"ಮುಂದಿನ ಬಾರಿ ವಿದೇಶಕ್ಕೆ ಹೋದಾಗ ನೀರವ್ ಮೋದಿಯನ್ನು ಕರೆತನ್ನಿ!"
ಶಿಲ್ಲಾಂಗ್, ಫೆಬ್ರವರಿ 21: "ಮುಂದಿನ ಬಾರಿ ವಿದೇಶಕ್ಕೆ ಹೋದಾಗ ಪಿಎನ್ ಬಿ ಹಗರಣದ ರೂವಾರಿ ನೀರವ್ ಮೋದಿಯವರನ್ನು ಕರೆತನ್ನಿ" ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಮೇಘಾಲಯದ ಮೆದಿಪಥಾರ್ ಎಂಬಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.
ನಾಲ್ಕು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಆಣೆ, ಪ್ರಮಾಣಗಳು ಜನರಿಗಿನ್ನೂ ನೆನಪಿನಲ್ಲಿವೆ. ಆದರೆ ನಾಲ್ಕು ವರ್ಷದ ಹಿಂದೆ ಅವರನ್ನು ನಂಬಿದ್ದ ಜನರ್ಯಾರೂ ಈಗ ಅವರನ್ನು ನಂಬುತ್ತಿಲ್ಲ ಎಂದು ಅವರು ಹೇಳಿದರು.

ಮೇಘಾಲಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸೇರಿ ಬಿಜೆಪಿಯು ಕಾಂಗ್ರೆಸ್ ನ ನಾಯಕರೊಬ್ಬರನನ್ನು ದುಡ್ಡು ನೀಡಿ ಖರೀದಿಸಲು ಮುಂದಾಗಿರುವ ವಿಷಯ ಬೆಳಕಿಗೆ ಬಂದಿದೆ. ಹಣದಿಂದಾಗಿ ಬಿಜೆಪಿ ದುರಹಂಕಾರಿಯಾಗಿದೆ, ಹಣದಿಂದ ದೇವರನ್ನೂ ಕೊಳ್ಳಬಹುದು ಎಂದುಕೊಂಡಿದೆ. ಅವರು ಹಣದಿಂದ ಏನನ್ನಾದರೂ ಖರೀದಿಸಬಹುದು, ಆದರೆ ಈ ಬುಡಕಟ್ಟು ಜನರ ಉತ್ಸಾಹವನ್ನು ಖರೀದಿಸುವುದಕ್ಕಾಗುವುದಿಲ್ಲ ಎಂದು ಬುಡಕಟ್ಟು ಜನರ ಚಪ್ಪಾಳೆಗಿಟ್ಟಿಸಿಕೊಂಡರು.











Click it and Unblock the Notifications