ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೊಹ್ರಾಬುದ್ದಿನ್ ಕೇಸ್ ತೀರ್ಪು : ರಾಹುಲ್ ಗಾಂಧಿ ಟ್ವೀಟ್ ಅಕ್ರೋಶ, ಹತಾಶೆ

|
Google Oneindia Kannada News

ನವದೆಹಲಿ ಡಿಸೆಂಬರ್ 23: ಸೊಹ್ರಾಬುದ್ದಿನ್ ಎನ್ ಕೌಂಟರ್ ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 22 ಆರೋಪಿಗಳು ಖುಲಾಸೆಗೊಂಡಿರುವುದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ ತಮ್ಮ ಹತಾಶೆ, ಆಕ್ರೋಶವನ್ನು ಹೊರ ಹಾಕಿದ್ದಾರೆ.

ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಎಲ್ಲಾ 22 ಆರೋಪಿಗಳನ್ನೂ ಖುಲಾಸೆಗೊಳಿಸಲಾಗಿದೆ. ಸೊಹ್ರಬುದ್ದಿನ್ ಶೇಖ್ ಸೇರಿ ಮೃತಪಟ್ಟವರ ಪಟ್ಟಿಯನ್ನು ಹಾಕಿ ಟ್ವೀಟ್ ಮಾಡಿರುವ ರಾಹುಲ್, 'ಇವರನ್ನು ಯಾರು ಕೊಲ್ಲಲಿಲ್ಲ, ಇವರೆಲ್ಲರೂ ಹಾಗೆ ಸತ್ತರು' ಎಂದಿದ್ದಾರೆ.

ಸೊಹ್ರಾಬುದ್ದಿನ್ ಕೇಸ್: ಎಲ್ಲಾ 22 ಆರೋಪಿಗಳು ಖುಲಾಸೆ ಸೊಹ್ರಾಬುದ್ದಿನ್ ಕೇಸ್: ಎಲ್ಲಾ 22 ಆರೋಪಿಗಳು ಖುಲಾಸೆ

ಈ ಪಟ್ಟಿಯಲ್ಲಿ 2003ರಲ್ಲಿ ಹತ್ಯೆಗೀಡಾದ ಗುಜರಾತಿನ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ, ಜಡ್ಜ್ ಬಿಎಚ್ ಲೋಯಾ ಅವರ ಹೆಸರು ಇದೆ.

ಇನ್ನು ಸೋಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾದ ಮೇಲೆ ಗುಜರಾತಿನ ಗೃಹ ಸಚಿವ ಸ್ಥಾನಕ್ಕೆ ಅಮಿತ್ ಶಾ ರಾಜೀನಾಮೆ ನೀಡಿ ಸಿಬಿಐ ಮುಂದೆ ಶರಣಾಗತರಾಗಿದ್ದರು. ಅದರೆ, ಒಂದೊಂದಾಗಿ ಪ್ರಕರಣಗಳಿಂದ ಆರೋಪ ಮುಕ್ತರಾಗಿದ್ದರು.

ಅಮಿತ್ ಶಾಗೆ 2014ರಲ್ಲೇ ಖುಲಾಸೆ ಸಿಕ್ಕಿತ್ತು

ಅಮಿತ್ ಶಾಗೆ 2014ರಲ್ಲೇ ಖುಲಾಸೆ ಸಿಕ್ಕಿತ್ತು

ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸಿಲುಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಅವರಿಗೆ ಸಿಬಿಐ ನ್ಯಾಯಾಲಯದಿಂದ 2014ರಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ.

ಈ ಬಗ್ಗೆ ವಿವರ ಇಲ್ಲಿ ಓದಿ ಈ ಬಗ್ಗೆ ವಿವರ ಇಲ್ಲಿ ಓದಿ

ಯಾರ ಎನ್ ಕೌಂಟರ್ ಕೂಡಾ ನಡೆಯಲೇ ಇಲ್ಲ

22ಕ್ಕೂ ಅಧಿಕ ಆರೋಪಿಗಳ(ಬಹುತೇಕ ಪೊಲೀಸರು) ವಿರುದ್ಧ ಸರಿಯಾದ ಸಾಕ್ಷಿ ಆಧಾರ ಇಲ್ಲ ಎಂಬ ಕಾರಣಕ್ಕೆ ಅವರೆಲ್ಲರನ್ನು ಖುಲಾಸೆಗೊಳಿಸಿ, ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಇದಾದ ಒಂದು ದಿನದ ನಂತರ ಈ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಎನ್ ಕೌಂಟರ್ ನಲ್ಲಿ ಮೃತರಾದವರ ಹೆಸರುಗಳನ್ನು ಹಾಕಿದ್ದಾರೆ.

ಗುಜರಾತ್ ಸರ್ಕಾರದ ವಿರುದ್ಧ ಕೇಸ್

ಗುಜರಾತ್ ಸರ್ಕಾರದ ವಿರುದ್ಧ ಕೇಸ್

ಹಿರಿಯ ಪತ್ರಕರ್ತ ಬಿ.ಜಿ ವರ್ಗೀಸ್ ಹಾಗೂ ಗೀತ ಸಾಹಿತಿ ಜಾವೇದ್ ಅಖ್ತರ್ ಅವರು ಮೋದಿ ವಿರುದ್ಧ ನೀಡಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿದೆ. 22 ಎನ್ ಕೌಂಟರ್ ಪ್ರಕರಣಗಳ ಮರು ವಿಚಾರಣೆ ನಡೆಸಲು ಅನುಮತಿ ಕೋರಿದ್ದರು.

2002ರಿಂದ 2007ರ ನಡುವೆ ನಡೆದಿರುವ ನಕಲಿ ಎನ್ ಕೌಂಟರ್ ಪ್ರಕರಣಗಳ ಬಗ್ಗೆ ಪತ್ರಕರ್ತ ವರ್ಗೀಸ್, ಕಾರ್ಯಕರ್ತ ಶಬಾಂಹಶ್ಮಿ ಹಾಗೂ ಸಾಹಿತಿ ಜಾವೇದ್ ಅಖ್ತರ್ ಅವರು ಮಾಹಿತಿ ಕಲೆ ಹಾಕಿ ಅಂದಿನ ಗುಜರಾತ್ ಸರ್ಕಾರದ ವಿರುದ್ಧ ಕೋರ್ಟಿಗೆ ವರದಿ ನೀಡಿದ್ದರು.

ಸಿಬಿಐ ನಡೆಸಿದ ತನಿಖೆಗೆ ಬೆಲೆ ಇಲ್ಲದ್ದಂತಾಯಿತು

ಸಿಬಿಐ ನಡೆಸಿದ ತನಿಖೆಗೆ ಬೆಲೆ ಇಲ್ಲದ್ದಂತಾಯಿತು

ಈಗಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಅಂದು ಗುಜರಾತಿನ ಗೃಹ ಸಚಿವರಾಗಿದ್ದರು, ಎನ್ ಕೌಂಟರ್ ಪ್ರಕರಣಗಳ ಆರೋಪಿ ಕೂಡಾ ಆಗಿದ್ದರು. 2014ರಲ್ಲಿ ಪ್ರಕರಣದಿಂದ ಖುಲಾಸೆಗೊಂಡರು.

ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪವನ್ನು ಸೊಹ್ರಬುದ್ದಿನ್ ಮೇಲೆ ಹೊರೆಸಲಾಗಿತ್ತು. ಲಷ್ಕತ್ ಇ ತೊಯ್ಬಾ ಜತೆ ಆತನಿಗೆ ನಂಟಿತ್ತು ಎಂಬ ಕಾರಣಕ್ಕೆ ಆತನನ್ನು ಗುಂಡಿಕ್ಕಿ ನವೆಂಬರ್ 22,2005ರಲ್ಲಿ ಕೊಲ್ಲಲಾಯಿತು.
****

ಸೊಹ್ರಾಬುದ್ದಿನ್ ಶೇಖ್ ಪತ್ನಿ ಕೌಸರ್ ಬಿ ಮೇಲೆ ಅತ್ಯಾಚಾರ ಎಸಗಿ ಡಿಸೆಂಬರ್ 27,2006ರಲ್ಲಿ ಹತ್ಯೆ ಮಾಡಲಾಯಿತು. ಈ ಎಲ್ಲಾ ಘಟನೆಗೆ ಸಾಕ್ಷಿಯಾಗಿದ್ದ ತುಳಸಿರಾಮ್ ಪ್ರಜಾಪತಿಯನ್ನು ಗುಜರಾತ್ ಹಾಗೂ ರಾಜಸ್ಥಾನ್ ಪೊಲೀಸರು ಗುಂಡಿಕ್ಕಿ ಕೊಂದರು ಎಂದು ತನಿಖಾ ಸಂಸ್ಥೆ ಸಿಬಿಐ ಹೇಳಿದೆ.

English summary
A day after all 22 accused in the encounter of gangster Sohrabuddin Sheikh were acquitted by a court in Mumbai, Congress chief Rahul Gandhi has tweeted a list of seven people and said "No one killed them, they just died".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X