NRI: ಭಾರತಕ್ಕೆ ಬಂದು ತಪ್ಪು ಮಾಡಿ ಬಿಟ್ಟೆ: ಅಮೆರಿಕದಲ್ಲೇ ಇದ್ದಿದ್ದರೆ ಚೆನ್ನಾಗಿತ್ತು ಎಂದ ಎನ್‌ಆರ್‌ಐ, ವೈರಲ್ ಪೋಸ್ಟ್
ಭಾರತದಿಂದ ವಿದೇಶಕ್ಕೆ ಹೋದ ಕೂಡಲೇ ಸೆಟಲ್ ಆಗಿ ಬಿಡುತ್ತಾರೆ. ಹೆಚ್ಚು ದುಡ್ಡು ಮಾಡಬಹುದು, ದುಡ್ಡು ತುಂಬಾ ಸರಳವಾಗಿ ಬರುತ್ತದೆ ಎನ್ನುವ ಪರಿಕಲ್ಪನೆ ಹಲವರಲ್ಲಿ ಇದೆ. ಕರ್ನಾಟಕದ ವಿವಿಧ ಪ್ರದೇಶಗಳಿಂದ ಬೆಂಗಳೂರಿಗೆ ಬರುವವರಿಗೂ ಈ ಕಲ್ಪನೆ ಇದೆ. ಅದರೆ, ಅಮೆರಿಕದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದು, ಭಾರತಕ್ಕೆ ಮರಳಿದ ಅನಿವಾಸಿ ಭಾರತೀಯರೊಬ್ಬರು ಭಾರತಕ್ಕೆ ಬಂದ ನಂತರ ಹೇಗೆ ಕಷ್ಟವಾಗುತ್ತಿದೆ ಅಂತ ಹೇಳಿಕೊಂಡಿದ್ದಾರೆ.
ಭಾರತಕ್ಕೆ ಹಿಂದಿರುಗಿದ ಆರು ತಿಂಗಳ ನಂತರ ಹಳೆಯ ಸ್ನೇಹಿತರು ಮತ್ತು ಕುಟುಂಬದಿಂದ ದೂರವಾಗಿ ಹೇಗೆ ಒಂಟಿತನ ಅನುಭವಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ರೆಡ್ಡಿಟ್‌ನಲ್ಲಿ ಈ ಪೋಸ್ಟ್ ಮಾಡಲಾಗಿದ್ದು, ಇದೀಗ ಈ ಪೋಸ್ಟ್ ಭಾರೀ ವೈರಲ್ ಆಗಿದೆ.

ಭಾರತದಿಂದ ಅಮೆರಿಕಾಗೆ ಹೋಗಿ ಹಲವು ವರ್ಷ ನೆಲೆಸಿದ್ದೆ. ಈಚೆಗೆ ಭಾರತಕ್ಕೆ ಹಿಂದಿರುಗಿದ್ದೇನೆ ಆದರೆ ಈಗ ಆಗುತ್ತಿರುವ ಅನುಭವ ನೋಡಿದರೆ ನಾನು ಭಾರತಕ್ಕೆ ಹಿಂದಿರುಗಿದ ನಿರ್ಧಾರ ಸರಿಯೇ ಎಂದು ಪ್ರಶ್ನಿಸಿಕೊಳ್ಳುವಂತೆ ಆಗಿದೆ ಎಂದು ಹೇಳಿದ್ದಾರೆ. ರೆಡ್ಡಿಟ್ ಬಳಕೆದಾರರು ಭಾರತಕ್ಕೆ ಮರಳಿದ ನಂತರ ಒಂಟಿತನ ಅನುಭವಿಸುತ್ತಿರುವ ಬಗ್ಗೆ ಮಾತನಾಡುತ್ತಿದ್ದಾರೆ. "ನಾನು ನಂಬಲಾಗದಷ್ಟು ಒಂಟಿತನ ಅನುಭವಿಸುತ್ತಿದ್ದೇನೆ' ಎಂದಿದ್ದಾರೆ.
ಅಮೆರಿಕಾದಲ್ಲಿ ನೆಲೆಸಿದ್ದಾಗ ಪೋಷಕರ ಬಗ್ಗೆ ಚಿಂತಿಸುತ್ತಿದ್ದೆ
ಅಮೆರಿಕಾದಲ್ಲಿ ನೆಲೆಸಿದ್ದಾಗ ಪೋಷಕರ ಬಗ್ಗೆ ಚಿಂತಿಸುತ್ತಿದ್ದೆ. ಪೋಷಕರು ಹಾಗೂ ಆತ್ಮೀಯರಿಗೆ ಹತ್ತಿರವಾಗಬೇಕು ಎನ್ನುವ ಉದ್ದೇಶದಿಂದ ಅಮೆರಿಕಾದಿಂದ ಭಾರತಕ್ಕೆ ಹಿಂದಿರುಗಿದ್ದೆ. ಅಲ್ಲಿದ್ದಾಗ ಭಾರತಕ್ಕೆ ಬರುವುದು ನನಗೆ ಸರಿಯಾದ ನಿರ್ಧಾರ ಅಂತ ತೋರುತ್ತಿತ್ತು, ಆದರೆ ಮತ್ತೆ ಇಲ್ಲಿ ಬದುಕುವುದು ನಿರೀಕ್ಷೆಗಿಂತ ಕಷ್ಟಕರವಾಗಿದೆ. ಆದರೆ ಈಗ ನನಗೆ ನಂಬಲಾಗದಷ್ಟು ಒಂಟಿತನ ಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು ನನ್ನ ಹಳೆಯ ಸ್ನೇಹಿತರು ಅವರವರ ಜೀವನದಲ್ಲಿ ಬದಲಾಗಿದ್ದಾರೆ. ಅವರು ಆಗಾಗ್ಗೆ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ನನಗೆ ಅವರೊಂದಿಗೆ ಮತ್ತೆ ಕನೆಕ್ಟ್ ಆಗಲು ಸಾಧ್ಯವಾಗುತ್ತಿಲ್ಲ. ಜೀವನವು ಬದಲಾಗುತ್ತದೆ ಎಂದು ನನಗೆ ಅರ್ಥವಾಗಿದೆ, ಆದರೆ ಪದೇ ಪದೇ ಪ್ರಯತ್ನಿಸಿದ ನಂತರ, ಈ ಸ್ನೇಹವನ್ನು ಕಾಪಾಡಿಕೊಳ್ಳುವ ಬಗ್ಗೆ ಕಾಳಜಿ ವಹಿಸುವ ಏಕೈಕ ವ್ಯಕ್ತಿ ನಾನು ಮಾತ್ರ ಅಂತ ಅನಿಸುತ್ತಿದೆ ಎಂದಿದ್ದಾರೆ.
ನಾನು ಭಾರತಕ್ಕೆ ಹಿಂದಿರುಗಿದ ನಂತರ ಹಳೆಯ ಸ್ನೇಹಿತರು ಸಿಗಬಹುದು. ಹೆಚ್ಚು ಜನರೊಂದಿಗೆ ಬೆರೆಯಬಹುದು, ಕುಟುಂಬದೊಂದಿಗೆ ಹತ್ತಿರವಾಗಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಬದಲಾಗಿ ಹೆಚ್ಚು ಸಂಪರ್ಕ ಕಡಿತಗೊಂಡಿದೆ. ನಾನು ಅಮೆರಿಕದಲ್ಲಿ ನನ್ನ ಜೀವನದ ಬಗ್ಗೆ ಯೋಚಿಸುತ್ತಲೇ ಇರುತ್ತೇನೆ. ಮನೆಗೆ ಮರಳಬೇಕೆಂದು ಬಯಸಿದ್ದ ತಮ್ಮ ಪೋಷಕರನ್ನು ದೂಷಿಸಲು ಬಯಸುವುದಿಲ್ಲ ಅಂತಲೂ ಅವರು ಹೇಳಿದ್ದಾರೆ.
ವಿದೇಶದಲ್ಲಿ ವಾಪಸ್ ಆದ ನಂತರ ಭಾರತಕ್ಕೆ ಹಿಂದಿರುಗಿದ ಇತರರಿಗೂ ಇದೇ ರೀತಿಯ ಒಂಟಿತನ ಮತ್ತು ಸಂಪರ್ಕ ಕಡಿತವನ್ನು ಅನುಭವಿಸಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ವಿದೇಶಕ್ಕೆ ಹೋಗಿ ಬಂದ ಕೂಡಲೇ ಜನ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಾರೆ. ಒಳ್ಳೆಯ ದುಡ್ಡು ಮಾಡಿಕೊಂಡು, ಸರಳ ಜೀವನ ಅನುಭವಿಸುತ್ತಾರೆ ಎನ್ನುವ ಪರಿಕಲ್ಪನೆಯು ಹಲವರಲ್ಲಿ ಇದೆ.
ಇದರಲ್ಲಿ ಬೆಂಗಳೂರಿನಂತಹ ಸಿಟಿಯಲ್ಲಿದ್ದರೂ ಭಾರೀ ದುಡ್ಡು ಮಾಡಬಹುದು. ಬೆಂಗಳೂರಿಂದ ಬಂದವರ ಬಳಿ ತುಂಬಾ ದುಡ್ಡು ಇರುತ್ತದೆ ಎನ್ನುವುದು ಕರ್ನಾಟಕದಲ್ಲಿಯೇ ಇದೆ. ಆದರೆ ಬೇರೆ ಊರು, ನಗರ ಹಾಗೂ ದೇಶಗಳಿಗೆ ಹೋಗಿ ಜೀವನ ನಡೆಸುವುದು ಸುಲಭವಲ್ಲ. ವಿದೇಶಕ್ಕೆ ಹೋದವರು ತಮ್ಮದೇ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಂದು ನೆಟ್ಟಿಗರು ಹೇಳಿದ್ದಾರೆ.


Click it and Unblock the Notifications
