ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ, ಚಿತ್ರಗಳಲ್ಲಿ ಲಕ್ಷದ್ವೀಪದ ಓಖಿ ಅಬ್ಬರ!

|
Google Oneindia Kannada News

ಲಕ್ಷದ್ವೀಪ, ಡಿಸೆಂಬರ್ 02: ಮೂರ್ನಾಲ್ಕು ದಿನಗಳಕಾಲ ತಮಿಳುನಾಡು ಮತ್ತು ಕೇರಳದ ಜನರ ನಿದ್ದೆಕೆಡಿಸಿದ್ದ ಓಖಿ ಚಂಡಮಾರುತ ಇದೀಗ ಲಕ್ಷದ್ವೀಪದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ!

In Pics:ಓಖಿ ಸೋಕಿದ ಊರೆಲ್ಲ ನೀರೋ ನೀರು, ನೆಲ ನೋಡಿದ ಮರಗಳು

ಸುತ್ತೆಲ್ಲ ಕಡಲು ತುಂಬಿದ ಸುಂದರ, ರಮಣೀಯ ದ್ವೀಪಕ್ಕೀಗ ಸುಡುಗಾಡಿನ ಛಾಯೆ! ಉದುರಿಬಿದ್ದ ಮರಗಳು, ಭೋರ್ಗರೆವ ಕಡಲು, ಮನೆ-ಮನೆಯಯನ್ನೇ ಬೀಳಿಸುವಂಥ ರಭಸದ ಗಾಳಿ ಎಲ್ಲವೂ ಸೇರಿ ಲಕ್ಷದ್ವೀಪದ ಜನರ ನೆಮ್ಮದಿ ಕದ್ದಿವೆ. ಪ್ರವಾಸಕ್ಕೆಂದು ತೆರಳಿದ್ದ ಜನರೂ ಅಲ್ಲಿ ಸಿಕ್ಕಿಹಾಕಿಕೊಂಡು ಏನು ಮಾಡಬೇಕೆಂದೇ ತೋಚದೆ ಆತಂಕದಲ್ಲಿದ್ದಾರೆ.

ವಿಡಿಯೋ, ಚಿತ್ರಗಳಲ್ಲಿ ನೋಡಿ 'ಓಖಿ' ಚಂಡಮಾರುತದ ಅವಾಂತರವಿಡಿಯೋ, ಚಿತ್ರಗಳಲ್ಲಿ ನೋಡಿ 'ಓಖಿ' ಚಂಡಮಾರುತದ ಅವಾಂತರ

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಪ್ರಕೃತಿಯ ಅಗಾಧ ಶಕ್ತಿಯ ವಿರುದ್ಧ ಹೋರಾಡುವುದಕ್ಕೆ ಸಾಧ್ಯವೇ? ಲಕ್ಷದ್ವೀಪದಲ್ಲಿ ಓಖಿ ಚಂಡಮಾರುತ ಸೃಷ್ಟಿಸಿದ ಸ್ಮಶಾನಸದೃಶ ದೃಶ್ಯಗಳ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲಿರುವ ಪ್ರತಿಯೊಬ್ಬರೂ ಯಾವ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿರಲಿ, ಓಖಿ, ಚಂಡಿ ಬಿಟ್ಟು ಸುಮ್ಮನಾಗಿಬಿಡು ಪ್ಲೀಸ್... ಎಂದು ಚಂಡಮಾರುತವನ್ನು ಹಲವರು ಪ್ರಾರ್ಥಿಸಿದ್ದಾರೆ. ಎಲ್ಲರ ಪ್ರಾರ್ಥನೆ ಓಖಿಗೆ ಕೇಳೀತಾ? ಅದು ಮುನಿಸನ್ನೆಲ್ಲ ಮರೆತು ಸುಮ್ಮನಾದೀತಾ..? ಆಗಲಿ ಎಂಬುದು ನಮ್ಮದೂ ಹಾರೈಕೆ.

ಓಖಿಗೂ ಮುನ್ನ ಭಾರತೀಯರ ನಿದ್ದೆಕೆಡಿಸಿದ್ದ 7 ಕ್ರೂರ ಚಂಡಮಾರುತಓಖಿಗೂ ಮುನ್ನ ಭಾರತೀಯರ ನಿದ್ದೆಕೆಡಿಸಿದ್ದ 7 ಕ್ರೂರ ಚಂಡಮಾರುತ

ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಓಖಿ ಅಬ್ಬರ ಕೆಲವು ವಿಡಿಯೋ, ಚಿತ್ರಗಳು ಇಲ್ಲಿವೆ. ಲಕ್ಷದ್ವೀಪದ ಜನರ ಪಾಡನ್ನು ಪದಗಳಿಗಿಂತ ಪರಿಣಾಮಕಾರಿಯಾಗಿ ಈ ವಿಡಿಯೋ ಮತ್ತು ಚಿತ್ರಗಳೇ ಹೇಳುವುದು ಸುಳ್ಳಲ್ಲ!

ನಮ್ಮ ಪ್ರಾರ್ಥನೆ ನಿಮಗಾಗಿ!

ಸದ್ಯಕ್ಕೆ ಓಖಿ ಚಂಡಮಾರುತ ಲಕ್ಷದ್ವೀಪದತ್ತ ಸಾಗಿದೆ. ಅಲ್ಲಿನ ಜನರಿಗಾಗಿ ನಮ್ಮೆಲ್ಲ ಪ್ರಾರ್ಥನೆ ಎಂದು ಬದ್ರುದ್ದೀನ್ ಎಂಬುವವರು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ. ಮಂಗಳೂರಿನಲ್ಲಿ ಓಖಿ ಭೀತಿ ಆವರಿಸಿದ್ದು, ಕಡಲ ತೀರದಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಗಂಟೆಗೆ 110-120 ಕಿ.ಮೀ.ವೇಗ!

ಸೈಕ್ಲೋನ್ ಓಖಿ ಇದೀಗ ಲಕ್ಷದ್ವೀಪದತ್ತ ಮನೆಮಾಡಿದೆ. ಎಲ್ಲೆಡೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಶ್ವಿನ್ ತಿರುವನಂತಪುರಂ ಟ್ವೀಟ್ ಮಾಡಿದ್ದಾರೆ. ಓಖಿ ಸದ್ಯಕ್ಕೆ ಗಂಟೆಗೆ 110-120 ಕಿ.ಮೀ.ವೇಗದಲ್ಲಿ ಸಾಗುತ್ತಿದೆ!

ಲಕ್ಷದ್ವೀಪಕ್ಕೆ ಬೇಕಿದೆ ಹೆಚ್ಚಿನ ರಕ್ಷಣೆ

ಲಕ್ಷದ್ವೀಪ ಅಪಾಯದಲ್ಲಿದೆ. ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಏಕೆಂದರೆ ಅಲ್ಲಿ ವಿದ್ಯುತ್ ಇಲ್ಲ, ಸಂವಹನ ಮಾಧ್ಯಮಗಳೂ ಇಲ್ಲ. ಭದ್ರತೆಯಿಲ್ಲ, ರಕ್ಷಣಾ ಕಾರ್ಯಾಚರಣೆಯೂ ಇಲ್ಲ ಎಂದು ಶಫೀಖ್ ರಹಮಾನ್ ಎನ್ನುವವರು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.

ಲಕ್ಷದ್ವೀಪದ ಈಗಿನ ಚಿತ್ರ

ಲಕ್ಷದ್ವೀಪದಲ್ಲಿರುವ ನನ್ನ ಸ್ನೇಹಿತ ಮೊಹಮ್ಮದ್ ಸಲೀಮ್ ಈಗಷ್ಟೆ ಕಳಿಸಿದ ಚಿತ್ರಗಳು ಇವು ಎಂದು ಕೆಲವು ಚಿತ್ರಗಳನ್ನು ಬದ್ರುದ್ದೀನ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಲಕ್ಷದ್ವೀಪದ ಭಯಾನಕ ಸ್ಥಿತಿಯನ್ನು ಈ ಚಿತ್ರಗಳು ಸಮರ್ಪಕವಾಗಿ ತೋರಿಸುತ್ತಿವೆ!

ಲಕ್ಷದ್ವೀಪದ ಬೆಳಗ್ಗಿನ ಚಿತ್ರ!

ಇಂದು ಬೆಳಿಗ್ಗೆ ಲಕ್ಷದ್ವೀಪದಲ್ಲಿ ಸ್ಮಶಾನ ಸದೃಶ ನಾತಾವರಣ ಸೃಷ್ಟಿಯಾಗಿತ್ತು. ಎಲ್ಲೆಲ್ಲೂ ಮುರಿದು ಬಿದ್ದ ಮರಗಳು, ಮನೆಗಳು, ಮಳೆ, ನೀರು... ನರಪಿಳ್ಳೆಯ ಪತ್ತೆಯಿಲ್ಲ! ಅವುಗಳ ಚಿತ್ರವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

English summary
After Tamil Nadu and Keral, Ockhi cyclone has started to create havoc in Lakshadweep. Many videos and pictures are effectively showing the horrible affect of the deadliest Cyclone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X