ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ದರ 103 ರೂ. ಕಡಿತ
ನವದೆಹಲಿ, ಫೆ, 2 : ಸಬ್ಸಿಡಿರಹಿತ ಎಲ್ ಪಿಜಿ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ ಭಾನುವಾರ 103 ರೂಪಾಯಿ ಇಳಿಕೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನಿರಂತರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಡಿತ ಮಾಡಿದೆ.
14.2 ಕೆಜಿ ಸಿಲಿಂಡರ್ ದರ 605 ರೂಪಾಯಿಗೆ ಇಳಿದಂತಾಗಿದೆ. ವಾಣಿಜ್ಯ ಬಳಕೆಯ ಎಲ್ ಪಿಜಿ ದರವನ್ನು ಸಹ ಇಳಿಕೆ ಮಾಡಲಾಗಿದೆ. ಇದರಿಂದ ಸಬ್ಸಿಡಿ ರಹಿತ ಮತ್ತು ಸಬ್ಸಿಡಿ ಸಹಿತ ಸಿಲಿಂಡರ್ ಗಳ ನುಡವಿವ ವ್ಯತ್ಯಾಸ 200 ರೂ. ಗಿಂತ ಕಡಿಮೆಯಾಗಿದೆ.[ಬ್ಯಾಂಕ್ ಖಾತೆಗೆ ನೇರವಾಗಿ ಎಲ್ ಪಿಜಿ ಸಬ್ಸಿಡಿ ಪಾವತಿ]

ವಾರ್ಷಿಕ 12 ಸಿಲಿಂಡರ್ ಗಳಿಗಿಂತ ಅಧಿಕ ಬಳಸುವವರಿಗೆ ಇದರ ನೇರ ಲಾಭ ದೊರೆಯಲಿದೆ. ಕಳೆದ ಆಗಸ್ಟ್ ನಂತರ ಇದು ಏಳನೇ ಬಾರಿಯ ದರ ಕಡಿತವಾಗಿದ್ದು ಹಿಂದಿನ ಜುಲೈ ತಿಂಗಳಿಗೆ ಹೋಲಿಸಿದರೆ ಒಟ್ಟು 350 ರೂ. ಗೂ ಗಿಂತ ಹೆಚ್ಚು ಕಡಿಮೆಯಾಗಿದೆ.[ಎಲ್ ಪಿಜಿ ಬೆಲೆ ಮತ್ತೆ 43.50 ರು. ಕಡಿತ]
ದಿನಕ್ಕೊಮ್ಮೆ ತೈಲ ಬೆಲೆ ಪರಿಷ್ಕರಣೆ ಯಾಗುತ್ತಿದ್ದರೂ ಸದ್ಯ ಬೆಲೆಯಲ್ಲಿ ಯಾವುದೆ ಇಳಿಕೆ ಮಾಡುವುದಿಲ್ಲ ಎಂದು ಖಾಸಗಿ ವಲಯದ ಪೆಟ್ರೋಲಿಯಂ ಕಂಪನಿಗಳು ತಿಳಿಸಿವೆ. ಆದರೆ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂಗಳು ಸಬ್ಸಡಿ ರಹಿತ ಸಿಲಿಂಡರ್ ಮತ್ತು ಜೆಟ್ ಇಂಧನ ದರ ಇಳಿಕೆ ಮಾಡಿವೆ.












Click it and Unblock the Notifications