• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೇ 15ರಷ್ಟು ಕಡಿಮೆಯಾಗಲಿದೆ ರೈಲ್ವೆ ಪ್ರಯಾಣ ದರ

|
Google Oneindia Kannada News

ನವದೆಹಲಿ, ನವೆಂಬರ್ 16; ಭಾರತೀಯ ರೈಲ್ವೆ ಕಳೆದ ವಾರ ಸಾಮಾನ್ಯ ದರದ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದೆ. ಕೋವಿಡ್ ಪರಿಸ್ಥಿತಿಗೂ ಮೊದಲು ಇದ್ದ ದರದಲ್ಲಿಯೇ ರೈಲುಗಳು ಓಡಲಿವೆ. ಇದರಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ವಿಶೇಷ ರೈಲು ಎಂಬ ಹಣೆಪಟ್ಟಿ ತೆಗೆದು ಮೇಲ್ ಮತ್ತು ಎಕ್ಸಪ್ರೆಸ್ ರೈಲುಗಳನ್ನು ತಕ್ಷಣದಿಂದ ಓಡಿಸಬೇಕು ಎಂದು ಭಾರತೀಯ ರೈಲ್ವೆ ವಿಭಾಗಗಳಿಗೆ ಸೂಚನೆ ನೀಡಿದೆ. ಇದರಿಂದಾಗಿ ರೈಲು ಪ್ರಯಾಣದರದಲ್ಲಿ ಶೇ 15ರಷ್ಟು ಕಡಿತವಾಗಲಿದೆ.

ಗುಡ್ಡ ಕುಸಿತ, ಹಳಿ ತಪ್ಪಿದ ಯಶವಂತಪುರ-ಕಣ್ಣೂರು ರೈಲು ಗುಡ್ಡ ಕುಸಿತ, ಹಳಿ ತಪ್ಪಿದ ಯಶವಂತಪುರ-ಕಣ್ಣೂರು ರೈಲು

ಕೋವಿಡ್ ಸಂದರ್ಭದಲ್ಲಿ ಹಲವು ರೈಲುಗಳನ್ನು ಓಡಿಸುತ್ತಿದ್ದು, ಇದಕ್ಕೆ ವಿಶೇಷ ರೈಲು ಎಂದು ಹೆಸರಿಡಲಾಗಿತ್ತು. ಆದ್ದರಿಂದ ದರವೂ ಸಾಮಾನ್ಯ ರೈಲಿಗಿಂತ ಹೆಚ್ಚಾಗಿತ್ತು. ಈಗ ಸಾಮಾನ್ಯ ದರದಲ್ಲಿಯೇ ರೈಲು ಓಡಿಸಲು ತೀರ್ಮಾನಿಸಲಾಗಿದೆ.

 ಬಸ್‌, ರೈಲು ನಿಲ್ದಾಣದಲ್ಲೂ ಕೋವಿಡ್‌ ಲಸಿಕೆ: ಕೇಂದ್ರದಿಂದ ಸೂಚನೆ ಬಸ್‌, ರೈಲು ನಿಲ್ದಾಣದಲ್ಲೂ ಕೋವಿಡ್‌ ಲಸಿಕೆ: ಕೇಂದ್ರದಿಂದ ಸೂಚನೆ

ಭಾರತೀಯ ರೈಲ್ವೆ ಸುಮಾರು 1700 ರೈಲುಗಳನ್ನು ವಿಶೇಷ ರೈಲು ಎಂಬ ಹಣೆಪಟ್ಟಿಯೊಂದಿಗೆ ಓಡಿಸುತ್ತಿತ್ತು. ಮುಂದಿನ ದಿನಗಳಲ್ಲಿ ಈ ರೈಲಯಗಳ ದರ ಸಾಮಾನ್ಯ ದರಕ್ಕೆ ಇಳಿಕೆಯಾಗಲಿದೆ. ಈ ವರ್ಷದ ಸೆಪ್ಟೆಂಬರ್ ತನಕ ಭಾರತೀಯ ರೈಲ್ವೆ ಟಿಕೆಟ್‌ಗಳಿಂದಲೇ 15,434.18 ಕೋಟಿ ಆದಾಯ ಪಡೆದಿದೆ. 2020ರಲ್ಲಿ ಇದೇ ಅವಧಿಯಲ್ಲಿ 1,258.74 ಕೋಟಿ ಆದಾಯ ಬಂದಿತ್ತು.

ಪಂಡರಾಪುರ- ಯಶವಂತಪುರ ರೈಲು ಸಂಚಾರ ಮರು ಆರಂಭಪಂಡರಾಪುರ- ಯಶವಂತಪುರ ರೈಲು ಸಂಚಾರ ಮರು ಆರಂಭ

ಕೋವಿಡ್ ಪೂರ್ವ ಅವಧಿಯ ದರದಲ್ಲಿ ಸಾಮಾನ್ಯ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ತೀರ್ಮಾನಿಸಿದೆ. ಆದರೆ ಕೌಂಟರ್ ಟಿಕೆಟ್ ಸೇಲ್, ತಯಾರಿಸಿದ ಆಹಾರದ ವಿತರಣೆ, ಫ್ಲಾಟ್ ಫಾರಂ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಿದೆ.

ಕೋವಿಡ್ ಇನ್ನೂ ನಮ್ಮ ನಡುವೆ ಇದೆ. ಆದ್ದರಿಂದ ರೈಲು ನಿಲ್ದಾಣದಲ್ಲಿ ಜನಸಂದಣಿ ಕಡಿಮೆ ಮಾಡಬೇಕು. ಹಾಗಾಗಿ ಫ್ಲಾಟ್ ಫಾರಂ ಟಿಕೆಟ್ ದರದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದು ಭಾರತೀಯ ರೈಲ್ವೆ ಹೇಳಿದೆ. ಕೌಂಟರ್ ಟಿಕೆಟ್ ಸೇಲ್ ವಿಚಾರದಲ್ಲಿಯೂ ನಿರ್ಬಂಧ ಮುಂದುವರೆಯಲಿದೆ. ಜನರು ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗೆ ಆದ್ಯತೆ ನೀಡಬೇಕಿದೆ

ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸುವಂತೆ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸೂಚನೆ ನೀಡಿದ್ದಾರೆ. ವಿಶೇಷ ರೈಲುಗಳಲ್ಲಿ ಸಾಮಾನ್ಯ ರೈಲಿಗಿಂತ ಶೇ 30ರಷ್ಟು ಹೆಚ್ಚು ದರವನ್ನು ಜನರು ಪಾವತಿ ಮಾಡಬೇಕಿತ್ತು.

ಈಗ ವಿಶೇಷ ರೈಲುಗಳ ಹಣೆಪಟ್ಟಿ ತೆಗೆಯುವುದರಿಂದ ದರಗಳು ಸಾಮಾನ್ಯ ರೈಲುಗಳ ದರಕ್ಕೆ ಇಳಿಕೆಯಾಗಲಿವೆ. ಕೋವಿಡ್ ಪರಿಸ್ಥಿತಿ ಹತೋಟಿಗೆ ಬರುತ್ತಿರುವ ಕಾರಣ ಎಲ್ಲಾ ರೈಲುಗಳ ಸಂಚಾರವನ್ನು ಪುನಃ ಆರಂಭಿಸಲು ಇಲಾಖೆ ಮುಂದಾಗಿದೆ.

ರೈಲ್ವೆ ಇಲಾಖೆ ಮಾಹಿತಿ ಪ್ರಕಾರ ಪ್ರಸ್ತುತ ಶೇ 95ರಷ್ಟು ಮೇಲ್ ಎಕ್ಸ್‌ಪ್ರೆಸ್‌ಗಳು ಹಳಿಗೆ ಮರಳಿವೆ. ಇವುಗಳಲ್ಲಿ ಶೇ 25ರಷ್ಟು ರೈಲುಗಳು ಆಯ್ದ ವಿಶೇಷ ಮಾರ್ಗದಲ್ಲಿ ಮಾತ್ರ ಸಂಚಾರ ನಡೆಸುತ್ತಿವೆ. ಈ ರೈಲುಗಳ ದರ ಸಾಮಾನ್ಯ ರೈಲಿಗಿಂತ ಹೆಚ್ಚಾಗಿದೆ.

ಕೋವಿಡ್ ಪರಿಸ್ಥಿತಿಗೂ ಮೊದಲು ಸುಮಾರು 3500 ಪ್ಯಾಸೆಂಜರ್ ರೈಲುಗಳು ಓಡುತ್ತಿದ್ದವು. ಆದರೆ ಈಗ ಕೇವಲ 1000 ಪ್ಯಾಸೆಂಜರ್ ರೈಲುಗಳು ಓಡುತ್ತಿವೆ. ಕೋವಿಡ್ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಿರುವ ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಹೆಚ್ಚಿನ ದರದಲ್ಲಿ ಇಲಾಖೆ ಓಡಿಸುತ್ತಿತ್ತು.

ಸಾಮಾನ್ಯ ರೈಲುಗಳ ಸಂಚಾರದಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಆದರೆ ಪ್ರಯಾಣಿಕರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ. ಬೆಡ್ ರೋಲ್‌ಗಳು, ಆಹಾರ ವಿತರಣೆ ಮೇಲಿನ ನಿರ್ಬಂಧ ಮುಂದುವರೆಯಲಿದೆ.

ಕೋವಿಡ್ ಸಂದರ್ಭದಲ್ಲಿ ಸರಕುಗಳ ಸಾಗಾಟದಿಂದ ಮಾತ್ರವಲ್ಲ. ಪ್ರಯಾಣಿಕ ರೈಲುಗಳ ಸಂಚಾರದಿಂದಲೂ ರೈಲ್ವೆ ಇಲಾಖೆ ಆದಾಯವನ್ನು ಹೆಚ್ಚಿಸಿಕೊಂಡಿದೆ. 2021-22ರ 2ನೇ ತ್ರೈಮಾಸಿಕದಲ್ಲಿ ಪ್ರಯಾಣಿಕರ ರೈಲುಗಳ ಸಂಚಾರದಿಂದಲೇ ಶೇ 113ರಷ್ಟು ಆದಾಯವನ್ನು ರೈಲ್ವೆ ಪಡೆದಿದೆ.

English summary
Indian railways decided to run normal passenger trains by drop special tag for mail and express trains. Railways expected that fare will come down by around 15 per cent by this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X