Nirmala Sitharaman vs Rahul Gandhi: ಟಾಟಾ ಗ್ರೂಪ್ ವಿಚಾರವಾಗಿ ಎಕ್ಸ್‌ನಲ್ಲಿ ಟ್ವೀಟ್ ವಾರ್!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ಟ್ವೀಟ್ ವಾರ್‌ ನಡೆದಿದೆ.

ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಅವರೇ, ಪ್ರತಿಯೊಂದು ವಿಚಾರವನ್ನೂ ರಾಜಕೀಯ ಮಾಡುವುದನ್ನು ನಿಲ್ಲಿಸಿ. ವಾಣಿಜ್ಯ ಮತ್ತು ಕಾನೂನು ವಿಚಾರಗಳನ್ನು ಯಾವುದೇ ಆಧಾರವಿಲ್ಲದೆ ಕ್ರಿಮಿನಲ್ ಪ್ರಕರಣಗಳೆಂದು ಕರೆಯುವುದು ಸರಿಯಲ್ಲ. ಭಾರತೀಯ ಉದ್ಯಮ ಮತ್ತು ಉದ್ಯಮಿಗಳ ಯಶಸ್ಸನ್ನು ನೀವು ಪದೇಪದೇ ಟೀಕಿಸುತ್ತಿದ್ದೀರಿ. ಈಗ ನಮ್ಮ ಉದ್ಯಮಿಗಳನ್ನೂ ನಿಮ್ಮೊಂದಿಗೆ ಸೇರಿಸಿಕೊಂಡು ಅಪನಂಬಿಕೆ ಮತ್ತು ವಿಷಪೂರಿತ ವಾತಾವರಣ ಹರಡಲು ಪ್ರಚೋದಿಸುತ್ತಿದ್ದೀರಾ? ಎಂದು ನಿರ್ಮಲಾ ಸೀತಾರಾಮನ್ ಅವರು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

Nirmala Sitharaman vs Rahul Gandhi War of Words Erupts Over Tata Issue on X

ಮುಂದುವರಿದು ದಶಕಗಳ ಕಾಲ ನಿಮ್ಮ ಪಕ್ಷವು 'ಲೈಸೆನ್ಸ್‌-ಕೋಟಾ ರಾಜ್‌' ಮೂಲಕ ಭಾರತೀಯ ಉದ್ಯಮಿಗಳ ಬೆಳವಣಿಗೆಯನ್ನು ಹತ್ತಿಕ್ಕಿತ್ತು. ಇದರಿಂದ ಕೋಟ್ಯಂತರ ಭಾರತೀಯರು ಬಡತನ ಅನುಭವಿಸುವಂತಾಯಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರವು ಭಾರತೀಯ ಉದ್ಯಮಗಳನ್ನು ಉದ್ಯೋಗ ಸೃಷ್ಟಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ಶಕ್ತಿಗಳೆಂದು ಪರಿಗಣಿಸುತ್ತಿದೆ. ಉದ್ಯಮಗಳಿಗೆ ಅವಕಾಶ ಕಲ್ಪಿಸುವುದು, ಕೈಗಾರಿಕೆಗಳಿಗೆ ಬೆಂಬಲ ನೀಡುವುದು ಮತ್ತು ಹೂಡಿಕೆಯನ್ನು ಉತ್ತೇಜಿಸುವುದು ನಮ್ಮ ನೀತಿಗಳ ಉದ್ದೇಶವಾಗಿದೆ.

ನಮ್ಮ ಉದ್ಯಮಗಳನ್ನು ಬೆಂಬಲಿಸುವುದು, ರೈತರನ್ನು ಬಲಪಡಿಸುವುದು ಮತ್ತು ಯುವಜನರ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ರಾಜಕೀಯ ಪಕ್ಷಗಳು, ನಾಯಕರು, ಸರ್ಕಾರಗಳು ಮತ್ತು ಸಂಸ್ಥೆಗಳ ಸಮಾನ ಜವಾಬ್ದಾರಿಯಾಗಿದೆ. ಆದ್ದರಿಂದ, ನಿಮ್ಮ ರಾಜಕೀಯ ಲಾಭಕ್ಕಾಗಿ ಆಧಾರರಹಿತ ಆರೋಪಗಳನ್ನು ಮಾಡುವ ಬದಲು, ರಚನಾತ್ಮಕವಾಗಿ ಚರ್ಚೆ ನಡೆಸುವುದು ಅಗತ್ಯ.

ಭಾರತದ ಸಂವಿಧಾನವು ಎಲ್ಲ ನಾಗರಿಕರಿಗೂ ನ್ಯಾಯವನ್ನು ಖಾತರಿಪಡಿಸುತ್ತದೆ. ನ್ಯಾಯವನ್ನು ಎತ್ತಿಹಿಡಿಯುವ ಜವಾಬ್ದಾರಿ ನಮ್ಮ ಗೌರವಾನ್ವಿತ ನ್ಯಾಯಾಲಯಗಳ ಮೇಲಿದೆ. ನಿಮ್ಮ ಪಕ್ಷ ಮತ್ತು ನಿಮ್ಮ ಪಕ್ಷದ ಪ್ರಧಾನಮಂತ್ರಿಗಳು ನ್ಯಾಯಾಂಗವನ್ನು ಅಗೌರವದಿಂದ ನಡೆಸಿಕೊಂಡಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಹೀಗಾಗಿ, ರಾಹುಲ್ ಜೀ, ಎಲ್ಲದರಲ್ಲೂ ಇಲ್ಲದ ಸಮಸ್ಯೆಗಳನ್ನು ಹುಡುಕುವುದನ್ನು ನಿಲ್ಲಿಸಿ ಎಂದೂ ತಿರುಗೇಟು ಕೊಟ್ಟಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ರಾಹುಲ್ ಗಾಂಧಿ ಅವರು, ನಿರ್ಮಲಾ ಸೀತಾರಾಮನ್ ಅವರೇ,

1. ಅಮಿತ್ ಶಾ ಅವರ ನಿವಾಸದಲ್ಲಿ ಟಾಟಾ ಟ್ರಸ್ಟ್‌ಗಳು ಮತ್ತು ಟಾಟಾ ಸನ್ಸ್ ಆತಿಥ್ಯ ವಹಿಸಬೇಕಾದ "ಕಾನೂನು ಮತ್ತು ವಾಣಿಜ್ಯ ವಿಷಯ" ಯಾವುದು?

2. ಆಟದಲ್ಲಿ ನಂಬರ್ 1 ಕ್ರೋನಿ ಯಾವಾಗ ಕಾಣಿಸಿಕೊಳ್ಳುತ್ತಾನೆ ಮತ್ತು ಟಾಟಾದ ಯಾವ ಕಂಪನಿಗಳು ಅವನ ಪಾಲಾಗಲಿವೆ?

ಕೊನೆಯದಾಗಿ, ನಿಮ್ಮ 3-4 ಆಪ್ತ ಉದ್ಯಮಿಗಳ ಹೊರತಾಗಿ, ಭಾರತದ ಉಳಿದ ಎಲ್ಲಾ ಉದ್ಯಮಗಳು ಈಗಾಗಲೇ ನಿಮ್ಮನ್ನು ದ್ವೇಷಿಸುತ್ತಿವೆ. ಅದಕ್ಕೆ ಮತ್ತಷ್ಟು ಪ್ರಚೋದನೆ ನೀಡುವ ಅಗತ್ಯವಿಲ್ಲ ಅಂತಲೂ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ಈ ಟ್ವೀಟ್ ವಾರ್‌ಗಿಂತ ಮೊದಲು ರಾಹುಲ್ ಗಾಂಧಿ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ, ಟಾಟಾ ಅವರನ್ನು ಕ್ರಿಮಿನಲ್ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ ಮತ್ತು ಯಾವುದೇ ವ್ಯವಹಾರ ಮುಖ್ಯಸ್ಥರು ಒಂದು ಮಾತನ್ನೂ ಹೇಳುವುದಕ್ಕೆ ಧೈರ್ಯ ಮಾಡುತ್ತಿಲ್ಲ. ನೀವು ಇನ್ನೆಷ್ಟು ದಿನ ಸುಮ್ಮನಿರುತ್ತೀರಿ? ಅವರು ನಿಮ್ಮನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವವರೆಗೆ ಅಂತ ಪ್ರಶ್ನೆ ಮಾಡಿದ್ದರು. ಅಲ್ಲದೆ, ಭಾರತದ ಉದ್ಯಮಗಳು ಮೋದಿ ಮತ್ತು ಶಾ ಅವರ ಆಟದ ವಸ್ತುಗಳಲ್ಲ. ನಿಮಗೆ ಧೈರ್ಯವಿಲ್ಲ. ನಮಗೆ ಧೈರ್ಯವಿದೆ. ಈ ಅಪರಾಧಗಳಿಗೆ ನ್ಯಾಯ ಸಿಗುವಂತೆ ನಾವು ನೋಡಿಕೊಳ್ಳುತ್ತೇವೆ ಎಂದಿದ್ದರು. ಈ ಟ್ವೀಟ್‌ಗೆ ನಿರ್ಮಲಾ ಸೀತಾರಾಮನ್ ಅವರು ತಿರುಗೇಟು ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+