ದೆಹಲಿ ಮದ್ಯ ಹಗರಣ ಕುರಿತು ವರದಿ ಪ್ರಕಟಿಸಿದ್ದ ಚಾನಲ್‌ಗಳಿಗೆ ನೋಟಿಸ್
ನವದೆಹಲಿ, ನವೆಂಬರ್ 21: ದೆಹಲಿ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಅಧಿಕೃತ ಪತ್ರಿಕಾ ಪ್ರಕಟಣೆಗಳಿಗೆ ಅನುಗುಣವಾಗಿ ಮತ್ತು ಮಾರ್ಗಸೂಚಿಗಳ ಅನುಸಾರ ವರದಿ ಪ್ರಕಟಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ ಸುದ್ದಿ ವಾಹಿನಿಗಳಿಗೆ ನಿರ್ದೇಶನ ನೀಡಿದೆ.
ತನಿಖಾ ಸಂಸ್ಥೆಗಳು ಮಾಧ್ಯಮಗಳಿಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿವೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ (ಎಎಪಿ)ಗೆ ಸಂಬಂಧಿಸಿದ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮಾಜಿ ಸಿಇಒ ವಿಜಯ್ ನಾಯರ್ ಅವರು ಸಲ್ಲಿಸಿದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಈ ಆದೇಶ ನೀಡಿದ್ದಾರೆ.
ಈ ಹಿಂದೆ ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಕೋರ್ಟ್ ಹೊರಡಿಸಿದ್ದ ಎಲ್ಲಾ ಪತ್ರಿಕಾ ಪ್ರಕಟಣೆಗಳು ಮತ್ತು ಸಾರ್ವಜನಿಕ ಪ್ರಕಟಣೆಗಳನ್ನು ದಾಖಲೆಯಲ್ಲಿ ಇರಿಸಲು ಎರಡೂ ತನಿಖೆ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿಗೆ ನ್ಯಾಯಲಯವು ಸೂಚನೆ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಯಾವುದೇ ಪತ್ರಿಕಾ ಪ್ರಕಟಣೆಯನ್ನು ನೀಡಿಲ್ಲ ಎಂದು ಜಾರಿ ನಿರ್ದೇಶನಾಲಯದ ಪರ ಹಾಜರಾಗಿದ್ದ ವಕೀಲ ಜೊಹೈಬ್ ಹುಸೇನ್ ಸೋಮವಾರ ನ್ಯಾಯಲಯಕ್ಕೆ ತಿಳಿಸಿದರು. ಸುದ್ದಿ ಪ್ರಸಾರವು ಸಂಬಂಧಪಟ್ಟ ಪ್ರಕಟಣಾ ಸಂಸ್ಥೆ ಒದಗಿಸಿದ ಅಥವಾ ಬಹಿರಂಗಪಡಿಸಿದ ಯಾವುದೇ ಮಾಹಿತಿಯನ್ನು ಆಧರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಸಿಬಿಐ ಪರವಾಗಿ ಹಾಜರಾದ ವಕೀಲರು ಆಗಸ್ಟ್ 1, ಸೆಪ್ಟೆಂಬರ್ 5 ಹಾಗೂ ಅಕ್ಟೋಬರ್ 17ರಂದು ಸಂಸ್ಥೆ ಹೊರಡಿಸಿದ ವಿವಿಧ ಪತ್ರಿಕಾ ಪ್ರಕಟಣೆಗಳನ್ನು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಲಯವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದಕ್ಕೂ ಮತ್ತು ಸಿಬಿಐ ಹಾಗೂ ಇಡಿ ನೀಡಿದ ಮಾಹಿತಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಪ್ರಾಥಮಿಕ ಹಂತದ ಮಾಹಿತಿಯನ್ನು ಒಟ್ಟಾರೆಯಾಗಿ ಸೋರಿಕೆ ಮಾಡಲಾಗಿದೆ ಹಾಗೂ ತನಿಖಾ ಸಂಸ್ಥೆಗಳಿಂದ ಒದಗಿಸಲಾಗಿದೆ ಎನ್ನಬಹುದು ಎಂದು ನ್ಯಾಯಮೂರ್ತಿ ವರ್ಮಾ ಆದೇಶದಲ್ಲಿ ತಿಳಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ನಾಯರ್ ಅವರ ಮನವಿಯಲ್ಲಿ ಉಲ್ಲೇಖಿಸಿದಂತೆ ಇಂಡಿಯಾ ಟುಡೇ ಮತ್ತು ರಿಪಬ್ಲಿಕ್ ಸುದ್ದಿ ವಾಹಿನಿಗಳ ಪ್ರಸಾರದ ಬಗ್ಗೆ ನ್ಯಾಯಲಯವು ಅಸಮಾಧಾನ ವ್ಯಕ್ತಪಡಿಸಿತು.

ಸುದ್ದಿ ಚಾನೆಲ್‌ಗಳು ಏನನ್ನು ಪ್ರಕಟಿಸುತ್ತವೆ
ಸುದ್ದಿ ಸಂಸ್ಥೆಗಳು ಅವರು ಮಾಹಿತಿಯನ್ನು ಎಲ್ಲಿಂದ ಪಡೆಯುತ್ತಿದ್ದಾರೆ? ಸುದ್ದಿ ಚಾನೆಲ್‌ಗಳು ಏನನ್ನು ಪ್ರಕಟಿಸುತ್ತವೆ ಎಂಬುದು ಸಿಬಿಐ, ಇಡಿ ನೀಡಿದ ಮಾಹಿತಿಗೆ ಅನುಗುಣವಾಗಿರಬೇಕು. ಅದು ನ್ಯಾಯಾಲಯದ ಆದೇಶದಿಂದ ಪಡೆದ ಸಂಗತಿಯಾಗಿರಬೇಕು ಎಂದು ನ್ಯಾಯಮೂರ್ತಿ ವರ್ಮಾ ಹೇಳಿದರು. ಇಡಿ ಹಾಗೂ ಸಿಬಿಐಗೆ ನ್ಯಾಯಲಯವು ಈ ಚಾನೆಲ್‌ಗಳು ನಿಮ್ಮ ಸದಸ್ಯರೇ, ನೀವು ಸ್ವಯಂ ನಿಯಂತ್ರಕ ಸಂಸ್ಥೆಯಾಗಿದ್ದೀರಾ ಅಥವಾ ನೀವು ಸ್ವಯಂ ನಿಯಂತ್ರಕ ಸಂಸ್ಥೆಯ ಸಂಸ್ಥೆ ಅಲ್ಲವೇ, ನಿಮಗೆ ಬೇಕಾದನ್ನು ಹೇಗೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ನ್ಯಾಯಾಲಯ ಕೇಳಿದೆ.

ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ
ಬಳಿಕ ನ್ಯಾಯಾಲಯವು ಅರ್ಜಿಯಲ್ಲಿ ಉಲ್ಲೇಖಿಸಲಾದ ಐದು ಸುದ್ದಿ ವಾಹಿನಿಗಳಿಗೆ ನೋಟಿಸ್ ನೀಡಿತು. ಆದರೆ ಎನ್‌ಬಿಡಿಎಸ್‌ಎ ಅದನ್ನು ಸರಿಯಾಗಿ ಪರಿಶೀಲಿಸಲು ಮತ್ತು ಚಾನೆಲ್‌ಗಳ ವರದಿಯು ಪ್ರಸಾರಕ್ಕೆ ಸಂಬಂಧಿಸಿದಂತೆ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿದೆಯೇ ಎಂದು ದಾಖಲೆಯಲ್ಲಿ ಇರಿಸಲು ತಿಳಿಸಿತು.

ಅಕ್ರಮ ಹಣ ವರ್ಗಾವಣೆ ಪ್ರಕರಣ
ಇದಲ್ಲದೆ ಪ್ರಕರಣವು ಬಾಕಿ ಉಳಿದಿರುವಾಗ ನ್ಯಾಯಾಲಯವು ಜಾರಿಗೆ ತಂದಿರುವ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ನ್ಯಾಯಾಧೀಶರು ವಿಧಿಸಿದ ಷರತ್ತುಗಳು ಸಂಬಂಧಪಟ್ಟ ಕಕ್ಷಿದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಕಾಗುತ್ತದೆ ಎಂದು ನ್ಯಾಯಾಲಯವು ತಿಳಿಸಿದೆ. ಸಿಬಿಐ ಪ್ರಕರಣದಲ್ಲಿ ನಾಯರ್ ಅವರಿಗೆ ಇತ್ತೀಚೆಗೆ ಜಾಮೀನು ಮಂಜೂರಾಗಿತ್ತು. ಆದರೆ ಸಿಬಿಐ ಎಫ್‌ಐಆರ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅವರನ್ನು ಬಂಧಿಸಿದ್ದರಿಂದ ಇಡಿ ನಾಯರ್ ಅವರು ಮತ್ತೆ ಬಂಧನದಲ್ಲಿ ಉಳಿದಿದ್ದಾರೆ.

ಪ್ರಕರಣದ ತನಿಖೆ ಹಿನ್ನೆಲೆ ನಾಯರ್ ಬಂಧನ
ಸಿಬಿಐ ದಾಖಲಿಸಿರುವ ಎಫ್‌ಐಆರ್‌ನ ಪ್ರಕಾರ 2021 ಹಾಗೂ 22ರ ದೆಹಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಇತರ ವ್ಯಕ್ತಿಗಳೊಂದಿಗೆ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿರುವ ಆರೋಪ ಸಂಬಂಧ ಪ್ರಕರಣದ ತನಿಖೆಗೆ ನಾಯರ್ ಒಳಗಾಗಿದ್ದಾರೆ. ಎಫ್‌ಐಆರ್‌ನಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಹ ಆರೋಪಿ ಎಂದು ಹೆಸರಿಸಲಾಗಿದೆ.












Click it and Unblock the Notifications