ಎಕ್ಸ್‌ಪ್ರೆಸ್ ದರ್ಜೆಗೆ ರೈಲುಗಳ ಮರು ವಿನ್ಯಾಸ: ಅಂತ್ಯಗೊಂಡಿತೇ ಪ್ಯಾಸೆಂಜರ್ ರೈಲುಗಳ ಯುಗ?
ನವದೆಹಲಿ, ಫೆಬ್ರವರಿ.26: ಭಾರತೀಯ ರೈಲ್ವೇ ತನ್ನ ರೈಲುಗಳನ್ನು ಮೇಲ್ದರ್ಜೆಗೆ ಏರಿಸುತ್ತಿದೆ. ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ವಿಶೇಷ ರೈಲುಗಳಾಗಿ ಮರುವಿನ್ಯಾಸಗೊಳಿಸುತ್ತಿದ್ದು, ಇದರೊಂದಿಗೆ ಪ್ಯಾಸೆಂಜರ್ ರೈಲುಗಳ ಯುಗ ಅಂತ್ಯಗೊಂಡಂತಿದೆ.
ಪ್ಯಾಸೆಂಜರ್ ರೈಲುಗಳಿಗೆ ಮೀಸಲಾದ 'ಎರಡನೇ ದರ್ಜೆಯ ಸಾಮಾನ್ಯ ದರ'ವನ್ನು ಈಗಾಗಲೇ ಕೈಬಿಡಲಾಗಿದೆ ಮತ್ತು ಎಕ್ಸ್‌ಪ್ರೆಸ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಎಕ್ಸ್‌ಪ್ರೆಸ್ ದರಗಳನ್ನು ವಿಧಿಸಲಾಗುತ್ತದೆ. ಇದು ಹಿಂದಿನ ದರಕ್ಕಿಂತ ದುಪ್ಪಟ್ಟು ಎಂಬುದು ಗಮನಿಸಬೇಕು. ರೈಲ್ವೆ ಮೂಲಗಳ ಪ್ರಕಾರ, ಪ್ಯಾಸೆಂಜರ್ ರೈಲುಗಳನ್ನು ಅದೇ ಹಳೆಯ ಮಾರ್ಗಗಳು ಮತ್ತು ಸ್ಟಾಪ್‌ಗಳಲ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಳಾಗಿ ಬಿಡಲಾಗುತ್ತಿದೆ.

ಚೆನ್ನೈ ವಿಭಾಗದಲ್ಲಿ ಪ್ಯಾಸೆಂಜರ್ ರೈಲುಗಳನ್ನು ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಮೆಮೋ) ಗಳಾಗಿ ಬದಲಾಯಿಸಲಾಗಿದೆ. ತಿರುಚ್ಚಿ ಮತ್ತು ಮಧುರೈ ವಿಭಾಗಗಳಲ್ಲಿ ಕೆಲವು ಜೋಡಿ ರೈಲುಗಳು ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡೆಮೋಗಳು) ಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಏರುತ್ತಿರುವ ರೈಲ್ವೇ ಟಿಕೆಟ್ ದರಗಳು; ಹೆಚ್ಚಾದ ಪ್ರಯಾಣಿಕರ ಸಂಕಟ
ಬಹುತೇಕ ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುವ ಪ್ಯಾಸೆಂಜರ್ ರೈಲುಗಳು ಬಡ ಪ್ರಯಾಣಿಕರು, ವಿಶೇಷವಾಗಿ ಸಣ್ಣ ಮಾರಾಟಗಾರರು, ಕೃಷಿ ಕಾರ್ಮಿಕರು ಮತ್ತು ದೈನಂದಿನ ಕೂಲಿ ಕಾರ್ಮಿಕರು ಬಳಸುತ್ತಾರೆ. ಈ ರೈಲುಗಳ ಟಿಕೆಟ್ ದರ ಕೂಡ ಕಡಿಮೆ. ಆದರೆ, ಎಕ್ಸ್‌ಪ್ರೆಸ್ ವಿಶೇಷ ರೈಲುಗಳಿಗೆ ಈಗ ಎಕ್ಸ್‌ಪ್ರೆಸ್ ರೈಲುಗಳಿಗೆ ಸರಿಸಮಾನವಾಗಿ ಶುಲ್ಕ ವಿಧಿಸಲಾಗುತ್ತಿದೆ.

ಕೆಲವು ಮಾರ್ಗಗಳಲ್ಲಿ ದರಗಳು ದುಪ್ಪಟ್ಟಾಗಿದೆ. ಉದಾಹರಣೆಗೆ, ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲು ಚೆನ್ನೈನಿಂದ ತಿರುಪತಿಗೆ ಪ್ಯಾಸೆಂಜರ್ ಅಥವಾ ಡಿಇಎಂಯು ರೈಲಿನಲ್ಲಿ ಪ್ರಯಾಣಿಸುವ ವೆಚ್ಚ 35 ರೂಪಾಯಿ ಆಗಿತ್ತು. ಆದರೆ ಕೋವಿಡ್ ಲಾಕ್‌ಡೌನ್ ನಂತರ, ದರವು 70 ಕ್ಕೆ ಏರಿಕೆಯಾಗಿದೆ. ಅದೇ ರೀತಿ ಚೆನ್ನೈ ಬೀಚ್‌ನಿಂದ ವೆಲ್ಲೂರಿಗೆ 30 ರೂಪಾಯಿ ಮತ್ತು ಚೆನ್ನೈ ಎಗ್ಮೋರ್‌ನಿಂದ ಪುದುಚೇರಿಗೆ 45 ರೂಪಾಯಿ ಇದ್ದ ಟಿಕೆಟ್ ದರ ಕ್ರಮವಾಗಿ 65 ರೂಪಾಯಿ ಮತ್ತು 80 ರೂಪಾಯಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ರೈಲ್ವೇಯು ಬುಕಿಂಗ್ ಕೌಂಟರ್‌ಗಳಲ್ಲಿ ಶುಲ್ಕದ ಚಾರ್ಟ್ ಅನ್ನು ಪೋಸ್ಟ್ ಮಾಡಿದೆ. ಇದು ಸಾಂಕ್ರಾಮಿಕ ರೋಗಕ್ಕಿಂತ ಮೊದಲು ಅಥವಾ ಇನ್ನು ಮುಂದೆ ಮಾನ್ಯವಾಗಿಲ್ಲದ ಎರಡನೇ ದರ್ಜೆಯ ಸಾಮಾನ್ಯ ದರದ ಪಟ್ಟಿಯಿದೆ. "ಹಲವಾರು ಸಂದರ್ಭಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ಬೋರ್ಡ್‌ನಲ್ಲಿ ಪ್ರದರ್ಶಿಸಲಾದ ದರವನ್ನು ಉಲ್ಲೇಖಿಸುತ್ತಾರೆ. ಏಕೆ ದುಪ್ಪಟ್ಟು ಹಣ ಪಾವತಿಸಬೇಕು ಎಂದು ನಮ್ಮೊಂದಿಗೆ ವಾದಿಸುತ್ತಾರೆ" ಎಂದು ಟಿಕೆಟ್ ವಿತರಿಸುವ ಸಿಬ್ಬಂದಿ ಹೇಳಿದ್ದಾರೆ.
"ಪ್ಯಾಸೆಂಜರ್ ರೈಲುಗಳು ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲ ಎಂದು ಅವರಿಗೆ ತಿಳಿದಿರುವುದಿಲ್ಲ. ಅದನ್ನು ಅರ್ಥಮಾಡಿಕೊಳ್ಳಲು ಸಿದ್ಧರಿಲ್ಲ. ಯುಟಿಎಸ್ ಆ್ಯಪ್ ಕೂಡ ಹಳೆಯ ದರಗಳನ್ನು ತೋರಿಸುತ್ತಿದೆ ಎಂದು ಹಲವು ದೂರುಗಳಿವೆ'' ಎಂದು ಟಿಕೆಟ್ ಬುಕ್ಕಿಂಗ್ ಕ್ಲರ್ಕ್ ತಿಳಿಸಿದ್ದಾರೆ.
ಸಾರ್ವಜನಿಕ ದೂರುಗಳ ನಂತರ, ನೈಋತ್ಯ ರೈಲ್ವೆಯು ತನ್ನ ವಲಯದಲ್ಲಿ ಪೂರ್ವ ಕೋವಿಡ್ ದರ ಚಾರ್ಟ್ ಬದಲಾಯಿಸಿ. ಫೆಬ್ರವರಿ 22, 2024 ರಂದು ಹೊರಡಿಸಲಾದ ಆದೇಶದಲ್ಲಿ, ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಅಧಿಕಾರಿಗಳಿಗೆ ಮುಖ್ಯ ವಾಣಿಜ್ಯ ವ್ಯವಸ್ಥಾಪಕರು ಸೂಚನೆ ನೀಡಿದ್ದು, ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುವ ಎಲ್ಲಾ ಮೆಮು/ಡಿಇಎಂಯು ಮತ್ತು ಪ್ಯಾಸೆಂಜರ್ ರೈಲುಗಳಿಗೆ, ಮೂಲದಿಂದ ಗಮ್ಯಸ್ಥಾನದವರೆಗೆ ಎರಡನೇ ದರ್ಜೆಯ ಸಾಮಾನ್ಯ ದರವನ್ನು ವಿಧಿಸಬೇಕು. ಪ್ರಯಾಣಿಕರ ಶುಲ್ಕವನ್ನು ಕೋವಿಡ್ ಪೂರ್ವದ ಅವಧಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿಯಮಗಳ ಪ್ರಕಾರ, ಪ್ಯಾಸೆಂಜರ್ ರೈಲುಗಳನ್ನು ಪ್ರಯಾಣಿಕರು ಬಳಸುವ ರೈಲುಗಳು ಎಂದು ವ್ಯಾಖ್ಯಾನಿಸಲಾಗಿದೆ. ಇದು ಬಹುತೇಕ ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ರೈಲುಗಳು ನಿಧಾನವಾಗಿರುತ್ತವೆ ಮತ್ತು ಮೇಲ್/ಎಕ್ಸ್‌ಪ್ರೆಸ್ ರೈಲುಗಳಿಗಿಂತ ಕಡಿಮೆ ದರವನ್ನು ಹೊಂದಿರುತ್ತವೆ. ಎಕ್ಸ್‌ಪ್ರೆಸ್ ರೈಲುಗಳು ವೇಗವಾಗಿದ್ದು, ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ. ಪ್ಯಾಸೆಂಜರ್ ರೈಲುಗಳನ್ನು ನಿರ್ವಹಿಸುವ ದಶಕಗಳ ಹಳೆಯ ಪರಿಕಲ್ಪನೆಯನ್ನು ಸಾಂಕ್ರಾಮಿಕ ರೋಗದ ನಂತರ ಕೈಬಿಡಲಾಗಿದೆ " ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
(ಮಾಹಿತಿ: ದಿ ಹಿಂದೂ)












Click it and Unblock the Notifications