ಅತೀ ಹೆಚ್ಚು ಫಾಲೋವರ್ಸ್ : ಮೋದಿ ವಿಶ್ವಕ್ಕೆ ನಂ. 1

Subscribe to Oneindia Kannada

ಬೆಂಗಳೂರು, ಜನವರಿ 20: ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನಿರ್ಗಮನ ಮೋದಿ ಪಾಲಿಗೂ ಸಿಹಿ ಸುದ್ದಿ ಕೊಟ್ಟಿದೆ. ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ ನಂಬರ್ ವನ್ ನಾಯಕ ಕಿರೀಟ ಮೋದಿ ಪಾಲಾಗಲಿದೆ.

ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು ರಾತ್ರಿ (ಭಾರತೀಯ ಕಾಲಮಾನ) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರ ಬೆನ್ನಿಗೆ ಫೇಸ್ಬುಕ್, ಟ್ವಿಟ್ಟರ್, ಯೂಟ್ಯೂಬ್ ಗಳಲ್ಲಿ ಅತೀ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿರುವ ನಾಯಕರಾಗಿ ಮೋದಿ ಮೂಡಿ ಬರಲಿದ್ದಾರೆ.[ಇಷ್ಟಕ್ಕೂ ನರೇಂದ್ರ ಮೋದಿ ಜಾತಿ ಯಾವುದು?]

Now modi becomes ‘Most Followed Leader of the State'

ಭಾರತದಲ್ಲಿ ಡಿಜಿಟಲ್ ಮಾಧ್ಯಮಗಳನ್ನು ಜನರ ಜತೆ ಸಂಪರ್ಕ ಬೆಸೆಯಲು ಬಳಸಿದವರಲ್ಲಿ ಮೋದಿ ಅಗ್ರಗಣ್ಯರು. ಸದ್ಯ ಮೋದಿಗೆ ಟ್ವಿಟ್ಟರಿನಲ್ಲಿ 2.65 ಕೋಟಿ, ಪೇಸ್ಬುಕ್ಕಿನಲ್ಲಿ 3.92 ಕೋಟಿ, ಗೂಗಲ್ ಪ್ಲಸ್ ನಲ್ಲಿ 32 ಲಕ್ಷ, ಇನ್ ಸ್ಟಾಗ್ರಾಮ್ ನಲ್ಲಿ 58 ಲಕ್ಷ, ಲಿಂಕ್ಡ್ ಇನ್ ನಲ್ಲಿ 20 ಲಕ್ಷ ಹಾಗೂ ಯೂಟ್ಯೂಬ್ ನಲ್ಲಿ 59 ಲಕ್ಷ ಻ಅನುಯಾಯಿಗಳಿದ್ದಾರೆ. ಇನ್ನು ಮೋದಿ ಆ್ಯಪ್ 1 ಕೋಟಿ ಡೌನ್ಲೋಡ್ ಆಗಿದ್ದು, ರಾಜಕೀಯ ವ್ಯಕ್ತಿಯೊಬ್ಬರ ಆ್ಯಪ್ ಗಳು ಅತೀ ಹೆಚ್ಚು ಡೌನ್ಲೋಡ್ ಆದ ದಾಖಲೆ ಅವರ ಹೆಸರಿನಲ್ಲಿದೆ.[ನರೇಂದ್ರ ಮೋದಿ 66ನೇ ಹುಟ್ಟುಹಬ್ಬ ಗಿನ್ನಿಸ್ ದಾಖಲೆಗಳ ಪಟ್ಟಿಗೆ!]

ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ಜಾಲ ತಾಣಗಳ ಮೂಲಕವೇ ಹೆಚ್ಚಾಗಿ ಮೋದಿ ಜನರ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಸಂದೇಶ್ ಟು ಸೋಲ್ಜರ್ಸ್, ಮೈ ಕ್ಲೀನ್ ಇಂಡಿಯಾ, ಇನ್ ಕ್ರೆಡಿಬಲ್ ಇಂಡಿಯಾ, ಸೆಲ್ಫಿ ವಿತ್ ಡಾಟರ್ ನಂಥ ಹಲವು ಆಂದೋಲನಗಳನ್ನು ಮೋದಿ ಸಾಮಾಜಿಕ ಜಾಲತಾಣಗಳ ಮೂಲಕವೇ ಮಾಡಿದ್ದು ಅವರ ಅನುಯಾಯಿಗಳ ಸಂಖ್ಯೆ ಹೆಚ್ಚುವಲ್ಲಿ ಮಹತ್ತರ ಪಾತ್ರ ವಹಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As Barack Obama leaves his office, Prime Minister Narendra Modi became the most followed leader of the state on social media.
Please Wait while comments are loading...