ನನ್ನ ಹೆಂಡತಿ ಆಪರೇಷನ್ಸ್ ಮ್ಯಾನೇಜರ್ ಆದಳು: ಭಾರತದಲ್ಲಿ ಮನೆಕೆಲಸದವರ ನಿರ್ವಹಣೆಯೇ ದೊಡ್ಡ ತಲೆನೋವು ಎಂದ NRI ಪೋಸ್ಟ್ ವೈರಲ್

ಭಾರತಕ್ಕೆ ಬರುವುದೆಂದರೆ ಎಂದರೆ ಆರಾಮದಾಯಕ ಜೀವನ, ಕೆಲಸಗಾರರು, ಮತ್ತು ರಾಜವೈಭೋಗ ಎಂಬುದು ಅನೇಕ ಅನಿವಾಸಿ ಭಾರತೀಯರ (ಎನ್‌ಆರ್‌ಐ) ಕನಸು. ವಿದೇಶಗಳಲ್ಲಿ ಎಲ್ಲವನ್ನೂ ತಾವೇ ಮಾಡಿಕೊಳ್ಳುವ ಜನರು, ಭಾರತದಲ್ಲಿ ಮನೆಗೆಲಸಕ್ಕೆ ಆಳುಗಳು ಸಿಗುವುದರಿಂದ ಜೀವನ ಸುಲಭವಾಗುತ್ತದೆ ಎಂದು ಭಾವಿಸುತ್ತಾರೆ.

ಆದರೆ, ಇತ್ತೀಚೆಗೆ ಎನ್‌ಆರ್‌ಐ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ಒಂದು, ಭಾರತದಲ್ಲಿ ಮನೆಕೆಲಸದವರನ್ನ ಇಟ್ಟುಕೊಳ್ಳುವುದು ಎಷ್ಟು ದೊಡ್ಡ ತಲೆನೋವು ಹಾಗೂ ಮಾನಸಿಕ ಕಿರಿಕಿರಿ ಎಂಬುದನ್ನು ಬಿಚ್ಚಿಟ್ಟಿದೆ.

NRI Man Says Wife Turned Into Operations Manager For Maids In India Internet Agrees On Mental Toll

ಅವರ ಪತ್ನಿ ಭಾರತದಲ್ಲಿ ಕಳೆದ ನಾಲ್ಕು ತಿಂಗಳ ಅನುಭವವನ್ನ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ನೆಟ್ಟಿಗರ ಭಾರಿ ಚರ್ಚೆಗೆ ಕಾರಣವಾಗಿದೆ.

ವಿದೇಶದ ಸ್ವಾವಲಂಬಿ ಜೀವನ

ವಿದೇಶಗಳಲ್ಲಿ ಬಹುತೇಕರು ಎಲ್ಲವನ್ನೂ ತಾವೇ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ತಂತ್ರಜ್ಞಾನ ಮತ್ತು ಯಂತ್ರಗಳ ಸಹಾಯದಿಂದ ಅಲ್ಲಿನ ಮನೆಗೆಲಸ ಬೇಗ ಮುಗಿಯುತ್ತದೆ. ಆ ಗಂಡ-ಹೆಂಡತಿ ಭಾರತಕ್ಕೆ ಶಾಶ್ವತವಾಗಿ ಮರಳುವ ಮುನ್ನ, ಆಕೆ ನಾಲ್ಕು ತಿಂಗಳು ಭಾರತದಲ್ಲಿ ಬಂದು ನೆಲೆಸಿದ್ದರು. ಭಾರತದಲ್ಲಿ ಕಡಿಮೆ ಖರ್ಚಿನಲ್ಲಿ ಕೆಲಸದಾಳುಗಳು ಸಿಗುವುದರಿಂದ ತನ್ನ ದಿನಚರಿ ಸುಲಭವಾಗುತ್ತದೆ ಎಂದು ಆಕೆ ಭಾವಿಸಿದ್ದರು.

ಆದರೆ ಕೇವಲ ಎರಡೇ ವಾರಗಳಲ್ಲಿ ಅವರ ಭ್ರಮೆ ನಿರಾಸೆಯಾಗಿದೆ. ವಿದೇಶದ ಶಿಸ್ತುಬದ್ಧ ಹಾಗೂ ನಿಗದಿತ ಸಮಯದ ಜೀವನಕ್ಕೆ ಒಗ್ಗಿಕೊಂಡಿದ್ದ ಅವರಿಗೆ, ಭಾರತದ ಕೆಲಸದಾಳುಗಳ ಅಶಿಸ್ತು ದೊಡ್ಡ ಸವಾಲಾಗಿ ಪರಿಣಮಿಸಿತು.

ಮನೆಕೆಲಸದವರ ನಿರ್ವಹಣೆ ಆಪರೇಷನ್ಸ್ ಮ್ಯಾನೇಜರ್ ಹುದ್ದೆಗಿಂತ ಕಮ್ಮಿಯಿಲ್ಲ

"ಭಾರತದಲ್ಲಿ ನನ್ನ ಪತ್ನಿ ಅಕ್ಷರಶಃ ಒಬ್ಬ 'ಆಪರೇಷನ್ಸ್ ಮ್ಯಾನೇಜರ್' ಆಗಿ ಬದಲಾಗಿದ್ದಳು" ಎಂದು ಆ ವ್ಯಕ್ತಿ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಅಡುಗೆಯವರು, ಕಸ ಗುಡಿಸುವವರು ಮತ್ತು ವಾರಕ್ಕೊಮ್ಮೆ ಬರುವ ಡೀಪ್ ಕ್ಲೀನಿಂಗ್ ಮಾಡುವವರನ್ನ ಒಟ್ಟುಗೂಡಿಸಿ, ಅವರ ಸಮಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವುದು ತೀವ್ರ ಕಿರಿಕಿರಿ ತರಿಸಿತ್ತು. ಅವರು ಯಾವ ಸಮಯದಲ್ಲಿ ಬರುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರಲಿಲ್ಲ.

ಹೇಳದೆ ಕೇಳದೆ ರಜೆ ಹಾಕುವುದು, ತಾವು ಹೇಳಿದಂತೆ ಕೇಳದೆ ತಮಗೆ ಇಷ್ಟ ಬಂದಂತೆ ಕೆಲಸ ಮಾಡುವುದು ಹೀಗೆ ಕೆಲಸಗಾರರ ವರ್ತನೆಯಿಂದ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದರು. ತನಗೆ ಬಿಡುವಿನ ವೇಳೆ ಸಿಗುತ್ತದೆ ಎಂದುಕೊಂಡಿದ್ದ ಆಕೆಯ ಮುಕ್ಕಾಲು ದಿನ ಕೇವಲ ಈ ಕೆಲಸದಾಳುಗಳಿಗಾಗಿ ಕಾಯುವುದರಲ್ಲೇ ಕಳೆಯುತ್ತಿತ್ತು ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ. ದೈಹಿಕ ಶ್ರಮ ತಪ್ಪಿದರೂ, ಇಲ್ಲಿ ಮಾನಸಿಕ ಶ್ರಮ ದುಪ್ಪಟ್ಟಾಗಿತ್ತು.

ವೈರಲ್ ರೆಡ್ಡಿಟ್ ಪೋಸ್ಟ್: 'ಮೇಮ್ ಸಾಹೇಬ್' ಆಗುವುದು ಕೂಡ ಒಂದು ಕಲೆ

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಈ ಸಮಸ್ಯೆಯನ್ನ ಒಪ್ಪಿಕೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ಭಾರತದಲ್ಲಿ 'ಮೇಮ್ ಸಾಹೇಬ್' ಆಗುವುದು ಕೂಡ ಒಂದು ಕೌಶಲ್ಯ. ಎಲ್ಲರಿಗೂ ಕೆಲಸದವರಿಂದ ಕೆಲಸ ಮಾಡಿಸಲು ಬರುವುದಿಲ್ಲ. ಅದಕ್ಕೆ ಒಂದು ದರ್ಪ ಮತ್ತು ನಿರ್ವಹಣಾ ಕಲೆ ಬೇಕು, ಇದು ಇಂದಿನ ಯುವಜನತೆಗೆ ಕಷ್ಟ" ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ವಿದೇಶಗಳಲ್ಲಿ ಮನೆಗೆಲಸದ ಸೇವೆಗಳು ಅತ್ಯಂತ ದುಬಾರಿ, ಆದರೆ ಅಲ್ಲಿ ವೃತ್ತಿಪರತೆ ಇರುತ್ತದೆ. ಹೀಗಾಗಿ ಅವರನ್ನ ನಿರ್ವಹಿಸುವ ಅಗತ್ಯವಿರುವುದಿಲ್ಲ. ಭಾರತದಲ್ಲಿ ಕಡಿಮೆ ಸಂಬಳಕ್ಕೆ ಕೆಲಸಗಾರರು ಸಿಗುತ್ತಾರೆ, ಆದರೆ ತರಬೇತಿ ಮತ್ತು ವೃತ್ತಿಪರತೆಯ ಕೊರತೆ ಇರುತ್ತದೆ.

ವಿದೇಶದಲ್ಲಿ ನೀವು ಕೇವಲ ಒಂದು ಗಂಟೆಯಲ್ಲಿ ಇಡೀ ಮನೆಯನ್ನು ಸ್ವಚ್ಛಗೊಳಿಸಿ ನಿಮ್ಮ ಪಾಡಿಗೆ ನೀವು ಇರಬಹುದು. ಆದರೆ ಭಾರತದಲ್ಲಿ ದೈಹಿಕ ಶ್ರಮ ಕಡಿಮೆಯಾದರೂ, ಮೂರ್ನಾಲ್ಕು ಜನರನ್ನು ನಿಭಾಯಿಸುವ ಮಾನಸಿಕ ಒತ್ತಡ ಮಾತ್ರ ಯಾರಿಗೂ ತಪ್ಪಿದ್ದಲ್ಲ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+