• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೂಪಾಂತರಿ ವೈರಸ್‌ ವಿರುದ್ಧ ಯಾವ ಲಸಿಕೆಗಳೂ ಪರಿಣಾಮಕಾರಿಯಲ್ಲ ಎನ್ನಲು ಆಧಾರವಿಲ್ಲ: ಸರ್ಕಾರ

|

ನವದೆಹಲಿ, ಡಿಸೆಂಬರ್ 30: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೊನಾವೈರಸ್ ವಿರುದ್ಧ ಯಾವುದೇ ಲಸಿಕೆಗಳು ಪರಿಣಾಮಕಾರಿಯಾಗುವುದಿಲ್ಲ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈಗ ಸಿದ್ಧವಾಗುತ್ತಿರುವ ಕೊರೊನಾ ಲಸಿಕೆಗಳೇ ಅದನ್ನು ನಿವಾರಿಸಬಹುದು.ಕೊರೊನಾ ಸೋಂಕಿಗೆ ಸಿದ್ಧವಾಗಿರುವ ಲಸಿಕೆಗಳು ಸೋಂಕಿನ ವಿರುದ್ಧ ಕಾರ್ಯ ನಿರ್ವಹಿಸಲಿವೆ.

ರೂಪಾಂತರ ವೈರಸ್ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿ

ಬ್ರಿಟನ್ ಅಥವಾ ದಕ್ಷಿಣ ಆಫ್ರಿಕಾದಿಂದ ವರದಿಯಾದ SARS-CoV-2 ರೂಪಾಂತರಿ ಕೊರೊನಾ ಸೋಂಕಿನ ವಿರುದ್ಧ ಪ್ರಸ್ತುತ ಲಸಿಕೆಗಳು ವಿಫಲವಾಗುತ್ತವೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ದೇಶದಲ್ಲಿ ಉಂಟಾದ ಒಟ್ಟಾರೆ ಕೋವಿಡ್-19 ಸಾವುಗಳ ಪೈಕಿ ಶೇ.70ರಷ್ಟು ಪುರುಷರದ್ದಾಗಿದ್ದು, ಈ ಪೈಕಿ ಶೇ.45ರಷ್ಟು ಸಾವುಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ವರದಿಯಾಗಿದೆ.

ಪ್ರಸ್ತುತ ದೇಶದಲ್ಲಿ 2.7 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಸಕಾರಾತ್ಮಕ ದರವು ಶೇ. 6.02 ರಷ್ಟಿದೆ. ಕಳೆದ ವಾರದಲ್ಲಿ ಈ ದರ ಶೇ.2.25ರಷ್ಟಿತ್ತು. ಒಟ್ಟಾರೆ ಸಕ್ರಿಯ ಪ್ರಕರಣಗಳ ಪೈಕಿ ಶೇ.60ರಷ್ಟು ಪಾಲು ದೇಶದ 5 ರಾಜ್ಯಗಳದ್ದಾಗಿದೆ.

ಈ ರಾಜ್ಯಗಳಾವುವು ಎಂದರೆ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢ ಎಂದು ಭೂಷಣ್ ಹೇಳಿದರು.

ಹೊಸ ಕೊರೊನಾ ಪ್ರಕರಣಗಳಲ್ಲಿ ಕುಸಿತ

ಹೊಸ ಕೊರೊನಾ ಪ್ರಕರಣಗಳಲ್ಲಿ ಕುಸಿತ

ಹಾಗೆಯೇ ಇದೇ ವಿಚಾರವಾಗಿ ಮಾತನಾಡಿದ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ ವಿ ಕೆ ಪಾಲ್ ಅವರು, 'ಹೊಸ ಕೋವಿಡ್-19 ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ. ದೇಶದಲ್ಲಿ ಪ್ರಸ್ತುತ ವರದಿಯಾಗುತ್ತಿರುವ ಹೊಸ ಕೊರೊನಾ ಸೋಂಕು ಪ್ರಕರಣಗಳು, ಸಕ್ರಿಯ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲೂ ನಿರಂತರ ಇಳಿಕೆಯಾಗುತ್ತಿದೆ.

ರೋಗದ ತೀವ್ರತೆ ಹೆಚ್ಚಳ

ರೋಗದ ತೀವ್ರತೆ ಹೆಚ್ಚಳ

ಹೊಸ ರೂಪಾಂತರ ಕೊರೊನಾ ಸೋಂಕು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ಇದುವರೆಗೂ ಕಂಡುಬಂದಿಲ್ಲ. ಬ್ರಿಟನ್ ಅಥವಾ ದಕ್ಷಿಣ ಆಫ್ರಿಕಾದಿಂದ ವರದಿಯಾದ ಕೊರೊನಾ ರೂಪಾಂತರ ವೈರಸ್ ಗಳಿಂದ ರಕ್ಷಿಸಲು ಪ್ರಸ್ತುತ ಲಸಿಕೆಗಳು ವಿಫಲವಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಲಸಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ

ಲಸಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ

ಹೆಚ್ಚಿನ ಲಸಿಕೆಗಳು ಸ್ಪೈಕ್ ಪ್ರೋಟೀನ್‌ ಅನ್ನು ಗುರಿಯಾಗಿರಿಸಿಕೊಳ್ಳುತ್ತವೆ, ಇದರಲ್ಲಿ ರೂಪಾಂತರಗಳಲ್ಲಿ ಬದಲಾವಣೆಗಳಿವೆ. ಆದರೆ ಲಸಿಕೆಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಮತ್ತು ರಕ್ಷಣಾತ್ಮಕ ಪ್ರತಿಕಾಯಗಳು ವ್ಯಾಪಕ ಶ್ರೇಣಿಯನ್ನು ಉತ್ಪಾದಿಸಲು ಉತ್ತೇಜಿಸುತ್ತವೆ ಎಂದು ಹೇಳಿದರು.

ಭಾರತಕ್ಕೂ ಕಾಲಿಟ್ಟ ರೂಪಾಂತರಿ ವೈರಸ್

ಭಾರತಕ್ಕೂ ಕಾಲಿಟ್ಟ ರೂಪಾಂತರಿ ವೈರಸ್

ಚಳಿಗಾಲದ ಸಂದರ್ಭದಲ್ಲಿ ಜನಸಂಖ್ಯೆಯ ಬಹುಪಾಲು ಜನರು ಇನ್ನೂ ಸೋಂಕಿಗೆ ಒಳಗಾಗುತ್ತಾರೆ. ಬ್ರಿಟನ್ ರೂಪಾಂತರಿ ವೈರಸ್ ಜಗತ್ತಿನ ಇತರೆ ದೇಶಗಳಂತೆ ಭಾರತಕ್ಕೂ ಪ್ರಯಾಣಿಸಿದೆ. ಅದರ ಪ್ರಸರಣದ ವೇಗ ಗಣನೀಯವಾಗಿ ಹೆಚ್ಚಾಗಿದ್ದು, ನಾವು ಈ ಬಗ್ಗೆ ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಿದರು.

ಕೊರೊನಾ ಸೋಂಕಿಗೆ ತುತ್ತಾದವರ ಮಾಹಿತಿ

ಕೊರೊನಾ ಸೋಂಕಿಗೆ ತುತ್ತಾದವರ ಮಾಹಿತಿ

ಇನ್ನು ಕೊರೊನಾ ವೈರಸ್ಗೆ ಒಳಗಾದವರ ಲಿಂಗ ಮತ್ತು ವಯಸ್ಸಿನ ಆಧಾರದ ಮೇಲೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ದೇಶದಲ್ಲಿ ಒಟ್ಟು ಪ್ರಕರಣ ಅಥವಾ ಒಟ್ಟಾರೆ ಸೋಂಕಿತರ ಪೈಕಿ ಶೇ.63 ರಷ್ಟು ಪುರುಷರು ಮತ್ತು ಶೇ.37ರಷ್ಟು ಮಹಿಳೆಯರು ಸೋಂಕಿಗೆ ತುತ್ತಾಗಿದ್ದಾರೆ. ಅಂತೆಯೇ ಶೇ.8ರಷ್ಟು ಸೋಂಕಿತರು 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಶೇ.13ರಷ್ಟು ಸೋಂಕಿತರು 18-25 ವರ್ಷ ವಯಸ್ಸಿನವರಾಗಿದ್ದಾರೆ. ಶೇ.39ರಷ್ಟು ಸೋಂಕಿತರು 26-44 ವರ್ಷ ವಯಸ್ಸಿನವರಾಗಿದ್ದಾರೆ. ಶೇ.26ರಷ್ಟು ಸೋಂಕಿತರು 45-60 ವರ್ಷದವರಾಗಿದ್ದು, 60 ವರ್ಷಕ್ಕಿಂತ ಮೇಲ್ಪಟ್ಟವರ ಗುಂಪಿನಲ್ಲಿ ಶೇ.14ರಷ್ಟು ಸೋಂಕಿತರಿದ್ದಾರೆ ಎಂದು ಹೇಳಿದರು.

English summary
COVID-19 vaccines will work against new variants of the virus and there is no evidence that current vaccines will fail to protect against the SARS-CoV-2 mutants reported from the UK or South Africa, the government said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X