ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮಾವೋವಾದಿ ನಾಯಕನ ತಲೆಗೆ ಎನ್ ಐಎ ಕಟ್ಟಿರುವ ಬೆಲೆ ಎಷ್ಟು ಗೊತ್ತಾ?!

|
Google Oneindia Kannada News

'ಮೋಸ್ಟ್ ವಾಂಟೆಡ್' ಎಂಬ ಮಾತು ಕೇಳಿಸಿಕೊಳ್ಳುತ್ತಿದ್ದಂತೆ ಕಿವಿ ನೆಟ್ಟಗಾಗುತ್ತದೆ. ಎನ್ ಐಎ (ರಾಷ್ಟ್ರೀಯ ತನಿಖಾ ದಳ) ಅಂಥದ್ದೊಂದು ಮೋಸ್ಟ್ ವಾಂಟೆಡ್ ಪಟ್ಟಿ ಸಿದ್ಧಪಡಿಸಿದ್ದು, ಅದರಲ್ಲಿ 26/11ರ ದಾಳಿಯ ಮಾಸ್ಟರ್ ಮೈಂಡ್ ಝಕೀರ್ ಉರ್ ರೆಹಮಾನ್, ಲಷ್ಕರ್ ಇ ತೈಬಾದ ಹಫೀಜ್ ಸಯೀದ್, ಹಿಜಬ್ ಉಲ್ ಮುಜಾಹಿದೀನ್ ನ ಸೈಯದ್ ಸಲಾಹುದ್ದೀನ್ ಸೇರಿದಂತೆ ಹಲವು ಹೈ ಪ್ರೊಫೈಲ್ ಹೆಸರುಗಳಿವೆ.

ಇವರೆಲ್ಲ ಪಾಕಿಸ್ತಾನ ಮೂಲದ ಉಗ್ರಗಾಮಿಗಳು. ಇವರ ತಲೆಗೆ ಎನ್ ಐಎ ಮೀಸಲಿಟ್ಟಿರುವ ಬಹುಮಾನಕ್ಕಿಂತ ಹೆಚ್ಚು ಮೊತ್ತವನ್ನು ಯಾರ ಬೇಟೆಗೆ ಇಟ್ಟಿದೆ ಗೊತ್ತೆ? ಅದು ತೆಲಂಗಾಣದ ಮಾವೋವಾದಿ ನಾಯಕನಿಗೆ. ತಲೆ ತಪ್ಪಿಸಿಕೊಂಡಿರುವ ಮೋಸ್ಟ್ ವಾಟೆಂಡ್ ಗಳ ಪಟ್ಟಿಯನ್ನು ಶನಿವಾರ ಎನ್ ಐಎ ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದೆ.

ಉಗ್ರ ಮುನೀರ್ ನ ಖಾಂದಾನ್ ರಾಮನಗರದಲ್ಲೇ ಬಿಡಾರ ಹೂಡಿತ್ತುಉಗ್ರ ಮುನೀರ್ ನ ಖಾಂದಾನ್ ರಾಮನಗರದಲ್ಲೇ ಬಿಡಾರ ಹೂಡಿತ್ತು

ಯಾರು ಇವರ ಬಗ್ಗೆ ಮಾಹಿತಿ ನೀಡುತ್ತಾರೋ ಅವರ ಬಗ್ಗೆ ವಿವರವನ್ನು ಹೊರಗೆಲ್ಲೂ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಯಾರಿಗೆ ಈ ಅಪರಾಧಿಗಳ ಬಗ್ಗೆ ಮಾಹಿತಿ ಇದೆಯೋ ಅಂಥವರು [email protected] ಮೇಲ್ ಮಾಡಬಹುದು ಅಥವಾ 011-24368800ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

15 ಮಹಿಳೆಯರು ಇದ್ದಾರೆ

15 ಮಹಿಳೆಯರು ಇದ್ದಾರೆ

258 ಮಂದಿ ಅಪರಾಧಿಗಳ ಹೆಸರು ಪಟ್ಟಿಯಲ್ಲಿದ್ದು, ಅದರಲ್ಲಿ 15 ಮಹಿಳೆಯರು ಇದ್ದಾರೆ. ಈ ಪೈಕಿ ಬಹುತೇಕರು ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿಕೊಂಡಿದವರು, ಉಗ್ರಗಾಮಿಗಳಿಗೆ ತರಬೇತಿ ಅಥವಾ ಸ್ಫೋಟಕ ಇರಿಸಿದ ಆರೋಪದಲ್ಲಿ ಇಂಟರ್ ಪೋಲ್ ನೋಟಿಸ್ ಹೊರಡಿಸಲಾಗಿದೆ. ಇನ್ನೂ ಕೆಲವು ಮಾವೋವಾದಿಗಳ ವಿರುದ್ಧ ಭಾರತ ಸರಕಾರದ ಬಂಡೆದ್ದ ಆರೋಪ ಇದೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಮತ್ತು ದೊಡ್ಡ ಮೊತ್ತದ ಹಣ ವಂಚನೆ ಪ್ರಕರಣದಲ್ಲಿ ಒಟ್ಟಾರೆ 98 ಮಂದಿ ವಿರುದ್ಧ ರೆಡ್ ಕಾರ್ವರ್ ನೋಟಿಸ್ ಹೊರಡಿಸಲಾಗಿದೆ.

ಐಇಡಿಯಲ್ಲಿ ಹಾಗೂ ಸೇನಾ ತಂತ್ರಗಾರಿಕೆಯಲ್ಲಿ ಆತ ಮಹಾನ್ ನಿಪುಣ

ಐಇಡಿಯಲ್ಲಿ ಹಾಗೂ ಸೇನಾ ತಂತ್ರಗಾರಿಕೆಯಲ್ಲಿ ಆತ ಮಹಾನ್ ನಿಪುಣ

ಪಟ್ಟಿಯಲ್ಲಿರುವ ಐವತ್ತೇಳು ಮಂದಿ ತಲೆಗೆ ಭಾರೀ ಮೊತ್ತದ ಬಹುಮಾನ ಇರಿಸಲಾಗಿದೆ. ಮುಪಲ್ಲ ಲಕ್ಷ್ಮಣ್ ರಾವ್ ಅಲಿಯಾಸ್ ಗಣಪತಿ ತಲೆಗೆ ಹದಿನೈದು ಲಕ್ಷ ರುಪಾಯಿ ಬಹುಮಾನ ಇದೆ. ನಿಷೇಧಿತ ಮಾವೋ ಗುಂಪಿಗೆ ಸೇರಿದ ಗಣಪತಿ ಕಳೆದ ವರ್ಷ ಬಿಹಾರದ ಗಯಾದಲ್ಲಿ ನಡೆದ ಸ್ಫೋಟದ ಶಂಕಿತ ಆರೋಪಿ. ಆತನ ಜಾಗ ಗುರುತಿಸಲು ಸಾಧ್ಯವಾಗಿಲ್ಲ. ಆತನ ನಂತರದ ಸ್ಥಾನದಲ್ಲಿ ಉತ್ತರಾಧಿಕಾರಿಯಂತೆ ಇರುವುದು ನಂಬಲ ಕೇಶವರಾವ್ ಅಲಿಯಾಸ್ ಬಸವರಾಜ್. ಆತನ ತಲೆಗೆ ಹತ್ತು ಲಕ್ಷ ರುಪಾಯಿ ಬಹುಮಾನ ಇದೆ. ಐಇಡಿಯಲ್ಲಿ ಹಾಗೂ ಸೇನಾ ತಂತ್ರಗಾರಿಕೆಯಲ್ಲಿ ಆತ ಮಹಾನ್ ನಿಪುಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ನೆಲೆಯೂರಲು ಮಸೀದಿ, ಮದುವೆಗೆ ಲಷ್ಕರ್ ಇ ತೈಬಾ ನೆರವುಭಾರತದಲ್ಲಿ ನೆಲೆಯೂರಲು ಮಸೀದಿ, ಮದುವೆಗೆ ಲಷ್ಕರ್ ಇ ತೈಬಾ ನೆರವು

ಹದಿನೈದು ಮಂದಿ ಪಾಕಿಸ್ತಾನಿಗಳ ಹೆಸರು

ಹದಿನೈದು ಮಂದಿ ಪಾಕಿಸ್ತಾನಿಗಳ ಹೆಸರು

ಈಗ ರಾಷ್ಟ್ರೀಯ ತನಿಖಾದ ದಳದಿಂದ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಹದಿನೈದು ಮಂದಿ ಪಾಕಿಸ್ತಾನಿಗಳ ಹೆಸರಿದೆ. ಆ ಪೈಕಿ ಹಲವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಅದರಲ್ಲಿ ಝಕಿ-ಉರ್-ರೆಹಮಾನ್-ಲಖ್ವಿ, ಅಬ್ದುರ್ ರೆಹಮಾನ್ ಹಶೀಮ್ ಸೈಯದ್, ಹಫೀಜ್ ಸಯೀದ್ ಮತ್ತು ಸಾಜಿದ್ ಮಜಿದ್ ಹೆಸರು ಇದೆ. ಇನ್ನು ಡೇವಿಡ್ ಹೆಡ್ಲಿ ಹೆಸರೂ ಇದೆ. ಪಾಕಿಸ್ತಾನಿಗಳ ಪೈಕಿ ಹಿಜ್ಬುಲ್ ನ ಉಗ್ರಗಾಮಿ ಜುನೈದ್ ಅಕ್ರಮ್ ಮಲಿಕ್ ತಲೆಗೆ ಹತ್ತು ಲಕ್ಷ ರುಪಾಯಿ ಬಹುಮಾನವನ್ನು ಕೂಡ ಘೋಷಿಸಲಾಗಿದೆ.

ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥನ ಮಗನನ್ನು ಬಂಧಿಸಿದ ಎನ್ ಐಎಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥನ ಮಗನನ್ನು ಬಂಧಿಸಿದ ಎನ್ ಐಎ

ಒಸಾಮ ಬಿನ್ ಲಾಡೆನ್ ಹತ್ಯೆಯಾದ ನಂತರ ಪಟ್ಟಿ ತಯಾರಿ

ಒಸಾಮ ಬಿನ್ ಲಾಡೆನ್ ಹತ್ಯೆಯಾದ ನಂತರ ಪಟ್ಟಿ ತಯಾರಿ

ಏಳು ವರ್ಷಗಳ ಹಿಂದೆ ಒಸಾಮ ಬಿನ್ ಲಾಡೆನ್ ಹತ್ಯೆಯಾದ ನಂತರ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಐವತ್ತು ಮಂದಿಯ ಪಟ್ಟಿಯನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು. ಸಿಬಿಐ, ಎನ್ ಐಎ ಹಾಗೂ ಗುಪ್ತಚರ ಇಲಾಖೆಯೂ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಒಟ್ಟಿಗೆ ಸೇರಿಕೊಂಡು ಪಟ್ಟಿ ಬಿಡುಗಡೆ ಮಾಡಿದ್ದವು.

English summary
Lashkar-e-Taiba chief Hafiz Saeed, Hizb-ul-Mujahideen chief Syed Salahuddin, and 26/11 attacks mastermind Zaki-ur-Rehman Lakhvi are some of the high-profile names that figure in the NIA’s ‘most wanted’ list. While these Pakistan-based terrorists don’t carry a bounty on their head, the NIA has put the maximum reward on a Maoist leader from Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X