕ್ಟೋಬರ್ 10 ರ ಪ್ರತಿಭಟನೆ ಸಾಕಷ್ಟು ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+