ಚಿತ್ರಗಳಲ್ಲಿ: ಸ್ಫೋಟಿಸಿದ ಜ್ವಾಲಾಮುಖಿ, ನಿಲ್ಲದ ಮಳೆ ಅವಾಂತರ
ನವದೆಹಲಿ, ಡಿಸೆಂಬರ್. 03: ಪ್ರಪಂಚ ಪ್ರತಿದಿನ ಸುದ್ದಿ, ಆಘಾತ, ಅಪಘಾತ, ವಿಕೋಪ, ಸಂಭ್ರಮ ಎಲ್ಲದಕ್ಕೆ ಸಾಕ್ಷಿಯಾಗುತ್ತಿರುತ್ತದೆ. ಮನಸ್ಸಿಗೆ ಕೆಲವು ಸಂಭ್ರಮ ಉಂಟು ಮಾಡಿದರೆ ಇನ್ನು ಕೆಲವು ವಿಷಾದದ ಬೇಗೆ ಹುಟ್ಟುಹಾಕುತ್ತವೆ.
ಪ್ರಪಂಚವೇ ಹಾಗೆ ಒಂದೆಡೆ ಧಾರಾಕಾರ ಮಳೆ ಸುರಿದರೆ ಇನ್ನೊಂದೆಡೆ ಭೀಕರ ಬರಗಾಲ. ಮತ್ತೊಂದೆಡೆ ಜ್ವಾಲಾಮುಖಿ ಸ್ಫೋಟ, ಮಂಜಿನ ಮಳೆ. ಪ್ರಕೃತಿಯ ವೈಚಿತ್ರ್ಯವೇ ಅದು. ಇದೆಲ್ಲವನ್ನು ಒಟ್ಟು ಸೇರಿಸಿ ತಾಳೆ ಹಾಕಿದರೆ ಮಾನವ ಹುಲ್ಲು ಕಡ್ಡಿಗೆ ಸಮಾನ.[ಸದನದಿಂದ ನರೇಂದ್ರ ಮೋದಿ ಎದ್ದು ಹೊರನಡೆದಿದ್ದು ಏಕೆ?]
ಚೆನ್ನೈ ನಲ್ಲಿ ಮಳೆ ಅವಾಂತರ ತಂದಿಟ್ಟ ಫಜೀತಿ, ಗುಜರಾತ್ ನಲ್ಲಿ ಮತ್ತೆ ಚಿಗುರಿಕೊಂಡ ಕಾಂಗ್ರೆಸ್. ಮೋದಿ ತವರಲ್ಲಿ ವಿಜಯೋತ್ಸವ ಆಚರಣೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು. ವಾಯು ಸೇನೆ ದಿನಾಚರಣೆಗೆ ಸೈನಿಕರ ತಾಲೀಮು, ಲಿಯೋನ್ ನಲ್ಲಿ ಬಾಯ್ದೆರೆದದ ಅಗ್ನಿ ಪರ್ವತ ಇನ್ನು ಮುಂತಾದ ಚಿತ್ರಗಳನ್ನು ಸುದ್ದಿಗಳೊಂದಿಗೆ ನೋಡಿಕೊಂಡು ಬನ್ನಿ(ಪಿಟಿಐ ಚಿತ್ರಗಳು)

ನಿವೃತ್ತ ದತ್ತು
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ಎಚ್ ಎಲ್ ದತ್ತು (ಎಡ)ನಿವೃತ್ತರಾಗಿದ್ದು ನವದೆಹಲಿಯಲ್ಲಿ ಬಾರ್ ಕೌನ್ಸಿಲ್ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೂತನ ನ್ಯಾಯಮೂರ್ತಿ ತಿರಾತ್ ಸಿಂಗ್ ಜತೆ ಮಾತುತೆಯಲ್ಲಿ ತೊಡಗಿದ್ದ ದೃಶ್ಯ. ದತ್ತು ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರದಲ್ಲಿಯೂ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.

ಸ್ವಾಗತವೂ ನಿಮಗೆ
ಭಾರತಕ್ಕೆ ಆಗಮಿಸಿದ ಬೆಹರೇನ್ ನ ಶೇಖ್ ರಶೀದ್ ಬಿನ್ ಅಬ್ದುಲ್ಲಾ ಅವರನ್ನು ಹೂಗುಚ್ಛ ನೀಡಿ ಬರಮಾಡೊಕೊಂಡ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್.

ಭರದ ಸಿದ್ಧತೆ
ಭಾರತೀಯ ವಾಯು ಸೇನೆ ಇಂದು ವಾರ ಕಾಲ ವಿವಿಧ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು ಮುಂಬೈನಲ್ಲಿ ತಾಲೀಮು ನಡೆಸಿ ಸೈನಿಕರು.

ಕಾಂಗ್ರೆಸ್ ಸಂಭ್ರಮಾಚರಣೆ
ಗುಜರಾತ್ ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ್ದು ಅಹಮದಾಬಾದ್ ನಲ್ಲಿ ಸಂಭ್ರಮಾಚರಣೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು. ಬಿಜೆಪಿ ಗುಜರಾತ್ ಗ್ರಾಮೀಣರ ಮನ ಗೆಲ್ಲಲು ಈ ಬಾರಿ ವಿಫಲವಾಗಿದೆ.

ಬಾಯ್ದೆರೆದ ಜ್ವಾಲಾಮುಖಿ
ಮಧ್ಯ ಅಮೆರಿಕದ ನಿಕರಾಗುವಾದ ಮೊಮೊಟೊಂಬೋ ಜ್ವಾಲಾಮುಖಿ ಸುಮಾರು 100 ವರ್ಷದನಂತರ ಸ್ಫೋಟಿಸಿದೆ. ಅಲ್ಲಿನ ಆಡಳಿತ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ನಿಲ್ಲದ ಮಳೆ
ತಮಿಳುನಾಡಿನಲ್ಲಿ ಮಳೆ ಅಬ್ಬರಿಸುತ್ತಿದ್ದು ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗಿದೆ. ಅಪಾಯದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

ಆಟೋಗ್ರಾಫ್ ಪ್ಲೀಸ್!
ಮನ್ನಾಸ್ ನಲ್ಲಿ ಇದೀಗ ಚುನಾವಣೆ ಕಾವು, ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತನ್ನ ಬೆಂಬಲಿಗರರೊಬ್ಬರ ಎದೆಯ ಮೇಲೆ ಹಸ್ತಾಕ್ಷರ ಹಾಕಿದ್ದು ಹೀಗೆ.

ಹಳೆಯ ಕಾರುಗಳೊಂದಿಗೆ ಪಯಣ
ಜರ್ಮನಿಯಲ್ಲಿ ಪೋರ್ಡ್ ಆಯೋಜಿಸಿದ್ದ ಹಳೆಯ ಕಾರುಗಳ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯ. ಹಳೆಯ ಕಾರುಗಳ ವೈಭವ ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ

ಸೈನಿಕರ ಶಕ್ತಿ
ಭಾರತೀಯನ ಸೇನೆ ಆಯೋಜಿಸಿರುವ ' ದ್ರಾದ್ ಸಂಕಲ್ಪ' ದಲ್ಲಿ ವೈರಿಗಳ ಮೇಲೆ ದಾಳಿ ಮಾಡಲು ಯಾವ ರೀತಿ ತೆರಳಬೇಕು ಎಂಬುದನ್ನು ತೋರಿಸಿಕೊಟ್ಟ ಯೊಧ ಕಂಡಿದ್ದು ಹೀಗೆ. ರಾಜಸ್ಥಾನದ ಮರುಭೂಮಿಯಲ್ಲಿ ಸೈನ್ಯ ಶಿಬಿರ ಆಯೋಜಿಸಿದೆ.












Click it and Unblock the Notifications