2019ರಲ್ಲಿ ಮೋದಿಗೆ ಸವಾಲೊಡ್ಡಲು ಯಾರಿಗೂ ಸಾಧ್ಯವಿಲ್ಲ: ನಿತೀಶ್
ಪಾಟ್ನಾ, ಜುಲೈ 31: 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಸವಾಲೊಡ್ಡಲು ಯಾರಿಗೂ ಸಾಧ್ಯವಿಲ್ಲ ಎಂದು ಸೋಮವಾರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ಬಹುಮತ ಸಾಬೀತು ಪಡಿಸಿದ ನಂತರ ಮೊದಲ ಬಾರಿ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಮಹಾಘಟ್ ಬಂಧನ್ ಉಳಿಸಲು ತುಂಬ ಪ್ರಯತ್ನ ಪಟ್ಟೆ. ಆದರೆ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತವರ ಕುಟುಂಬ ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಿ, ಶುದ್ಧರಾಗಿ ಬರಲು ನಿರಾಕರಿಸಿದ್ದರಿಂದ ಮೈತ್ರಿ ಮುರಿಯಬೇಕಾಯಿತು ಎಂದರು.

ಆರ್ ಜೆಡಿ ನಾಯಕರು ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗಿ ಬಂದಿದ್ದರೆ ಇಂದಿನ ರಾಜಕೀಯ ಪರಿಸ್ಥಿತಿಯೇ ಬೇರೆ ಇತ್ತು ಎಂದು ಹೇಳಿದರು.
"ನನಗೆ ಬೇರೆ ಆಯ್ಕೆಗಳಿರಲಿಲ್ಲ. ಎಲ್ಲವನ್ನೂ ಸಹಿಸಿಕೊಂಡೆ. ಇದೆಲ್ಲ ಮೈತ್ರಿಯಲ್ಲಿ ಆಗುತ್ತದೆ ಅಂದುಕೊಂಡೆ. ಆ ಮೇಲೆ ಕೆಲಸ ಮುಂದುವರಿಸಿದೆ ಎಂದರು.
ಆಗಸ್ಟ್ ಐದರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪಶ್ಚಿಮ ಬಂಗಾಲದ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ಜೆಡಿಯು ಬೆಂಬಲಿಸುತ್ತದೆ. ಈ ಬಗ್ಗೆ ಬಿಜೆಪಿಗೆ ಯಾವುದೇ ಆಕ್ಷೇಪವಿಲ್ಲ ಎಂದು ನಿತೀಶ್ ಹೇಳಿದರು.
ಒನ್ಇಂಡಿಯಾ ನ್ಯೂಸ್











Click it and Unblock the Notifications