ಚುನಾವಣೆ: ಒಳಜಗಳ ಮರೆತ ಎಐಎಡಿಎಂಕೆಯಿಂದ ಬಿಜೆಪಿಗೆ ಬೆಂಬಲ
ಮೂರನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ತಮಿಳುನಾಡಿನಿಂದ ಇನ್ನಷ್ಟು ಸಂತಸದ ಸುದ್ದಿ ಸಿಕ್ಕಿದೆ. ಜುಲೈಯಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯನ್ನು ಎಐಎಡಿಎಂಕೆ ಬೆಂಬಲಿಸಲಿದೆ.
ಚೆನ್ನೈ, ಮೇ 10: ಮೂರನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ತಮಿಳುನಾಡಿನಿಂದ ಇನ್ನಷ್ಟು ಸಂತಸದ ಸುದ್ದಿ ಸಿಕ್ಕಿದೆ. ಜುಲೈಯಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ಎಐಎಡಿಎಂಕೆಯ ಎರಡು ಬಣಗಳು ಸಮ್ಮತಿಸಿವೆ.
ಎಐಡಿಎಂಕೆಗೆ 134ಶಾಸಕರು ಇದ್ದಾರೆ. ಇದರಲ್ಲಿಎಡಪ್ಪಳಿ ಪಳನಿಸ್ವಾಮಿ ವಿಭಾಗಕ್ಕೆ 122 ಶಾಸಕರುಇದ್ದಾರೆ. ಮಾಜಿಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ವಿಭಾಗದಲ್ಲಿ 12 ಶಾಸಕರು ಇದ್ದಾರೆ. ಎಐಡಿಎಂಕೆ ಸಂಸದರಲ್ಲಿ ಹೆಚ್ಚಿನವರು ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಬೆಂಬಲಿಸಲಿದ್ದಾರೆ .

ಇದೇ ವೇಳೆ ಡಿಎಂಕೆ ಮತ್ತು ಮಿತ್ರರು 88 ಶಾಸಕರು ಇದ್ದಾರೆ. ನಾಲ್ವರು ಸಂಸದರು ಇದ್ದಾರೆ. ಈಗ ಎಐಎಡಿಎಂಕೆಯ ಎರಡು ವಿಭಾಗಗಳು ಪರಸ್ಪರ ವಿರುದ್ಧವಾಗಿದ್ದರೂ ತಮ್ಮನ್ನೇ ಬೆಂಬಲಿಸುತ್ತದೆ ಎಂದು ಬಿಜೆಪಿ ದೃಢವಿಶ್ವಾಸವನ್ನು ಹೊಂದಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಎಐಎಡಿಎಂಕೆಯ ಬೆಂಬಲ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜ ಹೇಳಿದ್ದಾರೆ. ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಯಾರನ್ನು ಆಯ್ಕೆ ಮಾಡುತ್ತದೆ ಎನ್ನುವುದನ್ನು ನೋಡಿ ನಾವು ಬೆಂಬಲ ನೀಡುವ ಕುರಿತು ಚಿಂತಿಸುತ್ತೇವೆ ಎಂದು ಪನ್ನೀರ್ ಸೆಲ್ವಂ ವಿಭಾಗ ನಾಯಕ ಕೆ. ಪಾಂಡ್ಯರಾಜನ್ ಹೇಳಿದ್ದಾರೆ. ಎಐಎಡಿಎಂಕೆಯ ಎರಡು ವಿಭಾಗದಲ್ಲಿ ಪಾರ್ಲಿಮೆಂಟ್‌ನಲ್ಲಿ 49 ಸಂಸದರಿದ್ದಾರೆ












Click it and Unblock the Notifications