ಬಿಜೆಪಿ ಕಾರ್ಯಕಾರಣಿ: ಮೋದಿ ಮೇಲೆ ಅಡ್ವಾಣಿ ವಾರೆನೋಟ!

Written By:
Subscribe to Oneindia Kannada

ಬೆಂಗಳೂರು, ಜೂನ್ 13: ಅಲಹಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದ್ದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಅನೇಕ ಕೇಂದ್ರ ಸಚಿವರು ಹಾಜರಿದ್ದರು. ಅಡ್ವಾಣಿ ಪ್ರಧಾನಿಯವರನ್ನು ವಾರೆಗಣ್ಣಿನಿಂದ ನೋಡುತ್ತಿರುವ ಚಿತ್ರಕ್ಕೆ ಶೀರ್ಷಿಕೆ ಬರೆಯಲು ಸಾಧ್ಯವಿಲ್ಲ ಬಿಡಿ!

ಐಪಿಎಲ್ ಕ್ರಿಕೆಟ್ ಹಬ್ಬ ಮುಗಿದಿದೆ ಫುಟ್ಬಾಲ್ ಜ್ವರ ಆರಂಭವಾಗಿದೆ. ಯುಇಎಫ್ಎ ಯುರೋಪಿಯನ್ ಚಾಂಪಿಯನ್ ಶಿಪ್ (ಯುರೋ 2016) ಫುಟ್ಬಾಲ್ ಪಂದ್ಯಾವಳಿ ಆರಂಭವಾಗಿದೆ.[ಎಲ್ ಕೆ ಅಡ್ವಾಣಿ ಬೆಂಗಳೂರಿನ ಆ ದಿನಗಳು]

ಘಾನಾದ ಕೋಟೊಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಅಲ್ಲಿನ ಬಾಲಕಿಯಿಂದ ಸ್ವಾಗತ ಸಿಕ್ಕ ಪರಿ. ತಮ್ಮ 90 ನೇ ಜನ್ಮದಿನದ ಸಂಭ್ರಮದಲ್ಲಿ ಜನರೆದುರು ಕಾಣಿಸಿಕೊಂಡ ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್..[ಆಟೋಗ್ರಾಫ್ ಪ್ಲೀಸ್, ಮೋದಿಗೆ ಮುಗಿಬಿದ್ದ ಅಮೆರಿಕ ಸಂಸದರು]

ಶಿಮ್ಲಾದ ಕಾಡುಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಅರಣ್ಯವನ್ನು ಬಲಿಪಡೆಯುತ್ತಿದೆ. ದೇಶದೆಲ್ಲೆಡೆ ಮಾನ್ಸೂನ್ ತನ್ನ ಆರಂಭ ಮಾಡಿದ್ದು ಮಳೆ ಸುರಿಸುತ್ತಿದೆ. ದೇಶ ವಿದೇಶಗಳ ಇನ್ನಷ್ಟು ಸುದ್ದಿಯನ್ನು ಚಿತ್ರಗಳಲ್ಲಿ ನೋಡಿ(ಪಿಟಿಐ ಚಿತ್ರಗಳು)

ವಾರೆನೋಟದಲ್ಲಿ ಏನಿದೆ?

ವಾರೆನೋಟದಲ್ಲಿ ಏನಿದೆ?

ಅಲಹಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಯಾಕೆ ಹೀಗೆ ನೋಡಿದರೋ ಗೊತ್ತಿಲ್ಲ.

ಮುಖ್ಯಮಂತ್ರಿ ಪುಣ್ಯ ಸ್ನಾನ

ಮುಖ್ಯಮಂತ್ರಿ ಪುಣ್ಯ ಸ್ನಾನ

ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರೇಸ್ಕರ್ ಅಲಹಬಾದ್ ನ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.

ಮೋದಿ ನಮನ

ಮೋದಿ ನಮನ

ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಪುತ್ಥಳಿಗೆ ನಮನ ಸಲ್ಲಿಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ. ಲೇಖಕ ಬಾಬು ಕೃಷ್ಣಮೂರ್ತಿ ಚಂದ್ರಶೇಖರ್ ಆಜಾತ್ ಅವರ ಕುರಿತಾಗಿ 'ಅಜೇಯ' ಎಂಬ ಕಾದಂಬರಿ ಬರೆದಿದ್ದಾರೆ.

ಅಶ್ರುತರ್ಪಣ

ಅಶ್ರುತರ್ಪಣ

ಉಪ್ಪಾರ ಹಿಂಸಾಕೃತ್ಯದಲ್ಲಿ ಜೀವ ಕಳೆದುಕೊಂಡವರಿಗೆ ಅವರ ಕುಟುಂಬ ಸದಸ್ಯರು ನವದೆಹಲಿಯಲ್ಲಿ ಅಂತಿಮ ನಮನ ಸಲ್ಲಿಕೆ ಮಾಡಿದರು.

ರಾಣಿ ಜನ್ಮದಿನ

ರಾಣಿ ಜನ್ಮದಿನ

ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ತಮ್ಮ 90ನೇ ಜನ್ಮದಿನದ ವೇಳೆ ಕಾಣಿಸಿಕೊಂಡ ಪರಿ.

 ಮೊಬೈಲ್ ಬಿಡಿಗಡೆ

ಮೊಬೈಲ್ ಬಿಡಿಗಡೆ

ಖಾಸಗಿ ಕಂಪನಿಯೊಂದರ ಮೊಬೈಲ್ ಬಿಡಗಡೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್.

ಗೋಲು ಸಂಭ್ರಮ

ಗೋಲು ಸಂಭ್ರಮ

ತುರ್ಕಿ ಮತ್ತು ಕ್ರೊಯೇಷಿಯಾ ತಂಡದ ನಡುವಿನ ಯುರೋ ಕಪ್ ಫುಟ್ಬಾಲ್ ಪಂದ್ಯದಲ್ಲಿ ಗೋಲು ದಾಖಲಿಸಿದ ನಂತರ ಕ್ರೊಯೇಷಿಯಾ ಲೂಕಾ ಮೊಡ್ರಿಕ್ ಸಂಭ್ರಮಿಸಿದ ಪರಿ.

 ಸ್ವಾಗತವೂ ನಿಮಗೆ

ಸ್ವಾಗತವೂ ನಿಮಗೆ

ಘಾನಾದ ಕೋಟೊಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಅಲ್ಲಿನ ಬಾಲಕಿಯಿಂದ ಸ್ವಾಗತ ಸಿಕ್ಕ ಪರಿ.

ಮೋಡ ಕಟ್ಟಿದೆ

ಮೋಡ ಕಟ್ಟಿದೆ

ದೇಶಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಿದ್ದು ಸಮುದ್ರ ತೀರದಲ್ಲಿ ಮಳೆ ಸುರಿಸುತ್ತಿವೆ. ಬಿಕೆನಾರ್ ನಲ್ಲಿ ಮೋಡಗಳು ಕಟ್ಟಿದ್ದ ದೃಶ್ಯ ಕಂಡಿದ್ದು ಹೀಗೆ.

ಅಯ್ಯೋ ಕಾಡ್ಗಿಚ್ಚು

ಅಯ್ಯೋ ಕಾಡ್ಗಿಚ್ಚು

ಉತ್ತರಾಖಂಡ ಮತ್ತು ನಮ್ಮದೆ ಉತ್ತರ ಕನ್ನಡದಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ಇದೀಗ ಶಿಮ್ಲಾದ ಅರಣ್ಯವನ್ನು ಬಲಿಪಡೆಯುತ್ತಿದೆ. ಸ್ಥಳೀಯ ಆಡಳಿತ ಬೆಂಕಿ ನಂದಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಮಳೆ ಆರ್ಭಟ

ಮಳೆ ಆರ್ಭಟ

ಅಸ್ಸಾಂ ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಗುಹವಾಟಿಯ ರಸ್ತೆಯೊಂದರಲ್ಲಿ ಮಗುಚಿಬಿದ್ದ ವಾಹನಗಳ ಸಾಲು.

ಸನಿಮಾ ಸಂಭ್ರಮ

ಸನಿಮಾ ಸಂಭ್ರಮ

ಮರಾಠಿ ಸಿನಿಮಾ ಸೈರತ್ ನ ಯಶಸ್ಸಿನ ಸಂಭ್ರಮದಲ್ಲಿ ಕಾಣಿಸಿಕೊಂಡ ನಟಿ ರಿಂಕು ರಾಜ್ ಗುರು ಮತ್ತು ನಟ ತೋಷಾರ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Prime Minister Narendra Modi and senior BJP leader Lal Krishna Advani have a chat seated on stage during the party's national executive meet in Allahabad. Croatia's Luka Modric celebrates after scoring his side's first goal during the Euro 2016 Group D soccer match between Turkey and Croatia at the Parc des Princes stadium in Paris.
Please Wait while comments are loading...