ಕನ್ಹಯ್ಯಾ ಮಾತಿನ ಬಾಣ, ಲಲನೆಯರ ಬೆಡಗು ಬಿನ್ನಾಣ

Subscribe to Oneindia Kannada

ನವದೆಹಲಿ, ಮಾರ್ಚ್, 05: ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಜೈಲಿನಿಂದ ಹೊರಬಂದ ಕನ್ಹಯ್ಯಾ ಕುಮಾರ್ ಮಾತಿನ ಬಾಣಗಳು, ಫ್ಯಾಷನ್ ವಿನ್ಯಾಸಕಿ ಶಿಪ್ರಾ ಅಪಹರಣ ಮತ್ತು ಪತ್ತೆ. ಸಂಗೀತಕ್ಕೆ ಹೆಜ್ಜೆ ಹಾಕುತ್ತ ಮನಸೆಳೆದ ಬಾಲಿವುಡ್ ನಟಿ ಮಣಿಯರು...ಹೀಗೆ ಹತ್ತಾರು ವಿಭಿನ್ನ ಘಟನೆಗಳನ್ನು ಒಂದೇ ಕಡೆ ನಿಮಗೆ ಕಟ್ಟಿಕೊಡುತ್ತಿದ್ದೇವೆ.

ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ಮಾಡಿದ ಕನ್ಹಯ್ಯಾ ಕುಮಾರ್ ನಾವು ಸತ್ಯಮೇವ ಜಯತೆ ಎಂಬ ತತ್ವವನ್ನೇ ನಂಬಿದ್ದೇವೆ. ಹುತಾತ್ಮ ಸೈನಿಕರ ಬಗ್ಗೆ ಮಾತನಾಡುವವರು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

ಹೃದಯಾಘಾತದಿಂದ ನಿಧನರಾದ ಲೋಕಸಭೆ ಮಾಜಿ ಸ್ಪೀಕರ್ ಪಿಎ ಸಂಗ್ಮಾ ಅವರಿಗೆ ಸಕಲ ಸರ್ಕಾರಿ ಗೌರವಗಳ ಮೂಲಕ ಅಂತಿಮ ನಮನ ಸಲ್ಲಿಕೆ ಮಾಡಲಾಯಿತು.ಪಿಎ ಸಂಗ್ಮಾ ಅವರಿಗೆ ಅಂತಿಮ ನಮನ ಸಲ್ಲಿಕೆ ಮಾಡಲು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸೊಸೆಗೆ ಸಾಂತ್ವನ ಹೇಳಿದರು.

ಕರ್ನಾಟಕದ ರೈತರ ನೆರವಿಗೆ ಧಾವಿಸುವ ಮಾತನಾಡಿದ ರಾಜ್ಯ ಸರ್ಕಾರ ಸಭೆ ಕರೆದು ಮಾತನಾಡುತ್ತೇನೆ ಎಂದು ಹೇಳಿದೆ. ಇತ್ತ ನವಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ರಾಬಿನ್ ಉತ್ತಪ್ಪ. ಬಾಲಿವುಡ್ ನ ಹಿರಿಯ ನಟ ಮನೋಜ್ ಕುಮಾರ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂಭ್ರಮ... ಇನ್ನಷ್ಟು ಸುದ್ದಿಗಳನ್ನು ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ... (ಪಿಟಿಐ ಚಿತ್ರಗಳು)

ನವದಂಪತಿಗೆ ಶುಭವಾಗಲಿ

ನವದಂಪತಿಗೆ ಶುಭವಾಗಲಿ

ನವದಂಪತಿಗಳಾದ ಟೀಂ ಇಂಡಿಯಾ ಹಾಗೂ ಕರ್ನಾಟಕ ತಂಡದ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರು ಟೆನಿಸ್ ಆಟಗಾರ್ತಿ, ದೀರ್ಘಕಾಲದ ಗೆಳತಿ ಶೀತಲ್ ಗೌತಮ್ ಒಟ್ಟಿಗೆ ಹೆಜ್ಜೆ ಹಾಕಿದ್ದು ಹೀಗೆ.

ಮನೋಜ್ ಗೆ ಗೌರವ

ಮನೋಜ್ ಗೆ ಗೌರವ

ಪ್ರತಿಷ್ಠಿತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ಹಿಂದಿ ಚಿತ್ರರಂಗದ ಹಿರಿಯ ನಟ ಮತ್ತು ನಿರ್ದೇಶಕ ಮನೋಜ್​ ಕುಮಾರ್​​ ಭಾಜನರಾಗಿದ್ದಾರೆ. ಚಿತ್ರರಂಗದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ಸಾಧಕರ ಜೀವಮಾನದ ಸಾಧನೆ ಪರಿಗಣಿಸಿ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕನ್ಹಯ್ಯಾ ಮಾತು

ಕನ್ಹಯ್ಯಾ ಮಾತು

ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಜೈಲಿನಿಂದ ಹೊರಬಂದ ಕನ್ಹಯ್ಯಾ ಕುಮಾರ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಆನೆಗಳಿಗೆ ಪೂಜೆ

ಆನೆಗಳಿಗೆ ಪೂಜೆ

ಶಿವರಾತ್ರಿ ಹಿನ್ನೆಲೆಯಲ್ಲಿ ಕೇರಳದದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಆನೆಗಳನ್ನು ಅಲಂಕರಿಸುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ.

ಹೆಜ್ಜೆ ಹಾಕಿದ ಗಲ್ ರಾಣಿ

ಹೆಜ್ಜೆ ಹಾಕಿದ ಗಲ್ ರಾಣಿ

ಕೇರಳದಲ್ಲಿ ನಡೆದ ಫ್ಯಾಷನ್ ವೀಕ್ ವೊಂದರಲ್ಲಿ ಹೆಜ್ಜೆ ಹಾಕಿದ ನಿಕ್ಕಿ ಗಲ್ ರಾಣಿ ಕಂಡಿದ್ದು ಹೀಗೆ..

ಮಿಸ್ ಇಂಡಿಯಾ ಅದಿತಿ

ಮಿಸ್ ಇಂಡಿಯಾ ಅದಿತಿ

ಕೇರಳದ ಕೊಚ್ಚಿಯಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ಗಮನ ಸೆಳೆದ ಮಿಸ್ ಇಂಡಿಯಾ ಅದಿತಿ ರಾಯ್.

ಪ್ರಧಾನಿ ಸಾಂತ್ವನ

ಪ್ರಧಾನಿ ಸಾಂತ್ವನ

ಪಿಎ ಸಂಗ್ಮಾ ಅವರಿಗೆ ಅಂತಿಮ ನಮನ ಸಲ್ಲಿಕೆ ಮಾಡಲು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಸಂಗ್ಮಾ ಸೊಸೆಗೆ ಸಾಂತ್ವನ ಹೇಳಿದರು.

ಅಂತಿಮ ನಮನ

ಅಂತಿಮ ನಮನ

ಹೃದಯಾಘಾತದಿಂದ ನಿಧನರಾದ ಲೋಕಸಭೆ ಮಾಜಿ ಸ್ಪೀಕರ್ ಪಿಎ ಸಂಗ್ಮಾ ಅವರಿಗೆ ಸಕಲ ಸರ್ಕಾರಿ ಗೌರವಗಳ ಮೂಲಕ ಅಂತಿಮ ನಮನ ಸಲ್ಲಿಕೆ ಮಾಡಲಾಯಿತು.

ಸುರಂಗ ಪತ್ತೆ

ಸುರಂಗ ಪತ್ತೆ

ಭಾರತದ ಗಡಿಯಲ್ಲಿ ಪಾಕಿಸ್ತಾನ ಕೊರೆದಿದ್ದ ಸುರಂಗವನ್ನು ಸೈನಿಕರು ಪತ್ತೆಹಚ್ಚಿದ್ದಾರೆ. ಈ ಸುರಂಗದ ಮೂಲಕವೇ ಅನೇಕ ಉಗ್ರರು ದೇಶದ ಒಳಕ್ಕೆ ನುಗ್ಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಜಗತ್ತಿಗೆ ಒಳ್ಳೆಯದಾಗಲಿ

ಜಗತ್ತಿಗೆ ಒಳ್ಳೆಯದಾಗಲಿ

ಪ್ರಾರ್ಥನೆ ಮಾಡಿದ ನಂತರ ಸೂರ್ಯದೇವನಿಗೆ ನಮಸ್ಕರಿಸಿದ ಸಾಧು ಅಲಹಾಬಾದ್ ನಲ್ಲಿ ಕಣ್ಣಿಗೆ ಕಂಡಿದ್ದು ಹೀಗೆ.

ಡಿಸೈನರ್ ಶಿಪ್ರಾ ಪತ್ತೆ

ಡಿಸೈನರ್ ಶಿಪ್ರಾ ಪತ್ತೆ

ನಾಪತ್ತೆಯಾಗಿದ್ದ ಫ್ಯಾಷನ್ ಡಿಸೈನರ್ ಶಿಪ್ರಾ ಗುರ್ ಗಾಂವ್ ನಲ್ಲಿ ಪತ್ತೆಯಾಗಿದ್ದಾರೆ. ನೋಯ್ಡಾದ ಸೆಕ್ಟರ್ 37 ಪ್ರದೇಶದಿಂದ ಸೋಮವಾರದಂದು ನಾಪತ್ತೆಯಾದ ಶಿಪ್ರಾ ಮಲಿಕ್ ಸುಳಿವು ಸಿಕ್ಕಿರಲಿಲ್ಲ.

ರಾಹುಲ್ ಗೆ ಸನ್ಮಾನ

ರಾಹುಲ್ ಗೆ ಸನ್ಮಾನ

ಅಸ್ಸಾಂ ನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಅಂತೂ ಗೆದ್ದೇವು

ಅಂತೂ ಗೆದ್ದೇವು

ಏಷ್ಯಾ ಕಪ್ ನ ಕೊನೆಯ ಟಿ 20 ಪಂದ್ಯದಲ್ಲಿ ಜಯ ದಾಖಲಿಸಿದ ಪಾಕಿಸ್ತಾನದ ಆಟಗಾರರು ಫೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಭಾರತದ ವಿರುದ್ಧ ಪಾಕ್ ಸೋತಿದ್ದಕ್ಕೆ ಪಾಕಿಸ್ತಾನದಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದ್ದರು.

ವೀರ ಪುತ್ರ

ವೀರ ಪುತ್ರ

ಸೇನಾ ಪರೀಕ್ಷೆಯಲ್ಲಿ ಉತ್ತೀರ್ಣನಾದ ಸಹೋದರನನ್ನು ಹಾರೈಸಿದ ಸಹೋದರಿ. ವೀರ ಪುತ್ರನಿಗೆ ಆಕೆ ಮಾಡಿದ ಆಶೀರ್ವಾದದ ಪರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
News In Pics: Actor Nikki Galrani walks the ramp during Kerala Fashion League in Kochi. The mortal remains of former Lok Sabha Speaker PA Sangma is wrapped in Tricolour at his residence in New Delhi.
Please Wait while comments are loading...