ಚಿತ್ರಗಳು : ಚಂಡೀಗಢದಲ್ಲಿ ಮೋದಿ ಯೋಗ ಪ್ರದರ್ಶನ

Posted By:
Subscribe to Oneindia Kannada

ಚಂಡೀಗಢ, ಜೂನ್ 21 : 'ಯೋಗ ಈಗ ಒಂದು ಅಂತಾರಾಷ್ಟ್ರೀಯ ಚಳವಳಿಯಾಗಿದೆ. ಮೊಬೈಲ್ ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಯೋಗವನ್ನು ಜೀವನದ ಅಂಗವಾಗುವಂತೆ ಅಳವಡಿಸಿಕೊಳ್ಳಿ' ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಮಂಗಳವಾರ ಬೆಳಗ್ಗೆ ಚಂಡೀಗಢದ ಕ್ಯಾಪಿಟಲ್ ಕಾಂಪ್ಲೆಕ್ಸ್‌ನಲ್ಲಿ 2ನೇ ವಿಶ್ವ ಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದ ಮೋದಿ,​ 'ಬಡವರು, ಶ್ರೀಮಂತರು ಯೋಗ ಮಾಡುತ್ತಾರೆ. ಯೋಗ ಇಡೀ ವಿಶ್ವವನ್ನೇ ಒಂದು ಮಾಡಿದೆ' ಎಂದು ಬಣ್ಣಿಸಿದರು. [ಯೋಗದ ಬಗ್ಗೆ ಖ್ಯಾತ ಮಾನಸಿಕ ತಜ್ಞರು ಹೀಗಂತಾರೆ]

narendra modi

'ದೇಹ ಮತ್ತು ಮನಸ್ಸು ನಿಯಂತ್ರಣದಲ್ಲಿಡಲು ಎಲ್ಲರೂ ಯೋಗ ಮಾಡಬೇಕು. ಯಾವುದೇ ವೆಚ್ಚವಿಲ್ಲದೇ ಯೋಗ ಜನರಿಗೆ ಉತ್ತಮ ಆರೋಗ್ಯ ನೀಡುತ್ತಿದೆ. ಯೋಗ ಒಂದು ಆರೋಗ್ಯ ವಿಮೆಯಾಗಿದೆ' ಎಂದು ಮೋದಿ ಹೇಳಿದರು. [ಯೋಗಾಸನ ಮಾಡುವವರು ಸೇವಿಸಬೇಕಾದ ಆಹಾರಗಳು]

-
-
-
-
-

'ಮುಂದಿನ ವರ್ಷದಿಂದ ಯೋಗದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಅಂತಾರಾಷ್ಟ್ರೀಯ ಯೋಗ ಪ್ರಶಸ್ತಿ ಮತ್ತು ರಾಷ್ಟ್ರಮಟ್ಟದ ಯೋಗ ಪ್ರಶಸ್ತಿ ನೀಡಲಾಗುವುದು' ಎಂದು ನರೇಂದ್ರ ಮೋದಿ ಹೇಳಿದರು.

ಕ್ಯಾಪಿಟಲ್ ಕಾಂಪ್ಲೆಕ್ಸ್‌ನಲ್ಲಿ ಸುಮಾರು 30 ಸಾವಿರ ಜನರು ಸಾಮೂಹಿಕವಾಗಿ ಯೋಗ ಪ್ರದರ್ಶನ ನೀಡಿದರು. ನರೇಂದ್ರ ಮೋದಿ ಅವರು ಅರ್ಧಚಕ್ರಾಸನ, ತ್ರಿಕೋನಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡಿದರು. [ಪಿಟಿಐ ಚಿತ್ರಗಳು]

-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Launching the 2nd International Yoga Day celebrations at Chandigarh, Prime Minister Narendra Modi said the event has become a people's movement. On June 21 morning Modi leading a mass yoga session where he is joined by 30,000 people.
Please Wait while comments are loading...