ತ್ರಿಪುರ: ಪತ್ರಕರ್ತನ ಸಾವಿಗೆ ಕಪ್ಪು ಸಂಪಾದಕೀಯದ ಪ್ರತಿಭಟನೆ

Posted By:
Subscribe to Oneindia Kannada

ಅಗರ್ತಲ, ನವೆಂಬರ್ 23: ತ್ರಿಪುರದ ಅಗರ್ತಲದ ಆರ್.ಕೆ.ನಗರದಲ್ಲಿ ನ.21 ರಂದು ಹತ್ಯೆಗೊಳಗಾದ ಪತ್ರಕರ್ತ ಸುದೀಪ್ ದತ್ತ ಭೌಮಿಕ್ ಅವರ ಹತ್ಯೆಯನ್ನು ಖಂಡಿಸಿ ತ್ರಿಪುರಾದ ಬಹುತೇಕ ಎಲ್ಲ ಪತ್ರಿಕೆಗಳೂ 'ಸಂಪಾದಕೀಯ'ದ ಜಾಗವನ್ನು ಖಾಲಿ ಬಿಟ್ಟು, ಆ ಜಾಗಕ್ಕೆ ಕಪ್ಪು ಬಣ್ಣ ಹಾಕಿ ಪ್ರತಿಭಟಿಸಿವೆ.

ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ತ್ರಿಪುರ ಸ್ಟೇಟ್ ರೈಫಲ್ಸ್

ಈ ಹತ್ಯೆ ಪತ್ರಿಕಾ ಸ್ವಾತಂತ್ರ್ಯದ ದುರಂತ ಅಂತ್ಯ ಎಂದು ಇಲ್ಲಿನ ಪತ್ರಕರ್ತರು ವಿಷಾದ ವ್ಯಕ್ತಪಡಿಸಿದ್ದಾರೆ. ತನಿಖಾ ಪತ್ರಕರ್ತರಾಗಿದ್ದ ಸುದೀಪ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ವಾಗ್ವಾದ ನಡೆಸಿದ ನಂತರ ಅವರನ್ನು ತ್ರಿಪುರಾ ಸ್ಟೇಟ್ ರೈಫಲ್ಸ್ ನ ಎರಡನೇ ಬೆಟಾಲಿಯನ್ನಿನ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

Newspapers in Tripura protest against killing of journalist

ಸ್ಥಳೀಯ ಬೆಂಗಾಲಿ ಪತ್ರಿಕೆ ಸ್ಯಂದನ್ ಪತ್ರಿಕಾದಲ್ಲಿ ಸುದೀಪ್ ಅವರು ತನಿಖಾ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Majority of newspapers in Tripura leave space for editorials blank to protest against killing of journalist Sudip Datta Bhowmik.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ