ಸೂಪರ್ ಸ್ಟಾರ್ ದಿಲೀಪ್ ಪೊಲೀಸ್ ಕಸ್ಟಡಿ ಮುಂದುವರಿಕೆ

By: ಅನುಷಾ ರವಿ
Subscribe to Oneindia Kannada

ತಿರುವನಂತಪುರಂ, ಜುಲೈ 14: ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಮತ್ತಷ್ಟು ದಿನ ಜೈಲಿನಲ್ಲೇ ಕಳೆಯಬೇಕಾಗಿದೆ. ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದಿಲೀಫ್ ಪೊಲೀಸ್ ಕಸ್ಟಡಿಯ ಅವಧಿಯನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ.

ಇಂದು ದಿಲೀಪ್ ರನ್ನು ಅಂಗಮಲೈ ಮಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ಈ ಸಮಯದಲ್ಲಿ ವಿಚಾರಣೆಗೆ ದಿಲೀಪ್ ಅಗತ್ಯವಾಗಿ ಬೇಕಾಗಿದ್ದಾರೆ ಎಂದು ಪೊಲೀಸರು ವಾದಿಸಿದ್ದರಿಂದ ನ್ಯಾಯಾಧೀಶರು ದಿಲೀಪ್ ಪೊಲೀಸ್ ಕಸ್ಟಡಿ ಅವಧಿಯನ್ನು ಜುಲೈ 5ರವರೆಗೆ ವಿಸ್ತರಿಸಿದ್ದಾರೆ.

ನಟ ದಿಲೀಪ್ ಬಂಧನದಿಂದ ಆ ಬಹುಭಾಷಾ ನಟಿಗೆ ಶಾಕ್ ಆಯ್ತಂತೆ!

No relief for actor Dileep, police custody extended

ಈ ಹಿಂದೆ ಸೋಮವಾರ ದಿಲೀಪ್ ಬಂಧನ ನಡೆಸಲಾಗಿತ್ತು. ನಂತರ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಕಳೆದ ಎರಡು ದಿನಗಳಿಂದ ಪೊಲೀಸರು ಹೈಪ್ರೊಫೈಲ್ ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣದಲ್ಲಿ ದಿಲೀಪ್ ರನ್ನು ತ್ರಿಶೂರ್ ಮತ್ತು ಎರ್ನಾಕುಲಂ ಮುಂತಾದೆಡೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಪ್ಸರ್ ಸುನಿಯನ್ನು ಭೇಟಿಯಾದ ಜಾಗಗಳಿಗೆ ಪೊಲೀಸರು ದಿಲೀಪ್ ರನ್ನು ಕರೆದೊಯ್ಯುತ್ತಿದ್ದಾರೆ. ಇನ್ನೊಂದು ಕಡೆ ಪೊಲೀಸರು ದಿಲೀಪ್ ಎರಡನೇ ಪತ್ನಿ ಕಾವ್ಯಾ ಮಾಧವನ್ ಮತ್ತು ಆಕೆಯ ತಾಯಿಯ ವಿಚಾರಣೆಗೆ ಸಕಲ ತಯಾರಿಗಳನ್ನೂ ನಡೆಸುತ್ತಿದ್ದಾರೆ.

ಕಾವ್ಯಾ ಮಾಧವನ್ ಸುತ್ತ ದೌರ್ಜನ್ಯದ ಉರುಳು!

ಪಲ್ಸರ್ ಸುನಿ ವಿಚಾರಣೆ ವೇಳೆ ಬಾಯ್ಬಿಟ್ಟ ಮಾಹಿತಿಗಳನ್ನು ಆಧರಿಸಿ ಪೊಲೀಸರು ಕಾವ್ಯಾ ಮಾಧವನ್ ಗೆ ಸೇರಿದ ಹೊಟೀಲಿನಲ್ಲಿಯೂ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮಲಯಾಳಂ ಸಿನಿಮಾಗಳ ಖ್ಯಾತ ನಿರ್ದೇಶಕ ಲಾಲ್ ಹಾಗೂ ಶಾಸಕ ಪಿಟಿ ಥೋಮಸ್ ಸೇರಿದಂತೆ ಹಲವರು ಈ ಪ್ರಕರಣದಲ್ಲಿ ವಿಚಾರಣೆಗೆ ಗುರಿಯಾಗವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Angamaly judicial magistrate court extended police custody of actor Dileep by a day on Friday. Dileep was produced before the magistrate only to be sent back to police custody till 5 PM on Saturday.
Please Wait while comments are loading...