ಮಹಾಪುರುಷರ ಜಯಂತಿಗೆ ಶಾಲೆಗಿಲ್ಲ ರಜಾ: ಯೋಗಿ ಆದಿತ್ಯನಾಥ್
ಮಹಾಪುರುಷರ ಜನ್ಮದಿನಗಳಂದು ರಜೆ ನೀಡುವ ಬದಲು, ಆ ಮಹಾಪುರುಷರ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ, ಎಂದಿನಂತೆಯೇ ಶಾಲೆ ನಡೆಸಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಕ್ನೋ, ಏಪ್ರಿಲ್ 14: ಉತ್ತರ ಪ್ರದೇಶದ ಶಾಲೆಗಳಿಗೆ ಇನ್ನು ಮುಂದೆ ಯಾವುದೇ ಮಹಾಪುರುಷರ ಜಯಂತಿಗಳಿಗೂ ರಜೆ ನೀಡುವಂತಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.[ಯೋಗಿ ಉದಾಹರಣೆ ಕೊಟ್ಟು ಮಹಾರಾಷ್ಟ್ರದ ಫಡಣವೀಸ್ ಗೆ ಚುಚ್ಚಿದ ಶಿವಸೇನೆ]
ಅಂಬೇಡ್ಕರ್ ಅವರ 126 ನೇ ಜಯಂತಿ ನಿಮಿತ್ತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ನಮಿಸಿ, ಮಾತನಾಡುತ್ತಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ, ರಾಷ್ಟ್ರಾಭಿವೃದ್ಧಿಗಾಗಿ ಹೋರಾಡಿದ ಮಹನೀಯರ ಜನ್ಮದಿನದಂದು ಶಾಲೆಗೆ ರಜೆ ನೀಡುವ ಬದಲು, ಆ ದಿನ ಎಂದಿನಂತೆಯೇ ಶಾಲೆ ನಡೆಸಿ ಎಂದು ಶಿಕ್ಷಕರಿಗೆ ಅವರು ಹೇಳಿದ್ದಾರೆ.[ಗಂಗಾ ಶುದ್ಧೀಕರಣಕ್ಕಾಗಿ ಚರ್ಮ ಕಾರ್ಖಾನೆ ಸ್ಥಳಾಂತರ]

ಮಹಾಪುರುಷರ ಜಯಂತಿಯಂದು ಆ ಮಹಾಪುರುಷರ ಬದುಕು, ಸಾಧನೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ. ಇದರಿಂದ ಅವರಲ್ಲೂ ದೇಶಭಕ್ತಿ ಮೊಳೆಯುತ್ತದೆ ಮತ್ತು ದೇಶಕ್ಕಾಗಿ ಹೋರಾಡಿದ ಮಹನೀಯರ ಪರಿಚಯವೂ ಅವರಿಗಾಗುತ್ತದೆ ಎಂದಿದ್ದಾರೆ.












Click it and Unblock the Notifications