ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ಆಧಾರ್ ಇಲ್ಲದಿದ್ರೆ ಸಿಮ್ ಕಾರ್ಡ್ ಸಿಗೋಲ್ಲ!?

ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಟೆಲಿಕಾಂ ಸರ್ವೀಸ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ.

By ಅನುಷಾ ರವಿ
|
Google Oneindia Kannada News

ನವದೆಹಲಿ, ಮಾರ್ಚ್ 24: ಹೊಸ ಸಿಮ್ ಕಾರ್ಡ್ ಪಡೆಯುವ ಯಾವುದೇ ಗ್ರಾಹಕನಿಗೆ ಶೀಘ್ರದಲ್ಲೇ ಆಧಾರ್ ಕಡ್ಡಾಯವಾಗಲಿದೆ ಎಂದು ಮೂಲಗಳು ಹೇಳಿವೆ.

ನೂತನ ಮೊಬೈಲ್ ಸಂಪರ್ಕ ಪಡೆಯುವ ಗ್ರಾಹಕನಿಗೆ ಇನ್ನು ಆಧಾರ್ ಕಾರ್ಡ್ ಕಡ್ಡಾಯಗೊಳಿಸಬೇಕೆಂದು ಈಗಾಗಲೇ ಕೇಂದ್ರ ಸರ್ಕಾರ, ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಟೆಲಿಕಾಂ ಸರ್ವೀಸ್ ಕಂಪನಿಗಳಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ ಎಂದು ಹೇಳಲಾಗಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

No Aadhar, No SIM card?

ಹಾಗಾಗಿ, ಹೊಸ ಸಿಮ್ ಕಾರ್ಡ್ ಪಡೆಯ ಬಯಸುವ ಯಾವುದೇ ಗ್ರಾಹಕ ತನ್ನ ಗುರುತಿಗಾಗಿ ನೀಡುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ನ
ನಕಲು ಪ್ರತಿ ಕಡ್ಡಾಯವಾಗಲಿದೆ.

ಹಾಲಿ ಗ್ರಾಹಕರಿಗೂ ಕಡ್ಡಾಯ: ಅಷ್ಟೇ ಅಲ್ಲ, ಈಗಾಗಲೇ ಸೆಲ್ಯೂಲಾರ್ ಸೇವೆ ಪಡೆಯುತ್ತಿರುವ ಗ್ರಾಹಕರೂ ತಮ್ಮ ಸೇವೆಗಳನ್ನು ಮುಂದುವರಿಸಲು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕಿದೆ. ಹೀಗೆ, ಲಿಂಕ್ ಆದ ಆಧಾರ್ ಕಾರ್ಡ್ ಸಂಖ್ಯೆಗಳನ್ನು ಸಂಬಂಧಪಟ್ಟ ಸೆಲ್ಯೂಲಾರ್ ಕಂಪನಿಗಳು ಮರುಪರಿಶೀಲಿಸಿ, ಆನಂತರವಷ್ಟೇ ಸೇವೆ ಮುಂದುವರಿಸಬೇಕು ಎಂದೂ ಹೇಳಲಾಗಿದೆ.

English summary
The union government is said to have asked telecom companies to link customers' SIM card with their Aadhar numbers. According to a news channel's report, the government has already issued notices to telecom companies asking them to link customer database, SIM number with their Aadhar number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X