Inspiring Story: ಬಟ್ಟೆ ತ್ಯಾಜ್ಯದಿಂದ 250ಕ್ಕೂ ಹೆಚ್ಚು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ 17ರ ಬಾಲಕಿ

ಹನ್ನೆರಡನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಮ್ಮ ಬೋರ್ಡ್ ಪರೀಕ್ಷೆಗಳು, ಅಂಕಗಳು ಹಾಗೂ ಮುಂದಿನ ಕಾಲೇಜು ಶಿಕ್ಷಣದ ಬಗ್ಗೆ ಮಾತ್ರ ಚಿಂತಿಸುತ್ತಿರುತ್ತಾರೆ. ಆದರೆ, ನೋಯ್ಡಾದ 17 ವರ್ಷದ ಈ ವಿದ್ಯಾರ್ಥಿನಿ ರಹಿನಿ ಬನ್ಸಾಲ್ ಅವರ ಕಥೆಯೇ ಬೇರೆ.

ಈ ಎಳೆ ವಯಸ್ಸಿನಲ್ಲಿಯೇ ಆಕೆ 250ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಒದಗಿಸುವ ಮೂಲಕ ಅವರ ಬದುಕಿಗೆ ಆಸರೆಯಾಗಿದ್ದಾಳೆ. ಬಟ್ಟೆ ಕಾರ್ಖಾನೆಗಳಿಂದ ಎಸೆಯಲ್ಪಡುವ ತ್ಯಾಜ್ಯ ಬಟ್ಟೆಗಳನ್ನ ಬಳಸಿ ಮಹಿಳೆಯರಿಗೆ ಆದಾಯದ ಮೂಲವನ್ನ ಸೃಷ್ಟಿಸಿಕೊಟ್ಟಿರುವ ಈಕೆಯ ಕಾರ್ಯ ಮತ್ತು ದೂರದೃಷ್ಟಿ ಸಮಾಜಕ್ಕೆ ನಿಜಕ್ಕೂ ಮಾದರಿ.

Noida

ಬಟ್ಟೆ ತ್ಯಾಜ್ಯದಿಂದ ಮಹಿಳೆಯರಿಗೆ ಸ್ವಾವಲಂಬನೆ

ರಹಿನಿ ತಾನು 10ನೇ ತರಗತಿಯಲ್ಲಿದ್ದಾಗಲೇ ಮಹಿಳೆಯರನ್ನ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಕನಸು ಕಂಡಿದ್ದಳು. ಈ ಕನಸಿಗೆ ಜೀವ ತುಂಬಲು ಆಕೆ 2024ರಲ್ಲಿ 'ಸೂತ್ರಧಾರ್' ಎಂಬ ವಿನೂತನ ಯೋಜನೆಯನ್ನ ಆರಂಭಿಸಿದಳು. ಕೇವಲ ಆರು ಜನ ಮಹಿಳೆಯರೊಂದಿಗೆ ಶುರುವಾದ ಈ ಯೋಜನೆ ಇಂದು 250ಕ್ಕೂ ಹೆಚ್ಚು ಮಹಿಳೆಯರನ್ನ ಒಳಗೊಂಡ ದೊಡ್ಡ ಸಮುದಾಯವಾಗಿ ಬೆಳೆದಿದೆ.

ಗ್ರಾಮೀಣ ಭಾಗದ ಮಹಿಳೆಯರಿಗೆ ಅವರ ಮನೆಯಲ್ಲಿಯೇ ಕುಳಿತು ಮಾಡಬಹುದಾದ ಕೌಶಲ್ಯಗಳನ್ನ ಕಲಿಸಿ, ಆ ಮೂಲಕ ಅವರಿಗೆ ದೈನಂದಿನ ಉದ್ಯೋಗ ಒದಗಿಸುವುದು ಹಾಗೂ ಸಮಾಜದಲ್ಲಿ ಅವರಿಗೆ ಒಂದು ನೆಲೆ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.

'ಸೂತ್ರಧಾರ್' ಯೋಜನೆಯಡಿ ಹಳ್ಳಿಗಳ ಮಹಿಳೆಯರು ಮತ್ತು ಯುವತಿಯರನ್ನ ಗುರುತಿಸಿ ಅವರಿಗೆ ಹೊಲಿಗೆ, ಕಸೂತಿ ಮತ್ತು ಹೆಣಿಗೆಯಂತಹ ಕೌಶಲ್ಯಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ. ತರಬೇತಿಯ ನಂತರ, ಜವಳಿ ಉದ್ಯಮದಿಂದ ಸಂಗ್ರಹಿಸಲಾದ ಬಟ್ಟೆಯ ಪೀಸ್‌ಗಳು ಮತ್ತು ತ್ಯಾಜ್ಯ ಬಟ್ಟೆಗಳನ್ನ ಇವರಿಗೆ ನೀಡಲಾಗುತ್ತದೆ. ಮಹಿಳೆಯರು ಈ ತ್ಯಾಜ್ಯ ಬಟ್ಟೆಗಳನ್ನು ಬಳಸಿ ಅತ್ಯಂತ ಸುಂದರವಾದ ಶರ್ಟ್‌ಗಳು ಹಾಗೂ ಇತರ ದಿನಬಳಕೆಯ ಉಪಯುಕ್ತ ವಸ್ತುಗಳನ್ನ ತಯಾರಿಸುತ್ತಾರೆ.

ಈ ಯೋಜನೆಯ ಅತಿ ದೊಡ್ಡ ಅನುಕೂಲವೆಂದರೆ, ಮಹಿಳೆಯರು ಕೆಲಸಕ್ಕಾಗಿ ತಮ್ಮ ಮನೆ ಬಿಟ್ಟು ಯಾವುದೇ ಕಾರ್ಖಾನೆ ಅಥವಾ ಗಾರ್ಮೆಂಟ್ಸ್‌ಗೆ ಹೋಗಬೇಕಿಲ್ಲ. ತಮ್ಮ ದೈನಂದಿನ ಮನೆಕೆಲಸಗಳ ನಡುವೆ ಸಿಗುವ ಬಿಡುವಿನ ವೇಳೆಯಲ್ಲಿ ಮನೆಯಿಂದಲೇ ಈ ಕೆಲಸವನ್ನ ಆರಾಮವಾಗಿ ಮಾಡಬಹುದು. ಈ ವ್ಯವಸ್ಥೆಯಿಂದಾಗಿ ಮಹಿಳೆಯರು ತಿಂಗಳಿಗೆ 4,000 ದಿಂದ 25,000 ರೂಪಾಯಿಗಳವರೆಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಬದುಕು ಬದಲಿಸಿದ ಸಂಪಾದನೆ

ಹಲವು ಮಹಿಳೆಯರಿಗೆ ಸೂತ್ರಧಾರ್ ಮೂಲಕ ಬರುತ್ತಿರುವ ಹಣವೇ ಅವರ ಜೀವನದ ಮೊಟ್ಟಮೊದಲ ಆದಾಯವಾಗಿದೆ. ಈ ಆರ್ಥಿಕ ಸ್ವಾತಂತ್ರ್ಯ ಅವರ ಕುಟುಂಬಗಳ ದಿಕ್ಕನ್ನೇ ಬದಲಿಸಿದೆ. ಉದಾಹರಣೆಗೆ, 45 ವರ್ಷದ ಶೋಭಾ ಎಂಬುವವರು ಈ ಮೊದಲು ಯಾವುದೇ ಆದಾಯ ಹೊಂದಿರಲಿಲ್ಲ, ಆದರೆ ಈಗ ತಾವು ದುಡಿದ ಹಣದಲ್ಲಿ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಚಂದಾ ಎಂಬ ಮತ್ತೊರ್ವ ಮಹಿಳೆ ಕೂಡ ತನ್ನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲು ಈ ಹಣವನ್ನು ಬಳಸುತ್ತಿದ್ದಾಳೆ.

ಪ್ರಾಚಿ ಎಂಬ ಯುವತಿ ತನ್ನ ಬಿ.ಎ. ವ್ಯಾಸಂಗದ ಶುಲ್ಕ ಭರಿಸಲು ಈ ಆದಾಯವನ್ನು ಬಳಸುತ್ತಿದ್ದು, ಭವಿಷ್ಯದಲ್ಲಿ ಫ್ಯಾಷನ್ ಡಿಸೈನರ್ ಆಗುವ ದೊಡ್ಡ ಕನಸು ಕಂಡಿದ್ದಾಳೆ. ಮೋನಿಕಾ ಎಂಬುವವರು ತನ್ನ ಸಹೋದರನ ಕಂಪ್ಯೂಟರ್ ತರಬೇತಿಗಾಗಿ ಹಣ ಹೊಂದಿಸುತ್ತಿದ್ದಾಳೆ. ಎಲ್ಲಕ್ಕಿಂತ ಮಿಗಿಲಾಗಿ, ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯೊಬ್ಬಳಿಗೂ ಈ ಯೋಜನೆಯು ಆರ್ಥಿಕ ಸ್ವಾತಂತ್ರ್ಯ ನೀಡಿ, ಹೊಸದಾಗಿ ಜೀವನ ಕಟ್ಟಿಕೊಳ್ಳುವ ಆತ್ಮವಿಶ್ವಾಸವನ್ನ ತುಂಬಿದೆ.

ಉದ್ಯೋಗದ ಜೊತೆಗೆ ತ್ಯಾಜ್ಯ ನಿರ್ವಹಣೆಗೂ ಒತ್ತು

'ಸೂತ್ರಧಾರ್' ಕೇವಲ ಉದ್ಯೋಗ ನೀಡುವ ಯೋಜನೆಯಾಗಿರದೆ, ಪರಿಸರ ಸಂರಕ್ಷಣೆಯತ್ತಲೂ ಹೆಜ್ಜೆ ಇಟ್ಟಿದೆ. ಬಟ್ಟೆ ತ್ಯಾಜ್ಯಗಳನ್ನ ಸುಮ್ಮನೆ ಕಸದ ಬುಟ್ಟಿಗೆ ಬಿಸಾಡಿ ಪರಿಸರ ಮಾಲಿನ್ಯ ಮಾಡುವ ಬದಲು, ಅವುಗಳನ್ನ ಪರಿಣಾಮಕಾರಿಯಾಗಿ ಮರುಬಳಕೆ ಮಾಡಿ ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ಕೌಶಲ್ಯ, ಆದಾಯ ಮತ್ತು ತ್ಯಾಜ್ಯ ಕಡಿತ - ಈ ಮೂರು ಪ್ರಮುಖ ಅಂಶಗಳನ್ನ ಯಶಸ್ವಿಯಾಗಿ ಒಗ್ಗೂಡಿಸಿರುವ ರಹಿನಿ ಬನ್ಸಾಲ್, ತನ್ನ 17ನೇ ವಯಸ್ಸಿನಲ್ಲಿಯೇ ಅನೇಕರ ಬಾಳಿಗೆ ಬೆಳಕಾಗಿದ್ದಾಳೆ. ತಾನು ಇನ್ನು ಕಲಿಯುತ್ತಿರುವಾಗಲೇ, ನೂರಾರು ಮಹಿಳೆಯರ ಭವಿಷ್ಯವನ್ನು ಉಜ್ವಲಗೊಳಿಸಿ, ಅವರಿಗೆ ತಮ್ಮ ಬದುಕಿನ ನಿಯಂತ್ರಣವನ್ನು ಅವರ ಕೈಗೇ ನೀಡುತ್ತಿರುವ ರಹಿನಿಯ ಈ ಪಯಣ ನಿಜಕ್ಕೂ ಸ್ಫೂರ್ತಿದಾಯಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+