ದೇಶ-ವಿದೇಶದ ಶುಕ್ರವಾರದ ಚಿತ್ರ ಸುದ್ದಿಗಳು

ಬೆಂಗಳೂರು, ಜುಲೈ 24 : ಲೋಕಸಭೆಯ ಶುಕ್ರವಾರದ ಕಲಾಪವೂ ಯಾವುದೇ ಚರ್ಚೆ ಇಲ್ಲದೇ ಮುಂದೂಡಲ್ಪಟ್ಟಿದೆ. ಭಾರತದ ಹಲವು ರಾಜ್ಯಗಳಲ್ಲಿ ಅವಾಂತರ ತಂದಿದ್ದ ವರುಣ ದೇವ ಈಗ ಪಾಕಿಸ್ತಾನಕ್ಕೆ ಪ್ರವೇಶ ಮಾಡಿದ್ದಾನೆ. ಶುಕ್ರವಾರದ ಚಿತ್ರಗಳ ಸಂಗ್ರಹದಲ್ಲಿ ಇಂತಹ ಹಲವಾರು ಚಿತ್ರಗಳನ್ನು ನೀಡಲಾಗಿದೆ.

ಲಲಿತ್ ಮೋದಿ ಮತ್ತು ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಗದ್ದಲ ಆರಂಭಿಸಿದ ಹಿನ್ನೆಲೆಯಲ್ಲಿ ಸತತ ನಾಲ್ಕವೇ ದಿನವಾದ ಶುಕ್ರವಾರವೂ ಲೋಕಸಭೆ ಕಲಾಪವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಮುಂದೂಡಿದರು.ಈ ವಾರದ ಯಾವುದೇ ಚರ್ಚೆ ನಡೆಯದೇ ಗದ್ದಲಕ್ಕೆ ಕಲಾಪ ಬಲಿಯಾಗಿದೆ.

ಭಾರತದ ಹಲವು ರಾಜ್ಯಗಳಲ್ಲಿ ಅವಾಂತರ ತಂದಿದ್ದ ವರುಣ ದೇವ ಈಗ ಪಾಕಿಸ್ತಾನಕ್ಕೆ ಪ್ರವೇಶ ಮಾಡಿದ್ದಾನೆ. ಭಾರೀ ಮಳೆಯಿಂದಾಗಿ ಪೇಶಾವರ ಜಲಾವೃತವಾಗಿದೆ. ದೆಹಲಿಯಲ್ಲಿ ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ಭಾರತೀಯ ಕಿಸಾನ್ ಯೂನಿಯನ್ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ದೇಶ-ವಿದೇಶದ ಶುಕ್ರವಾರ ಚಿತ್ರಗಳ ಸಂಗ್ರಹ ಇಲ್ಲಿದೆ.... [ಪಿಟಿಐ ಚಿತ್ರಗಳು]

ಗದ್ದಲಕ್ಕೆ ಬಲಿಯಾದ ಕಲಾಪ

ಗದ್ದಲಕ್ಕೆ ಬಲಿಯಾದ ಕಲಾಪ

ಲಲಿತ್ ಮೋದಿ ಮತ್ತು ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಗದ್ದಲ ಆರಂಭಿಸಿದ ಹಿನ್ನೆಲೆಯಲ್ಲಿ ಸತತ ನಾಲ್ಕವೇ ದಿನವಾದ ಶುಕ್ರವಾರವೂ ಲೋಕಸಭೆ ಕಲಾಪವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಮುಂದೂಡಿದರು. ಈ ವಾರದ ಯಾವುದೇ ಚರ್ಚೆ ನಡೆಯದೇ ಗದ್ದಲಕ್ಕೆ ಕಲಾಪ ಬಲಿಯಾಗಿದೆ.

ಎಲ್ಲಿ, ಯಾರು ಕಾಣೆಯಾಗಿದ್ದಾರೆ?

ಎಲ್ಲಿ, ಯಾರು ಕಾಣೆಯಾಗಿದ್ದಾರೆ?

ನವದೆಹಲಿಯ ಜಂತರ್ ಮಂತರ್ ಬಳಿ ಕಂಡು ಬಂದ ದೃಶ್ಯವಿದು. ಮಗುವಿನ ಅಕ್ಕ ಬರೀ ಮಿಸ್ಸಿಂಗ್ ಪೋಸ್ಟರ್‌ಗಳೇ ಕಾಣಿಸುತ್ತಿವೆ. ಎಲ್ಲಿ ಯಾರು ಮಿಸ್ಸಿಂಗ್ ಎಂಬುದಕ್ಕೆ ಉತ್ತರ ವಿಲ್ಲ.

ನಮಗೂ ಸ್ಪಲ್ಪ ಕೊಡ್ರಾಪ್ಪ

ನಮಗೂ ಸ್ಪಲ್ಪ ಕೊಡ್ರಾಪ್ಪ

ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ಭಾರತೀಯ ಕಿಸಾಸ್ ಸಭಾ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಜನರು ಟ್ಯಾಂಕರ್‌ನಲ್ಲಿ ಬಂದ ಕುಡಿಯುವ ನೀರನ್ನು ತುಂಬಿಕೊಂಡರು.

ಒಲ್ಲಾರೂ ಒಟ್ಟಾಗಿ ಬನ್ನಿ

ಒಲ್ಲಾರೂ ಒಟ್ಟಾಗಿ ಬನ್ನಿ

ಮಹಾರಾಷ್ಟ್ರದಲ್ಲಿ ಕಂಡುಬಂದ ಚಿತ್ರವಿದು. ತಮ್ಮ ದೈವವಿರುವ ಜಾಗಕ್ಕೆ ಗುಂಪಾಗಿ ನಡೆದು ಹೋಗುವ ಆಚರಣೆಯನ್ನು ಮರಾಠಿಯಲ್ಲಿ ದಿಂಡಿ ಎನ್ನುತ್ತಾರೆ. ಶಾಲಾ ಮಕ್ಕಳು ದಿಂಡಿ ಆಚರಣೆಗೆ ಹೋಗುವಾಗ ಕಂಡಿದ್ದು ಹೀಗೆ.

ಸಂಸತ್ತಿಗೆ ಬಂದ ಸುಷ್ಮಾ ಸ್ವರಾಜ್

ಸಂಸತ್ತಿಗೆ ಬಂದ ಸುಷ್ಮಾ ಸ್ವರಾಜ್

ಲಲಿತ್ ಮೋದಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಗದ್ದಲ ನಡೆಸುತ್ತಿವೆ. ಶುಕ್ರವಾರದ ಕಲಾಪಕ್ಕೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಮಿಸುವಾಗ ಕಂಡಿದ್ದು ಹೀಗೆ.

ಕಲಾಪ ನಡೆಯಲು ಪ್ರತಿಪಕ್ಷಗಳು ಬಿಡುತ್ತಿಲ್ಲ

ಕಲಾಪ ನಡೆಯಲು ಪ್ರತಿಪಕ್ಷಗಳು ಬಿಡುತ್ತಿಲ್ಲ

ಪ್ರತಿಪಕ್ಷಗಳು ಲೋಕಸಭೆ ಕಲಾಪ ನಡೆಯಲು ಬಿಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಸಂಸದರು ಸಂಸತ್ ಭವನದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ರೈತ ಭರೋಸಾ ಪಾದಯಾತ್ರೆ ಮಾಡಿದ ರಾಹುಲ್

ರೈತ ಭರೋಸಾ ಪಾದಯಾತ್ರೆ ಮಾಡಿದ ರಾಹುಲ್

ಶುಕ್ರವಾರ ಅನಂತಪುರದಲ್ಲಿ ನಡೆದ ರೈತ ಭರೋಸಾ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು.

ಪೇಶಾವರದಲ್ಲಿ ಅಬ್ಬರಿಸಿದ ವರುಣ

ಪೇಶಾವರದಲ್ಲಿ ಅಬ್ಬರಿಸಿದ ವರುಣ

ಪಾಕಿಸ್ತಾನದ ಪೇಶಾವರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+