Union Budget 2026: ಫೆಬ್ರವರಿ 1 ಭಾನುವಾರ ಕೇಂದ್ರ ಬಜೆಟ್ ಮಂಡನೆ ಆಗುತ್ತಾ, ದಿನಾಂಕ ಬದಲಾಗುತ್ತಾ?
ನವದೆಹಲಿ: ದೇಶದ ಅತಿದೊಡ್ಡ ದೇಶೀಯ ಹಣಕಾಸು ಘೋಷಣೆಗಳಲ್ಲಿ ಕೇಂದ್ರ ಬಜೆಟ್ ಮಂಡನೆ (Union Budget 2026-2027) ಸಹ ಒಂದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಹಣಕಾಸು ವರ್ಷದ ಬಜೆಟ್ ಅನ್ನು ಮುಂದಿನ ತಿಂಗಳ ಫೆಬ್ರವರಿ 1ರಂದು ಮಂಡಿಸುವ ಸಾಧ್ಯತೆ ಇದೆ. ಇದು ಅವರು ಮಂಡಿಸುತ್ತಿರುವ ಸತತ ಒಂಬತ್ತನೇ ಕೇಂದ್ರ ಬಜೆಟ್ ಆಗಲಿದೆ. ಬಜೆಟ್ ಮಂಡನೆಯ ದಿನದ ಬಗ್ಗೆ ಒಂದಷ್ಟು ಚರ್ಚೆ ಶುರುವಾಗಿದ್ದು, ಅದಕ್ಕೆ ಕಾರಣ ಮುಂದಿದೆ.
2017 ರಿಂದ ಪ್ರತಿ ವರ್ಷ ಕೇಂದ್ರ ಬಜೆಟ್ ಮಂಡನೆ ದಿನವನ್ನು ಫೆಬ್ರವರಿ 1ಕ್ಕೆ ನಿಗದಿಗೊಳಿಸಲಾಗುತ್ತಿತ್ತು. ಕೆಲವೊಮ್ಮೆ ದಿನಾಂಕ ಬದಲಾವಣೆ ಆಗಿದ್ದು ಉಂಟು. ಈ ವರ್ಷವು ಸಹ 2026 ಫೆ.1ರಂದು ಭಾನುವಾರ ಮಂಡಿಸಬಹುದು ಎನ್ನಲಾಗಿದೆ. ಅಂದು ಗುರು ರವಿದಾಸ್ ಜಯಂತಿ ಇರುವ ಕಾರಣ ಅಂದೇ ಮಂಡನೆ ಆಗುತ್ತಾ? ಅಥವಾ ಫೆಬ್ರವರಿ 2 ಸೋಮವಾರಕ್ಕೆ ದಿನಾಂಕ ಬದಲಾಗುತ್ತಾ? ಎಂಬುದರ ಮೇಲೆ ಊಹಾಪೋಹಗಳು ಶುರುವಾಗಿದೆ. ಈ ಬಾರಿ ಬಜೆಟ್ ಮಂಡನೆ ದಿನಾಂಕದ ಮೇಲೂ ಜನರು ಹೆಚ್ಚಿನ ಗಮನ ಹರಿಸಿದ್ದಾರೆ. ಇದರ ಬಗ್ಗೆ ಚರ್ಚೆಗಳು ಶುರುವಾಗಿವೆ.

ಕೇಂದ್ರ ಸರ್ಕಾರಕ್ಕೆ ಆರ್ಥಿಕ ಸಮೀಕ್ಷೆ ವರದಿ ಸಲ್ಲಿಕೆ ಆಗಬೇಕಿದೆ. ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಅನುಮೋದಿಸಲು ಇನ್ನು ಸಾಕಷ್ಟು ಸಮಯವಿದೆ. ಹೀಗಾಗಿ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿಲ್ಲ. ಈ ಬಾರಿಯು ವರ್ಷದ ಎರಡನೇ ತಿಂಗಳ ಮೊದಲ ದಿನ ಆಯವ್ಯಯ ಮಂಡಿಸಬಹುದೆಂದು ಎನ್‌ಡಿಟಿವಿ ಪ್ರಾಫಿಟ್ ವರದಿ ಮಾಡಿದೆ.
ಸಚಿವ ಸಂಪುಟ ಸಮಿತಿ ನಿರ್ಧಾರವೇ ಅಂತಿಮ
ಕೇಂದ್ರ ಬಜೆಟ್ ಕುರಿತು ಹೆಚ್ಚಿನ ಮಾಹಿತಿ ತಿಳಿದಿರುವ ನ್ಯೂಸ್ ಏಜೆನ್ಸಿ ಪಿಟಿಐ ವರದಿಯ ಪ್ರಕಾರ, ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ.1) ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಸಚಿವ ಸಂಪುಟ ಸಮಿತಿಯು ಕೈಗೊಳ್ಳುವ ದಿನಾಂಕವೇ ಅಂತಿಮವಾಗಿದ್ದು, ಆ ದಿನವೇ ಬಜೆಟ್ ಮಂಡನೆ ಆಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಅತ್ಯಧಿಕ ಸಮಯ ಬಜೆಟ್ ಮಂಡಿಸಿದ ಕೀರ್ತಿ
2017ಕ್ಕೂ ಮೊದಲು ಪ್ರತಿ ವರ್ಷ ಕೇಂದ್ರ ಬಜೆಟ್ ಅನ್ನು ಫೆಬ್ರವರಿ ಕೊನೆಯ ದಿನದಂದು ಮಂಡಿಸಲಾಗುತ್ತಿದೆ. ಬಜೆಟ್ ದಿನದಂದು ಹಳೆಯ 'ಬಜೆಟ್ ಬ್ರೀಫ್‌ಕೇಸ್' ಜೊತೆಗೆ ಬರುತ್ತಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019 ರಲ್ಲಿ ಮೊಲದ ಬಾರಿಗೆ ಕೆಂಪು ಬಣ್ಣದ 'ಬಹಿ ಖಾತಾ' ದೊಂದಿಗೆ ಬಂದರು. ನಂತರ ಎದುರಾದ ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಬಹಿ ಖಾತಾ 'ಟ್ಯಾಬ್ಲೆಟ್' ಬಂತು. ಮಹತ್ವದ ಹೆಜ್ಜೆ ಇಟ್ಟ ವಿತ್ತ ಸಚಿವೆ ಡಿಜಿಟಲ್ ಟ್ಯಾಬ್ಲೆಟ್‌ನಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು. ಸತತ 2 ಗಂಟೆ 42 ನಿಮಿಷಗಳ ಕಾಲ ಮಾತನಾಡಿ ದೇಶದ ಇತಿಹಾಸದಲ್ಲಿ ಅತಿ ಉದ್ದದ ಬಜೆಟ್ ಭಾಷಣವನ್ನು ಮಂಡಿಸಿದ ಕೀರ್ತಿ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸುತ್ತದೆ.
ಕೇಂದ್ರ ಬಜೆಟ್ ಹಿನ್ನೆಲೆ...
1950 ರಲ್ಲಿ ಕೇಂದ್ರ ಬಜೆಟ್ ಮಾಹಿತಿ, ದಾಖಲೆಗಳು ಸೋರಿಕೆ ಆಗಿತ್ತು. ಅಂದಿನ ಹಣಕಾಸು ಸಚಿವ ಜಾನ್ ಮಥಾಯ್ ಅವರ ನೇತೃತ್ವದಲ್ಲಿ ಬಜೆಟ್ ಪ್ರತಿ ಮುದ್ರಣದ ಸಮಯದಲ್ಲಿ ಹೆಚ್ಚು ಭದ್ರತೆ ಒದಗಿಸಲಾಗಿತ್ತು. ಆದರೂ ಸಹಿತ ಮಾಹಿತಿ ಸೋರಿಕೆ ಆಗಿದ್ದರಿಂದ ಬಜೆಟ್ ಮುದ್ರಣವನ್ನು ರಾಷ್ಟ್ರಪತಿ ಭವನದಿಂದ ಮಿಂಟೋ ರಸ್ತೆಗೆ ಸ್ಥಳಾಂತರಿಸಲಾಯಿತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications