ಗಾಂಧಿ ಚಿತ್ರವುಳ್ಳ ಚಪ್ಪಲಿ ಮಾರುತ್ತಿರುವ ಅಮೆಜಾನ್

Posted By:
Subscribe to Oneindia Kannada

ನವದೆಹಲಿ, ಜನವರಿ 15: ಇತ್ತೀಚೆಗಷ್ಟೇ ಭಾರತೀಯ ಧ್ವಜವುಳ್ಳ ಕಾಲೊರಸುಗಳನ್ನು ತನ್ನ ಕೆನಡಾದ ವೆಬ್ ಸೈಟ್ ಗಳಲ್ಲಿ ಮಾರಾಟ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್, ಇದೀಗ, ವಿದೇಶಿ ಆವೃತ್ತಿಯ ವೆಬ್ ಸೈಟ್ ಗಳಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರವುಳ್ಳ ಚಪ್ಪಲಿಗಳನ್ನು ಮಾರಾಟ ಮಾಡುತ್ತಿದೆಯೆಂದು ಕೆಲ ಗ್ರಾಹಕರು ಟ್ವೀಟರ್ ನಲ್ಲಿ ದೂರಿದ್ದಾರೆ.

ಅಮೆಜಾನ್ ನ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಕಚೇರಿ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

After flag incident, slippers with Mahatma Gandhi image now on Amazon

ಇತ್ತೀಚೆಗಷ್ಟೇ, ಅಮೆಜಾನ್ ಕಂಪನಿಯ ಕೆನಡಾದ ಆವೃತ್ತಿಯ ಜಾಲತಾಣದಲ್ಲಿ ಭಾರತೀಯ ಧ್ವಜದ ಚಿತ್ರವುಳ್ಳ ಕಾಲೊರಸುಗಳನ್ನು ಮಾರಾಟ ಮಾಡುತ್ತಿರುವುದು ಟ್ವಿಟರ್ ನಲ್ಲಿ ಬಹಿರಂಗಗೊಂಡಿತ್ತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಮೆಜಾನ್ ಕಂಪನಿಯು ಭಾರತೀಯರ ಭಾವನೆಗಳಿಗೆ ನೋವು ತರಬಾರದು. ತಕ್ಷಣವೇ ಕಾಲೊರೆಸುಗಳ ಮಾರಾಟವನ್ನು ಹಿಂಪಡೆಯದಿದ್ದರೆ ಅಮೆಜಾನ್ ಅಧಿಕಾರಿಗಳಿಗೆ ಇನ್ನು ಮುಂದೆ ಭಾರತದ ವೀಸಾ ಸಿಗದಂತೆ ಮಾಡುವುದಾಗಿ ಎಚ್ಚರಿಸಿದ್ದರು.

ಇದರಿಂದ ಎಚ್ಚೆತ್ತಿದ್ದ ಅಮೆಜಾನ್, ತಕ್ಷಣವೇ ಆಕ್ಷೇಪಾರ್ಹ ಕಾಲೊರೆಸುಗಳನ್ನು ಹಿಂಪಡೆದಿತ್ತು. ಅಲ್ಲದೆ, ಸುಷ್ಮಾ ಜೀ ಅವರಿಗೆ ಪತ್ರವನ್ನೂ ಬರೆದು ಕ್ಷಮೆ ಯಾಚಿಸಿತ್ತು.

ಇದೀಗ, ಮಹಾತ್ಮಾ ಗಾಂಧಿಯವರ ಭಾವಚಿತ್ರವಿರುವ ಚಪ್ಪಲಿ ಮಾರಾಟ ಮಾಡುವ ಮೂಲಕ ಆ ಕಂಪನಿ ತನ್ನ ಉದ್ಧಟತನ ಮೆರೆದಿದೆ. ಈ ಬಗ್ಗೆ ಟ್ವೀಟರ್ ಗಳಲ್ಲಿ ಬಂದ ದೂರಿಗೆ ಸ್ಪಂದಿಸಿರುವ ಕೇಂದ್ರ ವಿದೇಶಾಂಗ ಇಲಾಖೆ, ಅಮೆಜಾನ್ ಕಂಪನಿಯು ಭಾರತೀಯ ಭಾವನೆಗಳಿಗೆ ನೋವು ತರಬಾರದು ಎಂದಷ್ಟೇ ಹೇಳಿ ಸುಮ್ಮನಾಗಿದೆ.

ಆದರೂ, ಇದು, ಅಮೆಜಾನ್ ಹಾಗೂ ಕೇಂದ್ರದ ನಡುವಿನ ಮತ್ತೊಂದು ಸುತ್ತಿನ ಜಗಳಕ್ಕೆ ನಾಂದಿ ಹಾಡಲಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Close on the heels of the Indian flag incident, external affairs minister Sushma Swaraj has now received several complaints of Amazon selling flip-flops with Mahatma Gandhi’s image.
Please Wait while comments are loading...