ಬಜೆಟ್ ನಂತರ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ

Posted By:
Subscribe to Oneindia Kannada

ನವದೆಹಲಿ, ಮಾ. 01: ಕೇಂದ್ರ ಬಜೆಟ್ 2016 ಮಂಡನೆಯಾದ ಒಂದು ದಿನ ಬಳಿಕ ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಇಳಿಸಲಾಗಿದೆ. ಎಲ್ ಪಿಜಿ ಸಿಲಿಂಡರ್ ನ ಬೆಲೆಯನ್ನು 61.50 ರೂಪಾಯಿ ಇಳಿಕೆ ಮಾಡಲಾಗಿದೆ ಎಂದು ಭಾರತದ ತೈಲ ಮಾರುಕಟ್ಟೆ ಕಂಪನಿ ಸಮೂಹ(ಒಎಂಸಿ) ಪ್ರಕಟಿಸಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪ್ರಕಟಣೆಯಂತೆ 14.2 ಕೆಜಿ ತೂಗುವ ಸಬ್ಸಿಡಿರಹಿತ ಎಲ್ ಪಿಜಿ ಸಿಲಿಂಡರಿನ ಬೆಲೆ 575 ರೂನಿಂದ 513.50 ರೂ (ದೆಹಲಿಯ ಬೆಲೆ)ಗೆ ಇಳಿಸಲಾಗಿದೆ. ಸಬ್ಸಿಡಿಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಕೇವಲ 9 ಪೈಸೆ ಕಡಿತ ಮಾಡಲಾಗಿದೆ. [ಭಾರತದಲ್ಲಿ ತೈಲ ದರ ಯಾಕೆ ಇಳಿಯುತ್ತಿಲ್ಲ? ಇಲ್ಲಿದೆ ಉತ್ತರ]

Non-subsidised LPG cylinder price slashed by Rs 61.50

ಫೆಬ್ರವರಿ 1ರಂದು ಸಬ್ಸಿಡಿರಹಿತ ಅಡುಗೆ ಅನಿಲದ ಬೆಲೆ ಬರೋಬ್ಬರಿ 118 ರೂ ಇಳಿಕೆ ಮಾಡಿದ್ದ ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ(ಮಾರ್ಚ್ 01) ಮತ್ತೊಮ್ಮೆ ಬೆಲೆ ಇಳಿಸಿವೆ. [10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]

ಬೆಲೆ ಇಳಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಯಲ್ಲಿ ಇಳಿಮುಖ ಕಾರಣ ಎನ್ನಬಹುದು. ಸೋಮವಾರದಂದು ಪೆಟ್ರೋಲ್ ಪ್ರತಿ ಲೀಟರ್ ಗೆ 3.02 ರು ಇಳಿಕೆ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 1.47 ಏರಿಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಏಪ್ರಿಲ್ 1, 2014ರಿಂದ ವಾರ್ಷಿಕ ಸಿಲಿಂಡರ್ ಬಳಕೆ ಮಿತಿಯನ್ನು 6 ರಿಂದ 12ಕ್ಕೇರಿಸಲಾಯಿತು. ಇದಕ್ಕೆ ದೊರೆಯುವ ಸಬ್ಸಿಡಿ ಮೊತ್ತವನ್ನು ನೇರವಾಗಿ ಬ್ಯಾಂಕಿಗೆ ತಲುಪುವ ವ್ಯವಸ್ಥೆ ಮಾಡಲಾಯಿತು. 2014-15ರಲ್ಲಿ ಸುಮಾರು 40,551 ಕೋಟಿ ರು ದಾಖಲೆಯ ಮೊತ್ತದ ವಹಿವಾಟು ನಡೆದಿದೆ.

ಸದ್ಯದ ವ್ಯವಸ್ಥೆಯಂತೆ ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರ್ ಗಳು (14.2 ಕೆಜಿ ತೂಗುವ) ವರ್ಷಕ್ಕೆ 12ರಂತೆ ಪಡೆಯಬಹುದು. ಇದರ ಬೆಲೆ 419.26ರು ಇದೆ. ಸಬ್ಸಿಡಿ ರಹಿತ ಮಾರುಕಟ್ಟೆ ದರ 608 ರು ಮೀರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Oil marketing companies (OMCs) have slashed the price of non-subsidised domestic LPG cylinder by Rs 61.50.
Please Wait while comments are loading...