ಸೋಮವಾರದ ದೇಶ-ವಿದೇಶ ಸುದ್ದಿಗಳ ಚಿತ್ರ ಸಂಪುಟ
ನವದೆಹಲಿ, ಜು. 27: ಉತ್ತರ ಭಾರತದ ವಿವಿಧೆಡೆ ವರುಣನ ಆರ್ಭಟ ಮುಂದುವರಿದಿದೆ. ಅಹಮದಾಬಾದ್, ಪಶ್ಚಿಮ ಬಂಗಾಳ ಮತ್ತು ಜಮ್ಮು ಕಾಶ್ಮೀರದಲ್ಲಿ ಮಳೆ ಆರ್ಭಟಿಸುತ್ತಿದೆ. ಭೂ ಕುಸಿತದ ಪರಿಣಾಮ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಪ್ರೋ ಕಬಡ್ಡಿ ಪಂದ್ಯಾವಳಿಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಕ್ರೀಡಾಭಿಮಾನಿಗಳು ಪ್ರತಿಯೊಂದು ಪಂದ್ಯವನ್ನು ಆಸ್ವಾದಿಸುತ್ತಿದ್ದಾರೆ. ಬಾಲಿವುಡ್ ನಟರು, ಕ್ರೀಡಾಪಟುಗಳು, ರಾಜಕಾರಣಿಗಳು ಪಂದ್ಯದ ಸ್ವಾದ ಸವಿಯುತ್ತಿದ್ದಾರೆ.
ಸೋಮವಾರ ದೇಶ ಮತ್ತು ವಿದೇಶಗಳಲ್ಲಿ ನಡೆದ ಘಟನಾವಳಿಗಳ ಸುತ್ತ ಒಂದು ರೌಂಡ್ ಹಾಕಿ ಬರೋಣ. ದೇಶ ವಿದೇಶದ ಸುದ್ದಿಗಳನ್ನು ಚಿತ್ರಗಳಲ್ಲಿ ನೋಡಿ ಆಸ್ವಾದಿಸಿ...(ಪಿಟಿಐ ಚಿತ್ರಗಳು)

ಕಾವೇರಿದ ಪ್ರೋ ಕಬಡ್ಡಿ
ಪ್ರೋ ಕಬಡ್ಡಿ ಪಂದ್ಯಗಳು ದೇಶದೆಲ್ಲೆಡೆ ಸಾಂಪ್ರದಾಯಿಕ ಕ್ರೇಜ್ ಹುಟ್ಟುಹಾಕಿದೆ. ಜೈಪುರದಲ್ಲಿ ನಡೆದ ಪಂದ್ಯದ ನಂತರ ಪ್ರಶಸ್ತಿ ವಿತರಣೆ ವೇಳೆ ಹಾಜರಿದ್ದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ. ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿ ರಾಜೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಪಡಿಸುತ್ತಿವೆ.

ಅಂಗಳದಲ್ಲಿ ಬಾಲಿವುಡ್ ಜೋಡಿ
ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಮಾಲೀಕ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ದಂಪತಿ ಸಮೇತರಾಗಿ ಪ್ರೋ ಕಬಡ್ಡಿ ಪಂದ್ಯದ ವೇಳೆ ಕಾಣಿಸಿಕೊಂಡರು.

ಎಲ್ಲಿಗೆ ಪಯಣ
ಪಶ್ಚಿಮ ಬಂಗಾಳದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ನಾಗರಿಕರು ಸುರಕ್ಷಿತ ತಾಣ ಅರಸಿ ತೆರಳುತ್ತಿದ್ದಾಗ ಕಂಡು ಬಂದ ದೃಶ್ಯ

ವಾಟರ್ ನಲ್ಲಿ ಆಟೋ
ಅಹಮದಾಬಾದ್ ನಲ್ಲೂ ಮಳೆ ಆರ್ಭಟಿಸುತ್ತಿದ್ದು ರಸ್ತೆ ಮಧ್ಯೆ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಆಟೋಗಳು.

ಬರಿ ಅವಶೇಷ
ಮುಂಬೈನ ಜನವಸತಿ ಪ್ರದೇಶವೊಂದರಲ್ಲಿ ಬಹುಮಹಡಿ ಕಟ್ಟಡವನ್ನು ನೆಲಸಮ ಮಾಡಿದ ನಂತರ ಕಂಡು ಬಂದ ದೃಶ್ಯ.

ಆನೆ ಸವಾರಿ
ಕೋಜಿಕೋಡ್ ನಲ್ಲಿ ನಡೆದ ಬೋಟ್ ರೇಸ್ ನಲ್ಲಿ ಜಯಗಳಿಸಿದ ನ್ಯೂಜಿಲೆಂಡ್ ಜೋಡಿ ಆನೆ ಮೇಲೆ ಏರಿ ತಮ್ಮ ಸಂಭ್ರಮ ಆಚರಿಸಿದ್ದು ಹೀಗೆ.

ಲಾಲು ಪ್ರಸಾದ್ ಗೆ ಧಿಕ್ಕಾರ
ಬಿಹಾರದಲ್ಲಿ ಆರ್ ಜೆಡಿ ಮತ್ತು ಲಾಲೂ ಪ್ರಸಾದ್ ಯಾದವ್ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಸೋಮವಾರ ಕಂಡು ಬಂದ ದೃಶ್ಯ.

ಇದ್ಯಾವ ನೃತ್ಯ?
ಟೊರೊಂಟೋ ದಲ್ಲಿ ನಡೆಯುತ್ತಿದ್ದ ಪಾನ್ ಆಮ್ ಗೇಮ್ಸ್ ಸಮಾರೋಪದಲ್ಲಿ ಕಂಡುಬಂದ ನೃತ್ಯಕ್ಕೆ ನೀವೇ ಒಂದು ಹೆಸರು ಕೊಡಿ.

ಮಲಗು ಮಲಗು ಚಾರುಲತೆ
ಮೂರು ವಾರ ಪ್ರಾಯದ ಬಿಳಿ ಸಿಂಹದ ಮರಿಗಳ ಆರೈಕೆಯಲ್ಲಿ ತೊಡಗಿರುವ ತಾಯಿ ಸಿಂಹ ಬೊರ್ಸೆವ್ ನ ಪ್ರಾಣಿ ಸಂಗ್ರಹಾಲಯದಲ್ಲಿ ಕ್ಯಾಮರಾಕ್ಕೆ ಸೆರೆ ಸಿಕ್ಕಿದ್ದು ಹೀಗೆ.

ಕೃತಿ ಕರಬಂಧ ಕಮಾಲ್
ಬೆಂಗಳೂರಿನಲ್ಲಿ ಆಯೋಜಿಸಿದ್ದ ಫ್ಯಾಷನ್ ಶೋ ಒಂದರಲ್ಲಿ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಬೆಡಗಿ ಕೃತಿ ಕರಬಂಧ ಸೀರೆ ಉಟ್ಟು ಮಾರ್ಜಾಲ ಹೆಜ್ಜೆ ಹಾಕಿದ ಪರಿ.












Click it and Unblock the Notifications