ಎನ್.ಡಿ.ಎ ಸಂಚಾಲಕರಾಗಿ ಮತ್ತೆ ನಿತೀಶ್ ಕುಮಾರ್?

ನವದೆಹಲಿ, ಆಗಸ್ಟ್ 13: ಎನ್.ಡಿ.ಎ ಸಂಚಾಲಕರಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ನೇಮಕವಾಗುವ ಸಾಧ್ಯತೆ ಇದೆ. ಇದರ ಜತೆಗೆ ಸಂಪುಟ ಪುನಾರಚನೆ ವೇಳೆ ಜೆಡಿಯುನ ಇಬ್ಬರು ಸಂಸದರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯೂ ಇದೆ.

ಬಿಹಾರದಲ್ಲಿ ನಿತೀಶ್ ಕುಮಾರ್ ಸರಕಾರಕ್ಕೆ ಬಿಜೆಪಿ ಬೆಂಬಲ ನೀಡಿದ ನಂತರ, ಎನ್.ಡಿ.ಎ ಒಕ್ಕೂಟ ಸೇರುವಂತೆ ಜೆಡಿಯುಗೆ ಆಹ್ವಾನ ನೀಡಲಾಗಿತ್ತು. "ನನ್ನ ನಿವಾಸದಲ್ಲಿ ನಿನ್ನೆ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ರನ್ನು ಭೇಟಿಯಾದೆ. ಜೆಡಿಯುಗೆ ಎನ್.ಡಿ.ಎ ಜತೆ ಸೇರುವಂತೆ ಆಹ್ವಾನ ನೀಡಿದ್ದೇನೆ," ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

Nitish Kumar likely to be NDA convenor

ಈ ಕುರಿತು ಹೇಳಿಕೆ ನೀಡಿರುವ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆಸಿ ತ್ಯಾಗಿ, "ಬಿಜೆಪಿ ನೀಡಿದ ಆಯ್ಕೆಯನ್ನು ನಿತೀಶ್ ಕುಮಾರ್ ಸ್ವತಃ ಪರಿಗಣನೆಗೆ ತೆಗೆದುಕೊಳ್ಳಲಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರಕಾರಗಳು ಅಧಿಕಾರದಲ್ಲಿ ಇರುವುದರಿಂದ ರಾಜ್ಯದ ಅಭಿವೃದ್ಧಿಗೆ ಸಹಾಯಕವಾಗಲಿದೆ," ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+