ನೋಟಾ ಬಹುಮತವಾದರೆ ಮರು ಚುನಾವಣೆ ಇಲ್ಲ

ಮತದಾರನ 'ವಕ್ರನೋಟ' ಹೆಚ್ಚಾದಲ್ಲಿ ಏನು ಮಾಡಬೇಕು?:
ಮತದಾನದ ವೇಳೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿರಾಕರಿಸಿದ್ದೇ ಆದರೆ ಅಂದರೆ ಕಣದಲ್ಲಿರುವ ಯಾವುದೇ ಅಭ್ಯರ್ಥಿಯೂ ಬೇಡವೆನ್ನುವುದು ಬಹುಮತದಲ್ಲಿದ್ದರೆ ಅಂತಹ ಸಂದರ್ಭದಲ್ಲಿ ಮರುಚುನಾವಣೆ ನಡೆಸುವ ಪ್ರಮೇಯ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ನಕಾರಾತ್ಮಕ ಮತದಾನಕ್ಕೆ ಮಣೆ:
None Of The Above Option (NOTA) ಮೂಲಕ ಮತದಾನದ ಹಕ್ಕು ಬಹುಮತದಲ್ಲಿ ಚಲಾವಣೆಯಾಗಿದ್ದರೆ ಅದಕ್ಕಾಗಿ ಮತ್ತೆ ಚುನಾವಣೆ ನಡೆಸುವ ಅಗತ್ಯವಿಲ್ಲ. ಬದಲಿಗೆ ಮತದಾರರ ತೀರ್ಪನ್ನು ಗೌರವಿಸಬೇಕು ಎಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಮುಖ್ಯನ್ಯಾಯಮೂರ್ತಿ ಪಿ ಸದಾಶಿವಂ ಅವರ ನೇತೃತ್ವದ ನ್ಯಾಯಪೀಠವು ತಮ್ಮ ಈ ತೀರ್ಪಿನಲ್ಲಿ ಏನಾದರೂ ಬದಲಾವಣೆ ಬಯಸಿದರೆ ಸ್ವತಃ ಶಾಸಕಾಂಗವೇ ಸೂಕ್ತ ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ತಿಳಿಸಿದೆ. NOTA ಇತ್ತೀಚೆಗಷ್ಟೇ ಕಾನೂನುಸ್ವರೂಪ ಪಡೆದಿದೆ. ಮತದಾರರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಒಂದು ವೇಳೆ, NOTA ಕಾನೂನಿನನ್ವಯ ಹೆಚ್ಚು ಮತದಾರರು ಅಭ್ಯರ್ಥಿಗಳನ್ನು ನಿರಾಕರಿಸಿದರೆ ಫಲಿತಾಂಶವನ್ನು ಮಾನ್ಯ ಮಾಡಬಾರದು ಎಂದು ಕೋರಿ ಜಗ್ಗನ್ ನಾಥ್ ಎಂಬುವವರು ಸಲ್ಲಿಸಿದ್ದ PIL ಅನ್ನು ತಿರಸ್ಕರಿಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.












Click it and Unblock the Notifications