ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿನ ನಿರ್ವಹಣೆ ಸೂಚ್ಯಂಕ: ಕರ್ನಾಟಕಕ್ಕೆ 4ನೇ ಶ್ರೇಯಾಂಕ

|
Google Oneindia Kannada News

ನವದೆಹಲಿ, ಜೂನ್ 14: ಜೀವನ ನಿರ್ವಹಣೆಗೆ ನೀರಿನ ಸದ್ಬಳಕೆಯ ಅತ್ಯಂತ ಮಹತ್ವದ್ದಾಗಿರುವುದನ್ನು ಗಮನದಲ್ಲಿಟ್ಟುಕೊಂಡು ನೀತಿ ಆಯೋಗವು ನೀರಿನ ಸಂಘಟಿತ ನಿರ್ವಹಣೆ ಸೂಚ್ಯಂಕದ (ಸಿಡಬ್ಲ್ಯೂಎಂಐ) ವರದಿಯನ್ನು ಸಿದ್ಧಪಡಿಸಿದೆ.

2016-17ನೇ ಸಾಲಿನ ನೀರು ನಿರ್ವಹಣೆಯ ಸೂಚ್ಯಂಕದ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದ್ದು, ಗುಜರಾತ್ ಮೊದಲ rank ಪಡೆದುಕೊಂಡಿದ್ದರೆ, ಕರ್ನಾಟಕ 4ನೇ ಶ್ರೇಯಾಂಕ ಪಡೆದುಕೊಂಡಿದೆ.

ಬಿಜೆಪಿ ನನ್ನ ಪಕ್ಷ, ಲಾಲೂ ನನ್ನ ಕುಟುಂಬ: ಶತ್ರುಘ್ನ ಸಿನ್ಹಾಬಿಜೆಪಿ ನನ್ನ ಪಕ್ಷ, ಲಾಲೂ ನನ್ನ ಕುಟುಂಬ: ಶತ್ರುಘ್ನ ಸಿನ್ಹಾ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಹಾಗೂ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಬಿಡುಗಡೆ ಮಾಡಿದರು.

ಮಧ್ಯಪ್ರದೇಶ 2, ಆಂಧ್ರಪ್ರದೇಶ 3 ಮತ್ತು ಮಹಾರಾಷ್ಟ್ರ 5ನೇ ಸ್ಥಾನ ಪಡೆದುಕೊಂಡಿವೆ.

NITI Aayog released report on Composite Water Management Index

ವಿಶ್ಲೇಷಣೆಯ ಉದ್ದೇಶದಿಂದ ಮತ್ತು ವಿಭಿನ್ನ ಜಲಸಂಪನ್ಮೂಲ ಸನ್ನಿವೇಶಗಳನ್ನು ಹೊಂದಿರುವುದರಿಂದ ವರದಿಯನ್ನು 'ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳು' ಹಾಗೂ 'ಇತರೆ ರಾಜ್ಯಗಳು' ಎಂದು ಎರಡು ವಿಶೇಷ ಗುಂಪುಗಳಾಗಿ ವಿಂಗಡಿಸಲಾಗಿತ್ತು.

ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳ ವಿಭಾಗದಲ್ಲಿ ತ್ರಿಪುರಾ ನಂಬರ್ 1 ಸ್ಥಾನ ಪಡೆದುಕೊಂಡಿದ್ದರೆ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಅಸ್ಸಾಂ ಕ್ರಮವಾಗಿ ನಂತರದ ಶ್ರೇಯಾಂಕಗಳನ್ನು ಪಡೆದುಕೊಂಡಿವೆ.

2015-16ರ ಬಳಿಕ ಸೂಚ್ಯಂಕದಲ್ಲಿ ಏರಿಕೆಯ ಬದಲಾವಣೆ ಕಂಡ ರಾಜ್ಯಗಳಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ಈಶಾನ್ಯ ರಾಜ್ಯಗಳ ವಿಭಾಗದಲ್ಲಿ ತ್ರಿಪುರಾ ಈ ಸ್ಥಾನ ಪಡೆದುಕೊಂಡಿದೆ.

ಮುಂದಿನ ದಿನಗಳಲ್ಲಿ ಈ ಶ್ರೇಯಾಂಕವನ್ನು ವಾರ್ಷಿಕ ನೀರಿನ ನಿರ್ವಹಣೆ ಆಧಾರದಲ್ಲಿ ಸಿದ್ಧಪಡಿಸಲು ನೀತಿ ಆಯೋಗ ತೀರ್ಮಾನಿಸಿದೆ.

ಜಲಸಂಪನ್ಮೂಲ ಸಚಿವಾಲಯ, ಕುಡಿಯುವ ನೀರು ಸಚಿವಾಲಯ ಹಾಗೂ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ನೀರಿನ ದಾಖಲೆಯ ಸಂಗ್ರಹವನ್ನು ಇದೇ ಮೊದಲ ಬಾರಿಗೆ ಮಾಡಲಾಗಿದೆ.

ಈ ಸೂಚ್ಯಂಕವು ರಾಜ್ಯಗಳಿಗೆ ಉಪಯುಕ್ತ ಮಾಹಿತಿ ಒದಗಿಸಲಿದ್ದು, ಅದಕ್ಕೆ ಸಂಬಂಧಿಸಿದ ಕೇಂದ್ರ ಸಚಿವಾಲಯಗಳು/ಇಲಾಖೆಗಳು ನೀರಿನ ಸಂಪನ್ಮೂಲಗಳ ಸುಧಾರಿತ ನಿರ್ವಹಣೆಗೆ ಸೂಕ್ತವಾದ ತಂತ್ರಗಳನ್ನು ರೂಪಿಸಲು ಮತ್ತು ಜಾರಿ ಮಾಡಲು ನೆರವಾಗಲಿದೆ.

ಇದೇ ಸಂದರ್ಭದಲ್ಲಿ ನೀರಿನ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ವೆಬ್‌ ಪೋರ್ಟಲ್‌ಅನ್ನು ಸಹ ಉದ್ಘಾಟಿಸಲಾಯಿತು.

ಅಂತರ್ಜಲ, ನೀರಿನ ಮೂಲಗಳ ಪುನರುಜ್ಜೀವನ, ನೀರಾವರಿ, ಕೃಷಿ ಚಟವಟಿಕೆಗಳು, ಕುಡಿಯುವ ನೀರು, ನೀತಿ ಮತ್ತು ಆಡಳಿತದ ಅಂಶಗಳನ್ನು ಒಳಗೊಂಡು 28 ವಿಭಿನ್ನ ಸೂಚಕಗಳು ಇರುವ 9 ವಲಯಗಳ ಮೂಲಕ ನೀತಿ ಆಯೋಗವು ಈ ವರದಿ ಸಿದ್ಧಪಡಿಸಿದೆ.

English summary
NITI Aayog has prepared a report on Composite Water Management Index (CWMI) to record the data of the management water by states. Gujarat ranked as number one and Karnataka able to find 4th place in the index.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X