ನೋಟು ವಿನಿಮಯ ನಿಂತ ನಂತರ ಮುಂದೇನು?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 25: ಹಳೇ 500, 1000 ನೋಟುಗಳ ವಿನಿಮಯ ಬ್ಯಾಂಕ್ ಗಳಲ್ಲಿ ನವೆಂಬರ್ 24ಕ್ಕೆ ನಿಂತಿದೆ. ಆದರೆ ರಿಸರ್ವ್ ಬ್ಯಾಂಕ್ ನಲ್ಲಿ ವಿನಿಮಯಕ್ಕೆ ಅವಕಾಶ ಇನ್ನೂ ಇದೆ. ಇಲ್ಲಿ ನೋಟು ವಿನಿಮಯಕ್ಕೆ ಸಂಬಂಧಪಟ್ಟ ಕೆಲ ಉಪಯುಕ್ತ ಮಾಹಿತಿಯನ್ನು ಕೊಡಲಾಗಿದೆ.

ಈ ಬಗ್ಗೆ ರಿಸರ್ವ್ ಬ್ಯಾಂಕ್ ಸಲಹೆ ಮಾಡಿದ್ದು, ಸಾರ್ವಜನಿಕರು ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದರ ಮಿತಿ ಹಾಗೂ ಮತ್ತಿತರ ನಿಯಮಗಳು ಹಿಂದೆ ಇದ್ದಂತೆಯೇ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ. ಹಾಗಿದ್ದರೆ ನವೆಂಬರ್ 25ರಿಂದ ನಿಯಮಗಳು ಹೇಳುವುದೇನು ಎಂಬ ವಿವರ ಇಲ್ಲಿದೆ.

No more over the counter currency exchange- what you should do

* ಗ್ರಾಹಕರು ಹಳೆಯ ನೋಟುಗಳನ್ನು ತಮ್ಮ ಖಾತೆಗೆ ಜಮೆ ಮಾಡಬಹುದು. ಹೊಸ ನೋಟನ್ನು ಎಟಿಎಂಗಳಲ್ಲಿ ಮತ್ತು ಚೆಕ್ ಮೂಲಕ ಬ್ಯಾಂಕ್ ಗಳಲ್ಲಿ ವಿಥ್ ಡ್ರಾ ಮಾಡಬಹುದು
* ಹಳೇ ನೋಟುಗಳನ್ನು ಈ ವರ್ಷದ ಕೊನೆಯವರೆಗೆ ಬ್ಯಾಂಕ್ ಗೆ ಜಮಾ ಮಾಡಬಹುದು.
* ಚೆಕ್ ಮೂಲಕ ಬ್ಯಾಂಕ್ ನಿಂದ ವಾರಕ್ಕೆ ವಿಥ್ ಡ್ರಾ ಮಾಡಬಹುದಾದ ಮೊತ್ತ 24 ಸಾವಿರದಲ್ಲಿ ಯಾವುದೇ ಬದಲಾವಣೆ ಇಲ್ಲ
* ಕಾರ್ಡ್ ಮೂಲಕ ನಗದು ವಿಥ್ ಡ್ರಾ ಮಿತಿ ದಿನಕ್ಕೆ 2,500
* ಪೇಟಿಎಂನಂಥದ್ದನ್ನು ಬಳಸಿ ಒಂದು ತಿಂಗಳಿಗೆ 20 ಸಾವಿರದವರೆಗೆ 'ಡಿಜಿಟಲ್ ವ್ಯವಹಾರ' ಮಾಡಬಹುದು
* ನೀರು ಹಾಗೂ ವಿದ್ಯುತ್ ಬಿಲ್ ಅನ್ನು ಹಳೇ ನೋಟು ಬಳಸಿಯೇ ಪಾವತಿಸಬಹುದು. ಅದಕ್ಕೆ ಡಿಸೆಂಬರ್ 15ರವರೆಗೆ ಅವಕಾಶ ಇದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The exchange of old currency across the counter has been stopped. The decision was taken last night and immediately announced. However exchange of notes at the Reserve Bank of India would continue. Here are some points that would be helpful in the aftermath of the decision.
Please Wait while comments are loading...