Survey Report: ಏಕರೂಪ ನಾಗರಿಕ ಸಂಹಿತೆಗೆ 67% ಮುಸ್ಲಿಂ ಮಹಿಳೆಯರ ಬೆಂಬಲ, News18 ಮೆಗಾ ಸರ್ವೇಯಲ್ಲಿ ಬಹಿರಂಗ!
ಹೊಸದಿಲ್ಲಿ, ಜುಲೈ 10: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ತರಲು ಯೋಜನೆ ರೂಪಿಸುತ್ತಿರುವ ಏಕರೂಪ ನಾಗರಿಕ ಸಂಹಿತೆಗೆ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ದೇಶಾದ್ಯಂತ 67% ಮುಸ್ಲಿಂ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ.ಈ ಕುರಿತು ನ್ಯೂಸ್ 18 ನಡೆಸಿರುವ ಮೆಗಾ ಸಮೀಕ್ಷೆಯಿಂದ ಮಾಹಿತಿ ಹೊರಬಿದ್ದಿದೆ.
ಹೌದು, ಯೂನಿಫಾರ್ಮ್ ಸಿವಿಲ್ ಕೋಡ್ ಆಧರಿಸಿ ನ್ಯೂಸ್ 18 ಮೆಗಾ ಯುಯುಸಿ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.67 ಮುಸ್ಲಿಂ ಮಹಿಳೆಯರು, ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ನ್ಯೂಸ್ 18 ನೆಟ್‌ವರ್ಕ್ ನಡೆಸಿದ ಸಮೀಕ್ಷೆಯಲ್ಲಿ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 8,035 ಮುಸ್ಲಿಂ ಮಹಿಳೆಯರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. 8,035 ಮಹಿಳೆಯರಲ್ಲಿ 5,403 ಮಂದಿ ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದ ಕುರಿತು ಸಾಮಾನ್ಯ ಕಾನೂನು ಬೇಕು ಎಂದು ಹೇಳಿದ್ದಾರೆ.
UCCಯಲ್ಲಿ ಸಂಭವನೀಯ ಸೇರ್ಪಡೆಯ ಕುರಿತು ದೇಶದ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 8,035 ಮುಸ್ಲಿಂ ಮಹಿಳೆಯರನ್ನು ಸಂದರ್ಶಿಸಿದರು. 18-65 ವರ್ಷ ವಯಸ್ಸಿನ ಮುಸ್ಲಿಂ ಮಹಿಳೆಯರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದಂತಹ ವೈಯಕ್ತಿಕ ವಿಷಯಗಳಿಗಾಗಿ ಎಲ್ಲಾ ಭಾರತೀಯರಿಗೆ ಸಾಮಾನ್ಯ ಕಾನೂನನ್ನು ಬೆಂಬಲಿಸುತ್ತೀರಾ ಎಂದು ಸಮೀಕ್ಷೆಯಲ್ಲಿ ಕೇಳಿದಾಗ, 67% ಮಹಿಳೆಯರು - 5,403 - ಹೌದು ಮತ್ತು 2,039 (25%) ಜನರು ಇಲ್ಲ ಎಂದು ಹೇಳಿದರು. ಸ್ನಾತಕೋತ್ತರ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಮಹಿಳೆಯರಲ್ಲಿ, 68 ಪ್ರತಿಶತ (2,076) ಸಾಮಾನ್ಯ ಕಾನೂನನ್ನು ಬೆಂಬಲಿಸಿದರೆ, 27 ಪ್ರತಿಶತ (820) ಜನರು ಇಲ್ಲ ಎಂದು ಹೇಳಿದರು. ಮತ್ತು 7.4 ಪ್ರತಿಶತ 'ಗೊತ್ತಿಲ್ಲ ಅಥವಾ ಹೇಳಲು ಸಾಧ್ಯವಿಲ್ಲಎಂದು ಹೇಳಿದರು.
ವಯಸ್ಸಿನ ಪ್ರಕಾರ ನಡೆದ ಸಮೀಕ್ಷೆಯ ಪ್ರಚಾರ 18-44 ವರ್ಷ ವಯಸ್ಸಿನ 4,366 (69%) ಸಾಮಾನ್ಯ ಕಾನೂನನ್ನು ಬೆಂಬಲಿಸಿದರೆ, ಶೇಕಡಾ 24 (1,524) ಜನರು ಇಲ್ಲ ಎಂದು ಹೇಳಿದರು. 6% ರಷ್ಟು (405 ಜನರು) ತಮಗೆ ಗೊತ್ತಿಲ್ಲ ಮತ್ತು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 44 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ, ಶೇಕಡಾ 60 ರಷ್ಟು (1,037) ಅವರು ಕಾನೂನನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು, 515 (30%) ಜನರು ಬೆಂಬಲಿಸೋದಿಲ್ಲ ಮತ್ತು ಶೇಕಡಾ 11 (188) ಜನರು ಗೊತ್ತಿಲ್ಲ ಅಥವಾ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications