Stock Market Holidays 2025: ಏಪ್ರಿಲ್‌ನಲ್ಲಿ ಷೇರು ಮಾರುಕಟ್ಟೆ ಎಷ್ಟು ದಿನ ರಜೆ? 2025ರ ರಜಾ ದಿನಗಳ ವಿವರ
Share Markets Holidays 2025: ಚಿನ್ನದ ಜೊತೆಗೆ ಭಾರತದ ಸೇರಿದಂತೆ ದೇಶ, ವಿದೇಶಗಳು ಸ್ಟಾಕ್ ಮಾರುಕಟ್ಟೆ ಮೇಲೆ ಅಪಾರ ಬಂಡವಾಳ ಹೂಡಿಕೆ ಮಾಡುತ್ತವೆ. ಇಲ್ಲಿ ಹೂಡಿಕೆದಾರರಿಗೆ, ಖರೀದಿ ಮಾರಾಟಗಾರರಿಗೆ ಒಂದೊಂದು ಕ್ಷಣವು ಅತ್ಯಮೂಲ್ಯವಾಗಿರುತ್ತದೆ. ಈ ಷೇರುಪೇಟೆ ಏಪ್ರಿಲ್ ತಿಂಗಳಲ್ಲಿ ಮೂರು ದಿನ ಸಂಪೂರ್ಣ ಬಂದ್ (NSE Holidays 2025) ಆಗಿರಲಿದೆ. ಇದನ್ನು ಷೇರು ಮಾರುಕಟ್ಟೆ ರಜಾ ಕ್ಯಾಲೆಂಡರ್ ಆಧರಿಸಿ ನೀಡಲಾಗುತ್ತಿದೆ. ಇಲ್ಲಿ ನೀವು ಏಪ್ರಿಲ್ ತಿಂಗಳು, ಮತ್ತು ಈ ವರ್ಷದ ಷೇರುಪೇಟೆ ರಜಾ ದಿನ ಪಟ್ಟಿ ತಿಳಿಯಬಹುದು.
ಈ ತಿಂಗಳು ಏಪ್ರಿಲ್ 2025 ರಲ್ಲಿ ಭಾರತ ಷೇರು ಮಾರುಕಟ್ಟೆಗಳು (NSE and BSE holidays 2025) ಒಟ್ಟು ಮೂರು ದಿನಗಳವರೆಗೆ ಮುಚ್ಚಲಿವೆ. ಅಂದು ಸ್ಟಾರ್ ವಹೀವಾಟು, ಮಾರಾಟ, ಮ್ಯೂಚುವಲ್ ಫಂಡ್ ಸೇರಿದಂತೆ ಯಾವ ವಹೀವಾಟು ನಡೆಯದೇ ಮುಚ್ಚಲ್ಪಡುತ್ತವೆ. ಉತ್ಪನ್ನಗಳು, ಷೇರುಗಳು, ಎಸ್‌ಎಲ್‌ಬಿಗಳು, ಕರೆನ್ಸಿ ಉತ್ಪನ್ನಗಳು ಮತ್ತು ಬಡ್ಡಿದರದ ಉತ್ಪನ್ನಗಳಲ್ಲಿನ ಎಲ್ಲಾ ವಹಿವಾಟುಗಳು ಸ್ಥಗಿತಗೊಳ್ಳಲಿವೆ.

ಏಪ್ರಿಲ್ ರಜಾ ದಿನದ ಪಟ್ಟಿ
ಪ್ರತಿ ವರ್ಷವು ಷೇರು ಮಾರುಕಟ್ಟೆ ರಜಾ ಕ್ಯಾಲೆಂಡರ್ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (BSE) ವಾರ್ಷಿಕವಾಗಿ ಪ್ರಕಟಿಸುತ್ತವೆ. ಏಪ್ರಿಲ್‌ನಲ್ಲಿ ಮೊದಲ ರಜಾ ದಿನಾ ಇಂದು (ಏಪ್ರಿಲ್ 10) ಮಹಾವೀರ ಜಯಂತಿಯಂದು ಇದ್ದರೆ, ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ (ಏಪ್ರಿಲ್ 14 ) ಮತ್ತು ಶುಭ ಶುಕ್ರವಾರ (ಏಪ್ರಿಲ್ 18) ಸೇರಿ ಒಟ್ಟು ಮೂರು ದಿನ ಭಾರತದ ಷೇರು ಮಾರುಕಟ್ಟೆಗೆ ರಜೆ ಇರಲಿದೆ.
ಭಾರತದ ಸ್ಟಾಕ್ ಮಾರ್ಕೆಟ್ ರಜಾ ದಿನಗಳು 2025, ಪಟ್ಟಿ
* ಮೇ 01 ಗುರುವಾರ: ಮಹಾರಾಷ್ಟ್ರ ದಿನ
* ಆಗಸ್ಟ್ 15 ಶುಕ್ರವಾರ: ಸ್ವಾತಂತ್ರ್ಯ ದಿನ /ಪಾರ್ಸಿ ಹೊಸ ವರ್ಷ
* ಆಗಸ್ಟ್ 27 ಬುಧವಾರ: ಶ್ರೀ ಗಣೇಶ ಚತುರ್ಥಿ
* ಅಕ್ಟೋಬರ್ 02 ಗುರುವಾರ: ಮಹಾತ್ಮ ಗಾಂಧಿ ಜಯಂತಿ/ದಸರಾ
* ಅಕ್ಟೋಬರ್ 21 ಮಂಗಳವಾರ : ದೀಪಾವಳಿ ಲಕ್ಷ್ಮಿ ಪೂಜೆ
* ಅಕ್ಟೋಬರ್ 22 ಬುಧವಾರ: ಬಲಿಪ್ರತಿಪದ
* ನವೆಂಬರ್ 05 ಬುಧವಾರ: ಪ್ರಕಾಶ್ ಗುರುಪುರ್ ಶ್ರೀ ಗುರುನಾನಕ್ ದೇವ್
* ಡಿಸೆಂಬರ್ 25 ಗುರುವಾರ: ಕ್ರಿಸ್‌ಮಸ್ ಆಚರಣೆ ವೇಳೆ ಶೇರ್ ಮಾರ್ಕೆಟ್ ರಜೆ ಇರುತ್ತದೆ.

ಹೂಡಿಕೆದಾರರು, ವ್ಯಾಪಾರಿಗಳು ಗಮನಿಸಿ
ಇದರೊಂದಿಗೆ ಅಕ್ಟೋಬರ್ 21ರಂದು ಮಂಗಳವಾರ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಆಗ ಲಕ್ಷ್ಮಿ ಪೂಜೆಯ ಕಾರಣ ವ್ಯಾಪಾರ ರಜೆ ಇರುತ್ತದೆ. ಈ ದಿನ ಮಹೂರ್ತ ವ್ಯಾಪಾರ ದಿನ ನಡೆಸಲಾಗುತ್ತದೆ. ಈ ಎಲ್ಲ ರಜೆದಿನಗಳನ್ನು ಸ್ಟಾಕ್ ಮೇಲಿನ ಹೂಡಿಕೆದಾರರು ಮತ್ತು ವಹೀವಾಟುದಾರರು, ಎಸ್‌ಐಪಿ ಸದಸ್ಯರು ಗಮನಿಸಬೇಕು. ಅಕ್ಟೋಬರ್ ತಿಂಗಳಲ್ಲಿ ಆ ದಿನದ ವ್ಯಾಪಾರ ಸಮಯವನ್ನು ಬಿಎಸ್‌ಸಿ, ಎನ್‌ಎಸ್‌ಸಿ ತಿಳಿಸಲಿವೆ.
ಇನ್ನು ಭಾರತ ಷೇರು ಮಾರುಕಟ್ಟೆಗಳು ಪ್ರತಿ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಹೀಗಾಗಿ ಅವೆರಡು ದಿನ ಹೊರುತಪಡಿಸಿ 2025ರ ಸ್ಟಾಕ್ ಮಾರ್ಕೆಟ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications