ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ದೇಶಾದ್ಯಂತ ಸಂವಿಧಾನ ಶಿಲ್ಪಿಗೆ ನಮನ

|
Google Oneindia Kannada News

ನವದೆಹಲಿ, ಏ. 14: ದೇಶಾದ್ಯಂತ ಮಂಗಳವಾರ ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು. ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್, ವೆಂಕಯ್ಯ ನಾಯ್ಡು ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನವದೆಹಲಿಯಲ್ಲಿ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದರು. ನಾಗರೀಕರು ಭಾರತದ ಸಂವಿಧಾನ ನಿರ್ಮಾತೃವಿಗೆ ಗೌರವ ಸೂಚಿಸಿದರು.[ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಗೆ ಗೂಗಲ್ ನಮನ]

ಡಾ. ಬಿಆರ್ ಅಂಬೇಡ್ಕರ್ ಅವರ ಜನಮದಿನದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಜೈ ಭೀಮ್ ಎಂದು ಪ್ರಧಾನಿ ಮೋದಿ ಸಮಾಜ ಸುಧಾರಕನಿಗೆ ಗೌರವ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಸಂಸದ ಕೆ.ಎಚ್. ಮುನಿಯಪ್ಪ ಹಾಜರಿದ್ದರು. ಕಂಚಿನ ಪದಕ ಗಳಿಸಿ ತವರಿಗೆ ಮರಳಿದ ಭಾರತದ ಹಾಕಿ ತಂಡ ಇನ್ನು ಮುಂತಾದ ಸುದ್ದಿಗಳು ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು)

ಸಂವಿಧಾನ ಶಿಲ್ಪಿಗೆ ನಮನ

ಸಂವಿಧಾನ ಶಿಲ್ಪಿಗೆ ನಮನ

ಅವರ ಜನ್ಮದಿನವನ್ನು ಆಚರಿಸಲಾಯಿತು. ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್, ವೆಂಕಯ್ಯ ನಾಯ್ಡು ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನವದೆಹಲಿಯಲ್ಲಿ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದರು.

ಡಾ. ಭೀಮರಾವ್ ಅಂಬೇಡ್ಕರ್ ಸ್ಮರಣೆ

ಡಾ. ಭೀಮರಾವ್ ಅಂಬೇಡ್ಕರ್ ಸ್ಮರಣೆ

ನವದೆಹಲಿಯ ಸಂಸತ್ ಭವನದ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ನಾಗರೀಕರು ನಮನ ಸಲ್ಲಿಸಿದರು. ಡಾ,. ಬಿ.ಆರ್ . ಅಂಬೇಡ್ಕರ್ ಅವರ 125 ನೇ ಜಯಂತಿ ಪ್ರಯುಕ್ತ ಇಡೀ ದೇಶಾದ್ಯಂತ ಸ್ಮರಣೆ ಮಾಡಕಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ

ಮುಖ್ಯಮಂತ್ರಿ ಸಿದ್ದರಾಮಯ್ಯ ನಮನ

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ವಿಧಾನ ಸೌಧದ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಸಂಸದ ಕೆ.ಎಚ್. ಮುನಿಯಪ್ಪ ಹಾಜರಿದ್ದರು.

ಕಂಚು ಗೆದ್ದು ಬಂದರು

ಕಂಚು ಗೆದ್ದು ಬಂದರು

ಅಜ್ಲಾನ್ ಶಾ ಹಾಕಿ ಕಪ್ ನಲ್ಲಿ ಕಂಚಿನ ಸಾಧನೆ ಮಾಡಿ ಭಾರತಕ್ಕೆ ಆಗಮಿಸಿದ ಹಾಕಿ ತಂಡದ ಆಟಗಾರರು ದೆಹಲಿ ವಿಮಾನ ನಿಲ್ದಾಣದಲ್ಲಿ ಪದಕ ಪ್ರದರ್ಶನ ಮಾಡಿದರು.

ಕಡತ ಬಹಿರಂಗ ಮಾಡಿ

ಕಡತ ಬಹಿರಂಗ ಮಾಡಿ

ಜರ್ಮನಿಯ ಬರ್ಲಿನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಸುರ್ಯಕುಮಾರ್ ಬೋಸ್ ನೇತಾಜಿ ಕಣ್ಮರೆ ಕಡತವನ್ನು ಬಹಿರಂಗ ಮಾಡುವಂತೆ ಪ್ರಧಾನಿಗೆ ಮನವಿ ಮಾಡಿದರು.

ವಿವಿಧ ಭಾರತಿದೂ ಎಫ್.ಎಂ ಬಂತು

ವಿವಿಧ ಭಾರತಿದೂ ಎಫ್.ಎಂ ಬಂತು

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿವಿಧ ಭಾರತಿ(100.1) ಎಫ್.ಎಂ ಗೆ ನವದೆಹಲಿಯಲ್ಲಿ ಚಾಲನೆ ನೀಡಿದರು. ನಿಮಗಿಷ್ಟವಾಗುವ ಗೀತೆಗಳ ಗುಚ್ಛವನ್ನು ವಿವಿಧ ಭಾರತಿಯಲ್ಲಿ ಕೇಳಿ ಆನಂದಿಸಲು ಸಾಧ್ಯವಿದೆ.

ಹೇಗಿದ್ದೀರಿ ಬಂಧುಗಳೇ?

ಹೇಗಿದ್ದೀರಿ ಬಂಧುಗಳೇ?

ವಿದೇಶಿ ಸಂಬಂಧಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ನರೇಂದ್ರ ಮೋದಿ ಜರ್ಮನಿಯ ಬರ್ಲಿನ್ ನಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಿದರು.

ಬೋಲ್ಡ್ ಆಗದವರು ಯಾರು?

ಬೋಲ್ಡ್ ಆಗದವರು ಯಾರು?

ಮುಂಬೈ ನಲ್ಲಿ ನಡೆದ ಉಡುಪು ಮಳಿಗೆ ಉದ್ಘಾಟನೆ ಸಮಾರಂಭದಲ್ಲಿ ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ಕಾಣಿಸಿಕೊಂಡರು.

English summary
News in Pics: Parliament House celebrates Ambedkar Jayanti. Sonia Gandhi, Manmohan Singh and Rajnath Singh participated Ambedkar Jayani celebrations at Parliament House. Prime Minister Narendra Modi with Surya Kumar Bose the grand Nephew Subhash Chander Bose in Berlin on Monday. Here some other Photos with news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X