ಮೋದಿ ಪ್ರವಾಸ ಆರಂಭ, ಜನಸಂಘದ ಸ್ಥಾಪಕನಿಗೆ ನಮನ

ನವದೆಹಲಿ,

ಜು.
03:
ಪ್ರಧಾನಿ
ನರೇಂದರ
ಮೋದಿ
ಮತ್ತೆ
ವಿದೇಶ
ಪ್ರವಾಸ
ಕೈಗೊಂಡಿದ್ದಾರೆ.
ರಷ್ಯಾದ
ಉಫಾದಲ್ಲಿ
ನಡೆಯಲಿರುವ
ಶಾಂಘೈ
ಸಹಕಾರ
ಸಂಘದ
ವಾರ್ಷಿಕ
ಸಮಾವೇಶದಲ್ಲಿ
ಭಾಗವಹಿಸಲಿದ್ದು
ಪಾಕಿಸ್ತಾನದ
ಪ್ರಧಾನಿ
ನವಾಜ್
ಶರೀಫ್
ಅವರನ್ನು
ಜುಲೈ
10
ರಂದು
ಭೇಟಿ
ಮಾಡಿ
ಮಾತುಕತೆ
ನಡೆಸಲಿದ್ದಾರೆ.
ನವದೆಹಲಿಯಿಂದ
ತೆರಳಿದ
ಪ್ರಧಾನಿ
ರಷ್ಯಾದ
ತಾಷ್ಕಂಟ್
ತಲುಪಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಜನಸಂಘ

ಸಂಸ್ಥಾಪಕ
ಡಾ.ಶ್ಯಾಮ್
ಪ್ರಸಾದ್
ಮುಖರ್ಜಿಯವರ
ಜನ್ಮದಿನಾಚರಣೆಯನ್ನು
ಬಿಜೆಪಿ
ನಾಯಕರು
ಮತ್ತು
ಕಾರ್ಯಕರ್ತರು
ದೇಶಾದ್ಯಂತ
ಆಚರಣೆ
ಮಾಡಿದರು.
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಟ್ವಿಟ್ಟರ್‌ನಲ್ಲಿ
ಮುಖರ್ಜಿ
ಅವರ
ಸಾಧನೆ
ಅನುಕರಣೀಯ
ಎಂದು
ಟ್ವೀಟ್
ಮಾಡಿ
ನಮನ
ಸಲ್ಲಿಸಿದ್ದಾರೆ.
ಉಳಿದಂತೆ
ದೇಶಾದ್ಯಂತ
ಸೋಮವಾರ
ಅನೇಕ
ಘಟನಾವಳಿಗಳು
ಸಂಭವಿಸಿದವು.
ಅವುಗಳ
ಮೇಲೆ
ಸಣ್ಣ
ಚಿತ್ರಣ
ಇಲ್ಲಿದೆ(ಪಿಟಿಐ
ಚಿತ್ರಗಳು)

id='are-slot-2'
class='oiad
oi-axt
oiadv'>

ನಮನ ಸಲ್ಲಿಸಿದ ಅಮಿತ್ ಶಾ

ನಮನ ಸಲ್ಲಿಸಿದ ಅಮಿತ್ ಶಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನಸಂಘ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಪುಷ್ಪನಮನ ಸಲ್ಲಿಸಿದರು. ಭಾನುವಾರ ಶಾ ನೇತೃತ್ವದಲ್ಲಿ ದಕ್ಷಿಣ ಭಾರತದ ಬಿಜೆಪಿ ಮಹಾಸಂಪರ್ಕ ಅಭಿಯಾನ ಬೆಂಗಳೂರಿನಲ್ಲಿ ನಡೆದಿತ್ತು.

ಎಲ್ ಕೆ ಅಡ್ವಾಣಿ ಹಾಜರಿ

ಎಲ್ ಕೆ ಅಡ್ವಾಣಿ ಹಾಜರಿ

ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಹಿರಿಯ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ನಮನ ಸಲ್ಲಿಸಿದರು.

ಏನಿದು ಗಹನವಾದ ಚರ್ಚೆ?

ಏನಿದು ಗಹನವಾದ ಚರ್ಚೆ?

ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ ವರ್ಷಾಚರಣೆಯಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್, ಹಿರಿಯ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಗಹನವಾದ ಚರ್ಚೆಯಲ್ಲಿ ತೊಡಗಿದ್ದರು.

ಹೋಗಿ ಬರುತ್ತೇನೆ

ಹೋಗಿ ಬರುತ್ತೇನೆ

ಮಧ್ಯ ಏಷ್ಯಾದ ಪ್ರವಾಸಕ್ಕೆ ನವದೆಹಲಿಯಿಂದ ತೆರಳಿದ ಪ್ರಧಾನಿ ನರೇಂದ್ರ ಮೋದಿ. ಪ್ರವಾಸದ ವೇಳೆ ಮೋದಿ ಚೀನಾ, ರಷ್ಯಾ, ಕಜಕಿಸ್ತಾನ, ಕಿರ್ಜಿಸ್ತಾನ, ಉಜಬೆಕಿಸ್ತಾನ ಮತ್ತು ತಜಿಕಿಸ್ತಾನಗಳ ನಾಯಕರನ್ನು ಭೇಟಿ ಮಾಡಿ ಒಕ್ಕೂಟಕ್ಕೆ ಭಾರತವನ್ನು ಸೇರ್ಪಡೆ ಮಾಡಲಿದ್ದಾರೆ.

ತಾಷ್ಕಂಟ್ ತಲುಪಿದ ಪ್ರಧಾನಿ

ತಾಷ್ಕಂಟ್ ತಲುಪಿದ ಪ್ರಧಾನಿ

ನವದೆಹಲಿಯಿಂದ ತೆರಳಿದ ಪ್ರಧಾನಿ ರಷ್ಯಾದ ತಾಷ್ಕಂಟ್ ತಲುಪಿದ್ದು ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಜುಲೈ 10 ರಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಪ್ರಶಸ್ತಿ ಸಂಭ್ರಮ

ಪ್ರಶಸ್ತಿ ಸಂಭ್ರಮ

ಶ್ರೀಲಂಕಾವನ್ನು ಬಗ್ಗುಬಡಿದು ಏಷ್ಯನ್ ಬಾಸ್ಕೆಟ್ ಬಾಲ್ ಟ್ರೋಫಿ ಗೆದ್ದುಕೊಂಡ ಭಾರತ ತಂಡದ ಆಟಗಾರರ ಸಂಭ್ರಮ. ಬೆಂಗಳೂರಿನಲ್ಲಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.

ಮುತ್ತಿಕೊಂಡ ಪತ್ರಕರ್ತರು

ಮುತ್ತಿಕೊಂಡ ಪತ್ರಕರ್ತರು

ಮನೆಯಿಂದ ಹೊರಬಿದ್ದ ಗ್ರೀಕ್ ಹಣಕಾಸು ಸಚಿವ ಯಾನೊಸ್ ವರುಫ್ ಕಿನ್ಸ್ ಅವರನ್ನು ಮುತ್ತಿಕೊಂಡ ಪತ್ರಕರ್ತರು. ಸಾಲದ ಬಿಕ್ಕಟ್ಟು ಎದುರಿಸುತ್ತಿರುವ ಗ್ರೀಸ್ ನಲ್ಲಿ ಜನಮತಗಣನೆ ಮಾಡಲಾಗಿದ್ದು ಶೇ.60.4ರಷ್ಟು ಜನ ವಿದೇಶಗಳು ಹಾಕುವ ಷರತ್ತು ಒಪ್ಪಿಕೊಳ್ಳಬಾರದು ಎಂದು ಹೇಳಿದ್ದಾರೆ.

ಯೋಗ ಪ್ರದರ್ಶನ

ಯೋಗ ಪ್ರದರ್ಶನ

ಪೊಲೀಸ್ ನೇಮಕಾತಿಗೆ ಆಯ್ಕೆಗೊಂಡ ಅಭ್ಯರ್ಥಿಗಳು ಗುರ್ ಗಾವ್ ನಲ್ಲಿ ಯೋಗ ಪ್ರದರ್ಶನ ಮಾಡಿದರು. ಅಂತಾರಾಷ್ಟ್ರೀಯ ಯೋಗ ದಿನದ ನಂತರ ಯೋಗಕ್ಕಿದ್ದ ಪ್ರಾಮುಖ್ಯ ಮತ್ತಷ್ಟು ಹೆಚ್ಚಾಗಿದೆ.

ಲೋಕಾಯುಕ್ತ ನೇಮಕವಾಗಲಿ

ಲೋಕಾಯುಕ್ತ ನೇಮಕವಾಗಲಿ

ಖಾಲಿ ಇರುವ ಲೋಕಾಯುಕ್ತ ಹುದ್ದೆಯನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+