ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪ್ರಪ್ರಥಮ ಮಹಿಳಾ ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್

By Sachhidananda Acharya
|
Google Oneindia Kannada News

ಹೊಸದಿಲ್ಲಿ, ಸೆಪ್ಟಂಬರ್ 3: ದೇಶದ ಚೊಚ್ಚಲ ಸ್ವತಂತ್ರ ಮಹಿಳಾ ರಕ್ಷಣಾ ಸಚಿವರು ಎಂಬ ಕೀರ್ತಿಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ. ಈ ಹಿಂದೆ ಪ್ರಧಾನಿಯಾಗಿದ್ದ ವೇಳೆ ಇಂದಿರಾ ಗಾಂಧಿ ತಮ್ಮ ಬಳಿಯಲ್ಲೇ ರಕ್ಷಣಾ ಖಾತೆ ಇಟ್ಟುಕೊಂಡಿದ್ದರು. ಇದೊಂದು ಸಂದರ್ಭ ಹೊರತುಪಡಿಸಿ ಮತ್ಯಾವತ್ತೂ ಮಹಿಳೆಯರಿಗೆ ರಕ್ಷಣಾ ಖಾತೆ ನೀಡಿರಲಿಲ್ಲ.

ಮೋದಿ ಸಂಪುಟ ಸೇರಿದ ಅನಂತಕುಮಾರ್ ಹೆಗಡೆಮೋದಿ ಸಂಪುಟ ಸೇರಿದ ಅನಂತಕುಮಾರ್ ಹೆಗಡೆ

ಇದೀಗ ಇಂದು ನಡೆದ ಸಂಪುಟ ಪುನಾರಚನೆ ವೇಳೆ ನಾಲ್ವರು ಸಚಿವರೊಂದಿಗೆ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಲಾಗಿದೆ. ಅಲ್ಲದೆ ಇದೀಗ ಅರುಣ್ ಜೇಟ್ಲಿ ಬಳಿ ಇದ್ದ ರಕ್ಷಣಾ ಖಾತೆಯನ್ನೂ ಪಡೆದುಕೊಂಡಿದ್ದಾರೆ.

Nirmala Sitharaman is the first full time woman Defense Minister

ಈ ಹಿಂದೆ ನಿರ್ಮಲಾ ಸೀತಾರಾಮನ್‌ ವಾಣಿಜ್ಯೋದ್ಯಮ ಖಾತೆಯ ಸಹಾಯಕ ಸಚಿವರಾಗಿದ್ದರು. ಈ ಖಾತೆಯಲ್ಲಿ ಉತ್ತಮ ನಿರ್ವಹಣೆ ತೋರಿ ಇದೀಗ ರಕ್ಷಣಾ ಖಾತೆಗೆ ಬಡ್ತಿ ಪಡೆದಿದ್ದಾರೆ.

ಮೋದಿ ಸಂಪುಟ ವಿಸ್ತರಣೆ : ನಾಲ್ವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮೋದಿ ಸಂಪುಟ ವಿಸ್ತರಣೆ : ನಾಲ್ವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ

ಮೂಲತಃ ತಮಿಳುನಾಡಿನ ಮಧುರೈನವರಾದ ನಿರ್ಮಲಾ ಸೀತರಾಮನ್ ವಿದೇಶದಲ್ಲಿ ವಾಸವಾಗಿದ್ದರು. ಬಿಬಿಸಿ ಮೊದಲಾದ ಹೆಸರಾಂತ ಸಂಸ್ಥೆಗಳಿಗೆ ಕೆಲಸ ಮಾಡಿದ್ದರು.

ಮೋದಿ ಸಂಪುಟ ವಿಸ್ತರಣೆ : ಯಾರಿಗೆ ಯಾವ ಖಾತೆ?ಮೋದಿ ಸಂಪುಟ ವಿಸ್ತರಣೆ : ಯಾರಿಗೆ ಯಾವ ಖಾತೆ?

ನಂತರ ಭಾರತಕ್ಕೆ ಬಂದು ಪತಿ ಮತ್ತು ಪತ್ನಿ ಇಬ್ಬರೂ ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ಬಿಜೆಪಿ ಪ್ರತಿಪಕ್ಷವಾಗಿದ್ದಾಗ ಅವರು ಪಕ್ಷದ ವಕ್ತಾರರಾಗಿಯೂ ಕೆಲಸ ನಿರ್ವಹಿಸಿದ್ದರು.

English summary
Nirmala Sitharaman, who just took oath as the new Cabinet member, has been given the Defense Ministry portfolio. She has become the first full-time woman defence minister of India and only the second woman to hold the crucial ministry after Indira Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X