ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ಪತ್ತೆ: ಎರಡನೇ ಸೋಂಕಿತನೂ ವಿದೇಶ ಪ್ರಯಾಣ ಮಾಡಿಲ್ಲ!

|
Google Oneindia Kannada News

ನವದೆಹಲಿ, ಆಗಸ್ಟ್ 1: ನವದೆಹಲಿಯಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುತ್ತಿರುವ ನೈಜೀರಿಯನ್ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತನು ಯಾವುದೇ ವಿದೇಶಿ ಅಥವಾ ಸ್ಥಳೀಯವಾಗಿ ಪ್ರಯಾಣ ಮಾಡಿರುವ ಇತಿಹಾಸ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ ಆರಕ್ಕೆ ಏರಿದೆ, ಅವರಲ್ಲಿ ನಾಲ್ವರು ಕೇರಳದಲ್ಲಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ದೇಶದಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆ: ಲಸಿಕೆ ಅಭಿವೃದ್ಧಿ ಕುರಿತು ಚಿಂತನೆದೇಶದಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆ: ಲಸಿಕೆ ಅಭಿವೃದ್ಧಿ ಕುರಿತು ಚಿಂತನೆ

ನೈಜೀರಿಯನ್ ಪ್ರಜೆಯನ್ನು ಸೋಂಕಿನ ಚಿಕಿತ್ಸೆಗಾಗಿ ನೋಡಲ್ ಆಸ್ಪತ್ರೆಯಾದ ದೆಹಲಿ ಸರ್ಕಾರ ನಡೆಸುವ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಐದು ದಿನಗಳಿಂದ ಅವರಿಗೆ ಮೈಮೇಲೆ ಗುಳ್ಳೆಗಳು ಎದ್ದಿವೆ ಮತ್ತು ಜ್ವರದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಫ್ರಿಕನ್ ಮೂಲದ ಮಂಕಿಪಾಕ್ಸ್‌ನ ಇಬ್ಬರು ಶಂಕಿತ ರೋಗಿಗಳನ್ನೂ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಇದಕ್ಕೂ ಮೊದಲು 34 ವರ್ಷದ ಪಶ್ಚಿಮ ದೆಹಲಿ ನಿವಾಸಿಯೊಬ್ಬರಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿತ್ತು. ಸೋಂಕು ಪತ್ತೆಯಾದ ವ್ಯಕ್ತಿ ರೋಗ ಪೀಡಿತ ದೇಶಗಳಿಗೆ ಪ್ರಯಾಣಿಸಿದ ಇತಿಹಾಸವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ನಂತರ ಸೋಂಕಿತ ವ್ಯಕ್ತಿಯನ್ನು ಲೋಕನಾಯಕ ಜೈಪ್ರಕಾಶ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ದೆಹಲಿಯ ಸೋಂಕಿತ ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶಕ್ಕೆ ಸ್ನೇಹಿತರೊಂದಿಗೆ ರಜೆಯ ಮೇಲೆ ಹೋಗಿದ್ದ ಎಂದು ತಿಳಿದುಬಂದಿತ್ತು.

 ಕೇರಳದಲ್ಲಿ ಮೊದಲ ಸಾವು

ಕೇರಳದಲ್ಲಿ ಮೊದಲ ಸಾವು

ಕೇರಳದ ತ್ರಿಶೂರ್‌ನಲ್ಲಿ ಶನಿವಾರ ಮೃತಪಟ್ಟ ಯುವಕ ಮಂಕಿಪಾಕ್ಸ್‌ಗೆ ಬಲಿಯಾಗಿದ್ದಾನೆ ಎಂದು ಕೇರಳ ಆರೋಗ್ಯ ಇಲಾಖೆ ಸೋಮವಾರ ಮುಂಜಾನೆ ದೃಢಪಡಿಸಿದೆ. ಇದು ಭಾರತದ ಮೊದಲ ಮಂಕಿಪಾಕ್ಸ್ ಸಾವು.

ಕೇರಳದಲ್ಲಿ ಈವರೆಗೆ ಒಟ್ಟು 4 ಮಂಕಿಪಾಕ್ಸ್ ಪ್ರಕರಣಗಳ ವರದಿಯಾಗಿವೆ. ಇಡೀ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ಹರಡದಂತೆ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಹುಷಾರ್: ನವದೆಹಲಿಯಲ್ಲಿ ಸಿಕ್ತು ಮಂಕಿಪಾಕ್ಸ್ ಎರಡನೇ ಕೇಸ್ ಸುಳಿವು!ಹುಷಾರ್: ನವದೆಹಲಿಯಲ್ಲಿ ಸಿಕ್ತು ಮಂಕಿಪಾಕ್ಸ್ ಎರಡನೇ ಕೇಸ್ ಸುಳಿವು!

 ಕಟ್ಟೆಚ್ಚರ ವಹಿಸಿರುವ ಎಲ್ಲಾ ರಾಜ್ಯಗಳು

ಕಟ್ಟೆಚ್ಚರ ವಹಿಸಿರುವ ಎಲ್ಲಾ ರಾಜ್ಯಗಳು

ದೇಶದ ಎಲ್ಲಾ ರಾಜ್ಯಗಳಲ್ಲಿ ಮಂಕಿಪಾಕ್ಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಸೋಂಕಿನ ಅನುಮಾನ ಕಂಡು ಬಂದರೂ ಮಾಹಿತಿ ನೀಡುವಂತೆ ಸರ್ಕಾರ ತನ್ನ ಜನತೆಗೆ ಮನವಿ ಮಾಡಿವೆ.

ಮಂಕಿಪಾಕ್ಸ್ ನಿರ್ವಹಣೆ ಕುರಿತಂತೆ ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೇ ಮಾರ್ಗಸೂಚಿಯನ್ನು ಅನುಸರಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಅದು ಸೂಚನೆ ನೀಡಿದೆ.

 ಲಸಿಕೆ ತಯಾರಿಸಲು ಮುಂದಾದ ಕೇಂದ್ರ

ಲಸಿಕೆ ತಯಾರಿಸಲು ಮುಂದಾದ ಕೇಂದ್ರ

ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗುತ್ತಿರುವಂತೆ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ಅಭಿವೃದ್ಧಿಗೆ ಮುಂದಾಗಿದೆ. ಮಂಕಿಪಾಕ್ಸ್ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಈಗಾಗಲೇ ಟೆಂಡರ್ ಆಹ್ವಾನಿಸಿದೆ.

ಮಂಕಿಪಾಕ್ಸ್ ವೈರಸ್‌ ವಿರುದ್ಧ ಲಸಿಕೆ ತಯಾರಿಸಲು, ವೈರಸ್ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು, ಅನುಭವಿ ಔ‍ಷಧ, ಫಾರ್ಮಾ ಕಂಪನಿಗಳು ಟೆಂಡರ್ ಸಲ್ಲಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಮಂಕಿಪಾಕ್ಸ್ ವೈರಸ್ ರೋಗನಿರ್ಣಯಕ್ಕಾಗಿ ಡಯಾಗ್ನೋಸ್ಟಿಕ್ ಕಿಟ್ ಅಭಿವೃದ್ಧಿಪಡಿಸಬೇಕು ಐಸಿಎಂಆರ್ ತಿಳಿಸಿತ್ತು.

 ಜಾಗತಿಕ ತುರ್ತುಸ್ಥಿತಿ ಘೋಷಣೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ

ಜಾಗತಿಕ ತುರ್ತುಸ್ಥಿತಿ ಘೋಷಣೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ಮಂಕಿಪಾಕ್ಸ್ ಅನ್ನು ಅಂತರರಾಷ್ಟ್ರೀಯ ಕಾಳಜಿಯ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು. ಜಾಗತಿಕವಾಗಿ, 75 ದೇಶಗಳಿಂದ 16,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.

ಈಗ ಕೇರಳದಲ್ಲಿ ಯುವಕನೊಬ್ಬ ಮಂಕಿಪಾಕ್ಸ್ ಕಾಯಿಲೆಗೆ ಬಲಿಯಾಗಿರುವುದು ಆತಂಕವನ್ನು ಉಂಟುಮಾಡಿದೆ. ಮಂಕಿಪಾಕ್ಸ್‌ ಕಾಯಿಲೆಯಿಂದ ಸಾವನ್ನಪ್ಪುವರ ಸಂಖ್ಯೆ ತೀರಾ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದರೂ, ಪತ್ತೆಯಾದ 6 ಪ್ರಕರಣದಲ್ಲೇ ಓರ್ವ ಸೋಂಕಿತ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

Recommended Video

ಪುನೀತ್ ರಾಜಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚಕ್ರವರ್ತಿ ಸೂಲಿಬೆಲೆ ಕ್ಷಮೆಯಾಚನೆ | OneIndia Kannada

English summary
A 35-year-old Nigerian man living in the Delhi testing positive for monkeypox on Monday. He has no recent history of foreign or local travel, sources told. Delhi has reported its second case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X