ಪ್ರಧಾನಿಯಾಗುವ ಇಚ್ಛೆ ನನಗಿಲ್ಲ: ಚಂದ್ರಬಾಬು ನಾಯ್ಡು
ಹೈದರಾಬಾದ್, ಮೇ 25: "ಪ್ರಧಾನ ಮಂತ್ರಿಯಾಗುವ ಯಾವುದೇ ಇಚ್ಛೆ ನನಗಿಲ್ಲ" ಎಂದು ತೆಲಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಗುರುವಾರ ಹೈದರಾಬಾದಿನಲ್ಲಿ ನಡೆದ ಟಿಡಿಪಿ ಸಭೆಯೊಂದರಲ್ಲಿ ನಾಯ್ಡು ಬೆಂಬಲಿಗರು ಮತ್ತು ಟಿಡಿಪಿ ಕಾರ್ಯಕರ್ತರು, ಚಂದ್ರಬಾಬು ನಾಯ್ಡು ಅವರು ಭಾರತದ ಪ್ರಧಾನಿಯಾಗಬೇಕು ಎಂಬ ಇಂಗಿತ ವ್ಯಕ್ತಪಡಿಸಿ, ಘೋಷಣೆ ಕೂಗುತ್ತಿದ್ದರು.
ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿದ ನಾಯ್ಡು, 'ನಾನು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ. ಆದರೆ 2019 ರ ಲೋಕಸಭಾ ಚುನಾವಣೆಯಲ್ಲಿ ಏನು ಬೇಕಾದರೂ ಆಗಬಹುದು. ಕೇಂದ್ರ ಸರ್ಕಾರ ತೆಲಂಗಾಣ ಮತ್ತು ಆಂಧ್ರಪ್ರದೇಶದ ಬಗ್ಗೆ ಮಲತಾಯಿ ಧೋರಣೆ ಪ್ರಕಟಿಸಿದೆ. ಮುಂಬೈ, ದೆಹಲಿಗೆ ಬುಲೆಟ್ ಟ್ರೈನ್ ನೀಡಿದರೂ, ತೆಲಂಗಾಣ, ಆಂಧ್ರಕ್ಕೆ ನೀಡಿಲ್ಲ. ಅಪನಗದೀಕರಣವನ್ನು ನಾನು ಬೆಂಬಲಿಸಿದ್ದು ನಿಜ. ಆದರೆ ಈಗ ನಮ್ಮದೇ ಹಣವನ್ನು ಖರ್ಚು ಮಾಡಲೂ ನಮ್ಮಿಂದಾಗುತ್ತಿಲ್ಲ" ಎ ಂದು ಅವರು ಕೇಮದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗದ ಕುರಿತು ಸಂತಸವನ್ನೂ ಅವರು ವ್ಯಕ್ತಪಡಿಸಿದರು.












Click it and Unblock the Notifications