ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರದ ನಡೆಗೆ ಹಿನ್ನಡೆ, 'ಏರ್ ಇಂಡಿಯಾ' ಕೊಳ್ಳುವವರೇ ಇಲ್ಲ!

By Sachhidananda Acharya
|
Google Oneindia Kannada News

ನವದೆಹಲಿ, ಮೇ 31: ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದಲ್ಲಿ ಖಾಸಗಿಯವರಿಗೆ ಪಾಲು ನೀಡುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಆರಂಭಿಕ ಹಿನ್ನೆಡೆಯಾಗಿದೆ.

ನಷ್ಟ ಭರಿತ ಏರ್ ಇಂಡಿಯಾ ಖರೀದಿಗೆ ಇಲ್ಲಿಯವರೆಗೆ ಯಾವುದೇ ಬಿಡ್ ಗಳು ಬಂದಿಲ್ಲ ಎಂದು ಸರಕಾರ ಹೇಳಿದೆ. ಏರ್ ಇಂಡಿಯಾದಲ್ಲಿ ಶೇರು ಖರೀದಿಗೆ ಪ್ರಸ್ತಾವನೆ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು.

No bids received for Air India stake sale, says govt

ಏರ್ ಇಂಡಿಯಾದಲ್ಲಿ ಸರಕಾರಿ ಹೂಡಿಕೆಯನ್ನು ಹಿಂಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ ಎಂದು ವಿಮಾನಯಾನ ಸಚಿವಾಲಯ ಹೇಳಿದೆ. ಈ ಬಗ್ಗೆ ಮುಂದಿನ ಕ್ರಮವನ್ನು ಸೂಕ್ತವಾಗಿ ತೆಗೆದುಕೊಳ್ಳಲಾಗುವುದು ಎಂದು ಅದು ಹೇಳಿದೆ.

ಏರ್ ಇಂಡಿಯಾದಲ್ಲಿರುವ ಶೇಕಡಾ 76 ಶೇರುಗಳನ್ನು ಹಿಂಪಡೆಯಲು ಏರ್ ಇಂಡಿಯಾ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಹೂಡಿಕೆ ಮಾಡಲು ಬಿಡ್ ಆಹ್ವಾನಿಸಿತ್ತು.

ಮಾರ್ಚ್ 28ರಂದು ಹೊರಡಿಸಲಾದ ಮೆಮೊರಾಂಡಂ ಪ್ರಕಾರ ಸರಕಾರ ಏರ್ ಇಂಡಿಯಾದಲ್ಲಿ ಶೇಕಡಾ 24 ಶೇರುಗಳನ್ನು ಇಟ್ಟುಕೊಂಡು ಉಳಿದಿದ್ದನ್ನು ಮಾರಾಟ ಮಾಡಲು ಮುಂದಾಗಿತ್ತು. ಬಿಡ್ ಗೆದ್ದವರು ವಿಮಾನಯಾನ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷ ಹೂಡಿಕೆ ಮಾಡಬೇಕಾಗಿತ್ತು. 2017ರ ಮಾರ್ಚ್ ಅಂತ್ಯಕ್ಕೆ ಏರ್ ಇಂಡಿಯಾದ ಒಟ್ಟು ಸಾಲ 48,000 ಕೋಟಿ ರೂಪಾಯಿ ಆಗಿದ್ದು, ಬಿಡ್ ಗೆದ್ದವರು ಈ ಹೊರೆ ಹೊತ್ತುಕೊಳ್ಳಬೇಕಾಗಿತ್ತು.

ಆದರೆ ಈಗ ವಿಮಾನಯಾನ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಯಾರೂ ಮುಂದೆ ಬಂದಿಲ್ಲ. ಈ ಹಿಂದೆಯೇ ತಾವು ಈ ಬಿಡ್ ನಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಇಂಡಿಗೋ ಮತ್ತು ಜೆಟ್ ಏರ್ ವೇಸ್ ಹೇಳಿಕೆ ನೀಡಿದ್ದವು. ಇದೀಗ ಎಲ್ಲಾ ಕಂಪನಿಗಳೂ ಏರ್ ಇಂಡಿಯಾ ಹೂಡಿಕೆಯಿಂದ ಹಿಂದೆ ಸರಿದಿವೆ.

English summary
In a major setback to the Air India disinvestment process, the government said no initial bids were received for the proposed strategic stake sale of the debt laden airlines by the deadline today. The deadline for submission of Expression of Interest ended today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X